ಕನ್ನಡ ಸಿನಿಮಾ ಪ್ರೇಕ್ಷಕರಲ್ಲಿ ಆಟೊ ಚಾಲಕ ಪ್ರೇಕ್ಷಕ ವರ್ಗ ಮುಖ್ಯವಾದ್ದು. ಸಿನಿಮಾ ನೋಡುವುದರ ಜೊತೆಗೆ ಸಿನಿಮಾ ನಿರ್ಮಾಣ, ನಿರ್ದೇಶನ ಮಾಡುವುದರಲ್ಲಿಯು ಆಟೋ ಚಾಲಕರು ಭಾಗಿಯಾಗುತ್ತಿದ್ದಾರೆ. ಆಟೋ ಆನಂದ್ ನಿರ್ದೇಶನದ ಜನುಮದ ಜಾತ್ರೆ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು.
ಆಟೊ ಚಾಲಕರಾದ ಆಟೋ ಆನಂದ್ ಜನುಮದ ಜಾತ್ರೆ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಸಾಹಿತ್ಯ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ದುಷ್ಟಶಕ್ತಿ ನಾಯಕನ ಕುಟುಂಬಕ್ಕೆ ಮತ್ತು ನಾಯಕನ ಪ್ರೀತಿಗೆ ತೊಂದರೆ ಕೊಡುತ್ತೆ. ಇದರಿಂದ ನಾಯಕ ಪ್ರೀತಿ ಉಳಿಸಿಕೊಳ್ಳುತ್ತಾನಾ ಅಥವಾ ಪ್ರೀತಿ ಹಾಳಾಗುತ್ತಾ ಅನ್ನೋದೇ ಕಥೆ ಎಂದ ಆಟೊ ಆನಂದ ತಿಳಿಸಿದರು.
ನಿರ್ಮಾಪಕರಾದ ದೊಡ್ಮನೆ ಮಂಜುನಾಥ್. ನಿರ್ದೇಶಕರು ಜನುಮದ ಜಾತ್ರೆ ಕಥೆಯನ್ನು ಹೇಳಿ ಇದೊಂದು ಹಳ್ಳಿ ಸೊಗಡಿನ ಕಥೆ ಸಿನಿಮಾ ಮಾಡಿದ್ರೆ ಚೆನ್ನಾಗಿರುತ್ತೆ ಅಂತ ಹೇಳಿದ್ದರಿಂದ ನಿರ್ಮಾಣ ಮಾಡಿದ್ದೇನೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದಿದ್ದಾರೆ.
ನಾಯಕನಾಗಿ ನಟಿಸಿರುವ ಮದನ್ ಕುಮಾರ್, ಹಳ್ಳಿಕಥೆಯ ಜೊತೆಗೆ ಒಂದು ಕ್ಯೂಟ್ ಲವ್ ಸ್ಟೋರಿ ಇದೆ. ಸಂಬಂಧಗಳ ಬೆಲೆಯನ್ನು ಸಿನಿಮಾ ಹೇಳುತ್ತದೆ ಎಂದರೆ, ನಾಯಕಿ ಚೈತ್ರಾ ಹೊಸಬರಿಗೆ ಅವಕಾಶ ಕೊಟ್ಟಿರುವ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಧನ್ಯವಾದ. ಇಡೀ ಕುಟುಂಬ ಕುಳಿತು ನೋಡುವ ಚಿತ್ರವಾಗಿದೆ ಜನುಮದ ಜಾತ್ರೆ. ನಮ್ಮ ಈ ಹೊಸ ತಂಡವನ್ನು ಪ್ರೋತ್ಸಾಹಿ ಎಂದು ಮನವಿ ಮಾಡಿದರು. ಆಟೊ ಚಾಲಕರಾದ ಮಂಡ್ಯ ಕೆಂಪ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಜನಪದ ಜಾತ್ರೆ ಹಾಡುಗಳನ್ನು ಹೊರತಂದಿರುವ ಲಹರಿ ಸಂಸ್ಥೆಯ ವೇಲು, ದೇವೇಂದ್ರ ರೆಡ್ಡಿ ನಾಗಾಭರಣ ಹಾಗೂ ನಟ ನವೀನ್ ಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹಾಡುಗಳನ್ನು ಬಿಡುಗಡೆ ಮಾಡಿದರು. ಜೊತೆಗೆ ಜನುಮದ ಜಾತ್ರೆ ಅಕ್ಷಯ ಪಾತ್ರೆ ಆಗಲಿ ಎಂದು ಚಿತ್ರ ತಂಡದ ಯಶಸ್ಸಿಗೆ ಶುಭ ಹಾರೈಸಿದರು. ತೋರಿಸಲಾದ ಮಾದೆeಶ ಮತ್ತು ಅಣ್ಣಮ್ಮ ದೇವಿಯ ಹಾಡುಗಳು ಗಮನ ಸೆಳೆಯುತ್ತವೆ.
Be the first to comment