Janhvi Kapoor: ಜೂನಿಯರ್ ಎನ್.ಟಿ.ಆರ್. ಚಿತ್ರದಲ್ಲಿ ಜಾಹ್ನವಿ ಭರ್ಜರಿ ಸಂಭಾವನೆ

ಜೂನಿಯರ್ ಎನ್.ಟಿ.ಆರ್. ಚಿತ್ರ NTR 30ರಲ್ಲಿ ನಟಿಸಲು ಜಾಹ್ನವಿ ಕಪೂರ್ ಭರ್ಜರಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಹರಡಿದೆ.

ಜೂನಿಯರ್ ಎನ್.ಟಿ.ಆರ್. ಅವರ ಮುಂದಿನ ಚಿತ್ರದಲ್ಲಿ ಜಾಹ್ನವಿ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಕೊರಟಾಲ ಶಿವ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ.

ಈ ಚಿತ್ರಕ್ಕೆ ಜಾಹ್ನವಿ ಕಪೂರ್ ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದು ಟಾಲಿವುಡ್ ಚಿತ್ರರಂಗ ಅಚ್ಚರಿಗೊಳಗಾಗುವಂತೆ ಮಾಡಿದೆ.

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಹೆಚ್ಚಿನ ಚಿತ್ರಗಳಲ್ಲಿ ನಟಿಸಿಲ್ಲ. ಅವರು ತೆರೆಯ ಮೇಲೆ ಖ್ಯಾತ ನಟರೊಂದಿಗೂ ಕಾಣಿಸಿಕೊಂಡಿಲ್ಲ. ಆದರೆ ಸಂಭಾವನೆ ವಿಚಾರದಲ್ಲಿ ಮಾತ್ರ ಜಾಹ್ನವಿ ಕಪೂರ್ ಬಾಲಿವುಡ್ ನಟಿಯರ ಸರಿ ಸಮಾನವಾಗಿ ನಿಂತು ಹುಬ್ಬೇರುವಂತೆ ಮಾಡಿದ್ದಾರೆ.

ಆರ್ ಆರ್ ಆರ್ ಭರ್ಜರಿ ಯಶಸ್ಸಿನ ಬಳಿಕ ಜೂನಿಯರ್ ಎನ್.ಟಿ.ಆರ್. ಅವರ ಈ ಚಿತ್ರ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಸಿನಿಮಾ ತಂಡ ಬಿಡುಗಡೆ ಮಾಡಿದ ಫಸ್ಟ್ ಲುಕ್ ಪೋಸ್ಟರ್ ನ್ನು ಜಾಹ್ನವಿ ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


—–

Be the first to comment

Leave a Reply

Your email address will not be published. Required fields are marked *

Translate »
error: Content is protected !!