ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದು, ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.
ಎನ್ಟಿಆರ್ 30ಯಲ್ಲಿ ನಟಿ ಜಾನ್ವಿ ಕಪೂರ್ ಅವರು ನಟಿಸಲಿದ್ದಾರೆ. ಇದರ ಫಸ್ಟ್ಲುಕ್ ನಟಿ ಶೇರ್ ಮಾಡಿದ್ದಾರೆ. ಇದರಲ್ಲಿ ಜಾನ್ವಿ ಗುಲಾಬಿ ಬಣ್ಣದ ಬ್ಲೌಸ್ ಧರಿಸಿರುವುದನ್ನು ಕಾಣಬಹುದು. ಇದು ಜಾನ್ವಿ ಕಪೂರ್ ಅವರ ಮೊದಲ ಸೌತ್ ಸಿನಿಮಾ ಆಗಿದೆ.
ಜಾನ್ವಿ ಅವರ ತಾಯಿ ಶ್ರೀದೇವಿ ಅವರು ಬಾಲಿವುಡ್ ನಟಿಯಾಗಿ ಮಿಂಚುವ ಮುನ್ನ ದಕ್ಷಿಣ ಚಿತ್ರ ರಂಗದ ನೆಚ್ಚಿನ ನಟಿಯಾಗಿದ್ದರು. ಅವರು ತಮಿಳಿನಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು.
ಜಾನ್ವಿ ಮೊದಲ ಸಿನಿಮಾ ಟಾಲಿವುಡ್ನಲ್ಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಟಿಯ ತಂದೆ, ನಿರ್ಮಾಪಕ ಬೋನಿ ಕಪೂರ್ ಈ ಹಿಂದೆ ಮಾಹಿತಿ ಕೊಟ್ಟಿದ್ದರು.
ಜಾನ್ವಿ ಕಪೂರ್ ಅವರು ಬಾಲಿವುಡ್ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಸೌತ್ ಡಿಬಟ್ ಬಗೆ ಪ್ರೇಕ್ಷಕರು ಎಕ್ಸೈಟ್ ಆಗಿದ್ದಾರೆ.
___

Be the first to comment