ಪ್ರಧಾನಿ ನರೇಂದ್ರ ಮೋದಿ 2016ರಲ್ಲಿ 500 ಹಾಗೂ 1000 ರೂ. ನೋಟುಗಳನ್ನು ಅಮಾನ್ಯೀಕರಣಗೊಳಿಸಿದಾಗ ಜನಸಾಮಾನ್ಯರು ಏನೆಲ್ಲಾ ಕಷ್ಟ ಅನುಭವಿಸಿದರು ಎಂಬುದನ್ನು ಜನ್‍ಧನ್ ಚಿತ್ರದ ಮೂಲಕ ನಿರ್ದೇಶಕ ನಾಗಚಂದ್ರ ಹೇಳಲು ಹೊರಟಿದ್ದಾರೆ.ಮೊನ್ನೆ ಈ ಚಿತ್ರದ ಹಾಡುಗಳ ಸಿ.ಡಿ. ಹಾಗೂ ಟ್ರೇಲರ್ ಅನ್ನು ರಿಲೀಸ್ ಮಾಡಲಾಯಿತು.
ಧರ್ಮಕೀರ್ತಿರಾಜ್, ಲಹರಿ ವೇಲು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಕಾರ್ಯಕ್ರಮದ ಆರಂಭ ಹಾಗೂ ಮುಕ್ತಾಯದ ವೇಳೆ ಗಿಡಕ್ಕೆ ನೀರೆರೆದು ವೃಕ್ಷಪ್ರೇಮವನ್ನು ಮೆರೆದರು.
ಜನ್ ಅಂದರೆ ಸಾಮಾನ್ಯ ಧನ್ ಎಂದರೆ ಶ್ರೀಮಂತ ಎಂಬ ಅರ್ಥ ಕೊಡುವ ಈ ಚಿತ್ರಕ್ಕೆ ಬೆಂಗಳೂರು ಟು ಚಿತ್ರದುರ್ಗ ಎಂಬ ಸಬ್‍ಟೈಟಲ್ ಇರುವುದೇ ಅಲ್ಲದೆ ನೋಟು ಅಮಾನ್ಯೀಕರಣವಾದಾಗ ಏನೆಲ್ಲಾ ಅನಾಹುತುಗಳಾದವು ಎಂಬುದನ್ನು ಕೂಲಂಕಶವಾಗಿ ಸಂಗ್ರಹಿಸಿಕೊಂಡು ಈ ಚಿತ್ರದ ಕತೆಯನ್ನು ಹೇಳಲಾಗಿದೆ, ಒಂದು ದಿನದಲ್ಲಿ ನಡೆಯುವ ಈ ಕಥೆಯ ದ್ವಿತೀಯಾರ್ಧದ ಒಂದು ದೃಶ್ಯ ನೋಡದೆ ಇದ್ದರೂ ಮುಂದಿನ ಸನ್ನಿವೇಶಗಳು ಅರ್ಥವಾಗುವುದಿಲ್ಲ.
ನಟ ಸುನೀಲ್ ಮಾತನಾಡಿ, ಎಂಎಸ್ಸಿ ಪದವಿ ಪಡೆದಿರುವ ನಾನು ಈ ಚಿತ್ರದ ಮೂಲಕ ನಾಯಕನಟನಾಗಿದ್ದೇನೆ, ಇಲ್ಲಿ ಕಥೆಯೇ ಹೀರೋ, ಚಿತ್ರಕಥೆಯೇ ಹೀರೋಯಿನ್ ನಮ್ಮ ಉಳಿಸಿ, ಬೆಳೆಸಿ ಎಂದು ಮನವಿ ಮಾಡಿದರು.ನಟಿ ರಚನಾ ಮಾತನಾಡಿ, ಜನ್‍ಧನ್ ನಾನು ನಟಿಸುತ್ತಿರುವ ಮೊದಲ ಚಿತ್ರವಾದರೂ ಇದರಲ್ಲಿ ವಿಶೇಷ ಪಾತ್ರ ಸಿಕ್ಕಿದೆ, ಈ ಫಿಲಂನಿಂದ ಅಭಿನಯದ ಬಗ್ಗೆ ಸಾಕಷ್ಟು ತಿಳಿದುಕೊಂಡೆ, ಪಯಣದ ಹಿನ್ನಲೆ ಇರುವ ಕಥೆ ಇದರಲ್ಲಿದೆ ಎಂದು ಹೇಳಿದರು.
ನಿರ್ದೇಶಕ ನಾಗಚಂದ್ರ ಮಾತನಾಡಿ, ನೋಟು ಅಪನಗದೀಕರಣವಾದ ಜನರು ಅನುಭವಿಸಿದ ನೈಜ ಸಮಸ್ಯೆಗಳನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ, ಈ ಚಿತ್ರದ ಹಾಡುಗಳನ್ನು ಫುಟ್ ಪಾತ್ ಮೇಲೆ ಪುಸ್ತಕ ಮಾರುವ ಯಲ್ಲಪ್ಪ ಎಂಬುವವರಿಂದ ಬರೆಸಿದ್ದೇವೆ ಎಂದು ಹೇಳಿದರು.ಲಹರಿ ವೇಲು ಮಾತನಾಡಿ, ಅಮಾಣ್ಯೀಕರಣ ಸಂದರ್ಭದಲ್ಲಿ ಸಾಮಾನ್ಯರಿಗೆತೊಂದರೆಆಗಿಲ್ಲ. ಶ್ರೀಮಂತರು, ತೆರಿಗೆ ಪಾವತಿಸದವರಿಗೆ ಅನಾನುಕೂಲವಾಯಿತು.
ನಿರ್ಮಾಪಕರ ಸಿನಿಮಾಕ್ಕೆಜನ ಜಾಸ್ತಿ ಬಂದು,ಧನ ಹೆಚ್ಚು ಬರಲೆಂದು ಶುಭಹಾರೈಸಿದರು.ಕತೆ, ನಿರ್ದೇಶನ, ನಿರ್ಮಾಪಕರ ಜವಾಬ್ದಾರಿಯನ್ನು ಮರಡಿಹಳ್ಳಿ ನಾಗಚಂದ್ರ ಅವರೇ ವಹಿಸಿಕೊಂಡಿದ್ದರೆ, ಟಾಪ್‍ಸ್ಟಾರ್ ರೇಣು ಸಂಗೀತ, ವಿಕ್ಕಿ, ಮರಡಿ ನಾಗಚಂದ್ರ ಸಾಹಿತ್ಯ ಚಿತ್ರಕ್ಕಿದ್ದು ಬೆಂಗಳೂರು, ಚಿತ್ರದುರ್ಗ, ಸಿರಾ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ,ನಿರ್ದೇಶಕನಾಗಿ ಅರುಣ್, ಖಳನಾಗಿ ಸುಮನ್‍ಶರ್ಮ, ಜಯಲಕ್ಷ್ಮೀ ಮುಂತಾದವರ ನಟನೆ ಇದೆ.
ಟಾಪ್‍ಸ್ಟಾರ್‍ರೇಣು ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕುವರಯಲ್ಲಪ್ಪ, ಗೂರವನಹಳ್ಳೀ ಮಹಾಲಕ್ಷ್ಮೀ ಅಮ್ಮನ ಮೊಮ್ಮಗಳಾದ ಶ್ರೀಲಕ್ಷ್ಮೀಪ್ರಸನ್ನ ದೀಪೋತ್ಸವ ಲಕ್ಷ್ಮೀ ದೀಪೋತ್ಸವ ಕಂಠದಾನ ಮಾಡುವ ಜೊತೆಗೆ ಹಾಡಿನಲ್ಲಿ ಕಾಣಿಸಿಕೊಂಡಿರುವುದು ಮತ್ತೊಂದು ಹಿರಿಮೆಯಾಗಿದೆ.
Pingback: Digital Transformation Companies