ಜನುಮದ ಜಾತ್ರೆ ಚಿತ್ರೀಕರಣ ಮುಕ್ತಾಯ

ಹಲವಾರು ವರ್ಷಗಳಿಂದ ಆಟೋ ಚಾಲಕನಾಗಿದ್ದುಕೊಂಡೇ ಚಿತ್ರರಂಗದಲ್ಲಿಯೂ ತೊಡಗಿಸಿಕೊಂಡಿರುವ ಆಟೋ ಆನಂದ್ ಈಗ ಸ್ವತಂತ್ರವಾಗಿ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ಸೆಟ್ ಬಾಯ್ ನಿಂದ ಹಿಡಿದು ಸಿನಿಮಾ ರಂಗದಲ್ಲಿ ಕೆಲಸಮಾಡಿರುವ ಆಟೋ ಆನಂದ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ. ಜನುಮದ ಜಾತ್ರೆ ಚಿತ್ರದ ಶೂಟಿಂಗ್ ಮುಗಿದು ಇದೀಗ ಸೆನ್ಸಾರ್ ಮನೆಗೆ ಹೋಗಲು ಸಿದ್ದವಾಗಿದೆ. ನಟನಾಗಬೇಕೆಂದು ಬಂದ ಆನಂದ್ ಇದೀಗ ನಿರ್ದೇಶಕರಾಗಿದ್ದಾರೆ. ಒಂದು ಪಕ್ಕಾ ಹಳ್ಳಿ ಸೊಗಡಿನ ಚಿತ್ರ ಇದಾಗಿದ್ದು ಮಲೆ ಮಹದೇಶ್ವರ ಬೆಟ್ಟ, ಮಂಡ್ಯ, ತುಮಕೂರು, ಕೊರಟಗೆರೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಎಲ್ಲಾ ಪ್ರೇಮ ಕಥೆಗಳ ಹಾಗೆ ಇದೂ ಕೂಡ ಒಂದು ಗ್ರಾಮೀಣ ಪ್ರೇಮ ಕಥೆಯಾಗಿದ್ದರೂ, ಚಿತ್ರದ ಕಥೆಯಲ್ಲಿ ಒಂದಷ್ಟು ಹೊಸ ವಿಷಯಗಳಿವೆ. ಪ್ರೇಮಿಗಳು ಮನೆಯವರನ್ನು ಎದುರಿಸಿ ತಮ್ಮ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎಂದು ನಿರ್ದೇಶಕರು ಚಿತ್ರದಲ್ಲಿ ಹೇಳಹೊರಟಿದ್ದಾರೆ.

ಶ್ರೀ ಮಣಿಕುಪ್ಪೆ ಆಂಜನೇಯ ಸ್ವಾಮಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ದೊಡ್ಮನೆ ಮಂಜುನಾಥ್, ಎಂ. ನಿರ್ಮಿಸುತ್ತಿರುವ ಜನುಮದ ಜಾತ್ರೆ ಚಿತ್ರಕ್ಕೆ ವಿನುಮನಸು ಸಂಗೀತ, ಮುಂಜಾನೆ ಮಂಜು ಛಾಯಾಗ್ರಹಣ, ದುರ್ಗಾ ಪಿ.ಎಸ್. ಸಂಕಲನ, ವೈಲೆಂಟ್ ವೇಲು ಸಾಹಸ, ಜೆ.ಡಿ.ನೃತ್ಯ ನಿರ್ದೇಶನವಿದೆ. ಮನದಕುಮಾರ್, ಚೈತ್ರ, ಮಂಡ್ಯ ಕೆಂಪ, ಅಂಜಲಿ, ಮಂಜುನಾಥ್, ಮೈಕ್ರೋಟೆಕ್ ದೇವೇಂದ್ರ, ಭರತ್, ಜಯಂತಿ, ರೇಣುಕಾಂಭ, ಅಂಬರಿ ಪರಮೇಶ್, ಸೂರ್ಯ, ಪ್ರಶಾಂತ್ ಗುಗ್ರಿ, ಚಂದುರೆಡ್ಡಿ, ದಾಕ್ಷಾಯಣಿ, ಗುಣವತಿ, ಮಂಜುಳಹಾಸನ್ ಮುಂತಾದವರ ತಾರಾಬಳಗವಿದೆ.

This Article Has 2 Comments
  1. Pingback: straight from the source

  2. Pingback: sexuality meaning in tagalog

Leave a Reply

Your email address will not be published. Required fields are marked *

Translate »
error: Content is protected !!