‘ಜನ ನಾಯಗನ್’ ಕೊನೆಯ ಸಿನಿಮಾ ಎಂದ ವಿಜಯ್

‘ಜನ ನಾಯಗನ್’ ತಮ್ಮ ಜೀವನದ ಕೊನೆಯ ಚಿತ್ರ ಎಂದು ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್  ಸ್ಪಷ್ಟಪಡಿಸಿದ್ದಾರೆ.

ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ  ಮಲೇಷ್ಯಾದಲ್ಲಿ ಭರ್ಜರಿಯಾಗಿ ನಡೆಯಿತು.  ಅದ್ಧೂರಿ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ವಿಜಯ್ ,  ‘ಜನರು ಚಿತ್ರಮಂದಿರಗಳಿಗೆ ಬಂದು ನನ್ನ ಪರವಾಗಿ ನಿಲ್ಲುತ್ತಾರೆ. ಅದಕ್ಕಾಗಿಯೇ ನಾನು ಮುಂದಿನ 30-33 ವರ್ಷಗಳ ಕಾಲ ಅವರ ಪರವಾಗಿ ನಿಲ್ಲಲು ಸಿದ್ಧನಿದ್ದೇನೆ. ಈ ಅಭಿಮಾನಿಗಳಿಗಾಗಿಯೇ ನಾನು ಸಿನೆಮಾದಿಂದ ದೂರ ಸರಿಯುತ್ತಿದ್ದೇನೆ’ ಎಂದು ಹೇಳಿದರು.

‘ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಅಭಿಮಾನಿಗಳಿಗಾಗಿ ನಾನು ನನ್ನ ಪ್ರೀತಿಯ ಸಿನಿಮಾವನ್ನೇ ತ್ಯಜಿಸುತ್ತಿದ್ದೇನೆ. ನಾನು ಎಲ್ಲಾ ರೀತಿಯ ಟೀಕೆಗಳನ್ನು ಎದುರಿಸಿದ್ದೇನೆ.  ಅಭಿಮಾನಿಗಳು 33 ವರ್ಷಗಳಿಂದ ನನ್ನೊಂದಿಗೆ ಬಂಡೆಯಂತೆ ನಿಂತರು. ನಾನು ಒಂದು ಸಣ್ಣ ಮರಳಿನ ಕೋಟೆಯನ್ನು ನಿರ್ಮಿಸಲು ಚಿತ್ರರಂಗಕ್ಕೆ ಬಂದೆ.  ಆದರೆ ನೀವು ನನಗೆ ಒಂದು ಅರಮನೆಯನ್ನು ಕೊಟ್ಟಿದ್ದೀರಿ. ಈಗ ವಿಜಯ್ ಎತ್ತರವಾಗಿ ನಿಂತು ನನಗಾಗಿ ತುಂಬಾ ಮಾಡಿದ ಅಭಿಮಾನಿಗಳಿಗೆ ತನ್ನ ಋಣವನ್ನು ತೀರಿಸುತ್ತಾನೆ’ ಎಂದು ಘೋಷಿಸಿದರು.

ದಳಪತಿ ವಿಜಯ್ ತಮ್ಮ 10ನೇ ವಯಸ್ಸಿನಲ್ಲಿ “ವೆಟ್ರಿ” (1984) ಎಂಬ ತಮಿಳು ಚಲನಚಿತ್ರದಲ್ಲಿ ಬಾಲ ಕಲಾವಿದನಾಗಿ  ವೃತ್ತಿಜೀವನವನ್ನು ಪ್ರಾರಂಭಿಸಿದರು.  1992ರಲ್ಲಿ 18ನೇ ವಯಸ್ಸಿನಲ್ಲಿ ನಲೈಯ ತೀರ್ಪು ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು. 41 ವರ್ಷಗಳ ವೃತ್ತಿಜೀವನದಲ್ಲಿ ವಿಜಯ್ ಸುಮಾರು 80 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ಜನ ನಾಯಗನ್’  ಚಿತ್ರವನ್ನು ಎಚ್. ವಿನೋದ್ ನಿರ್ದೇಶಿಸಿದ್ದಾರೆ. ಈ ಚಿತ್ರ  2026ರ ಜನವರಿ 9ರಂದು ಅದ್ಧೂರಿಯಾಗಿ ತೆರೆ ಕಾಣಲಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!