ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಚಿತ್ರದ ಲಿರಿಕಲ್ ಹಾಡು ಇಂದು ಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ ರಿಲೀಸ್ ಆಗಿದೆ.
ಬಹಳ ಭಿನ್ನವಾದ ಅಪ್ಪುವಿನ ‘ಟ್ರೇಡ್ಮಾರ್ಕ್’ ಇರುವ ಹಾಡಿದು. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿಯೇ ಹಾಡು ಅಪಾರ ವೀಕ್ಷಣೆ ಗಳಿಸುತ್ತಿದ್ದು, ಅಭಿಮಾನಿಗಳ ಮನಸೂರೆಗೊಂಡಿದೆ. ಎಂಸಿ ವಿಕ್ಕಿ, ಅದಿತಿ ಸಾಗರ್, ಚಂದನ್ ಶೆಟ್ಟಿ, ಶರ್ಮಿಳಾ, ಯುವರಾಜ್ಕುಮಾರ್ ಹಾಗೂ ಚರಣ್ರಾಜ್ ಈ ಗೀತೆಯನ್ನು ಹಾಡಿದ್ದಾರೆ. ಚೇತನ್ ಕುಮಾರ್ ಬರೆದಿರುವ ಸಾಹಿತ್ಯಕ್ಕೆ ಚರಣ್ರಾಜ್ ಸಂಗೀತ ಸಂಯೋಜಿಸಿದ್ದಾರೆ. ‘ಇದು ಕೇವಲ ಹಾಡಲ್ಲ, ಎಲ್ಲಾ ಅಭಿಮಾನಿಗಳ ದನಿಯಿದು’ ಎಂದು ಹಾಡಿನ ಪ್ರಾರಂಭದಲ್ಲೇ ಸಾಲುಗಳು ಬರುತ್ತವೆ. ಅದಕ್ಕೆ ತಕ್ಕಂತೆ ಹಾಡು ಕೂಡ ಮೂಡಿಬಂದಿದೆ.
ಸಾಮಾನ್ಯವಾಗಿ ಲಿರಿಕಲ್ ಸಾಂಗ್ಗಳಿಗೆ ಒಂದು ಸಿದ್ಧಸೂತ್ರವನ್ನು ಫಾಲೋ ಮಾಡಲಾಗುತ್ತದೆ. ಸಿನಿಮಾದ ಸ್ಟಿಲ್ಗಳನ್ನು ಹಾಕಿ, ಹಿನ್ನೆಲೆಯಲ್ಲಿ ಹಾಡನ್ನು ಹಾಕಲಾಗುತ್ತದೆ. ಆದರೆ, ಜೇಮ್ಸ್ನ ‘ಟ್ರೇಡ್ಮಾರ್ಕ್’ ಇದಕ್ಕಿಂತ ಭಿನ್ನವಾಗಿದೆ. ‘ಟ್ರೇಡ್ಮಾರ್ಕ್ ಸಾಂಗ್ಅನ್ನು 5 ಗಾಯಕರು ಹಾಡಿದ್ದಾರೆ. ಫೋಟೋ ಮೇಲೆ ಲಿರಿಕ್ಸ್ ಹಾಕಿ ರಿಲೀಸ್ ಮಾಡುವ ಹಾಗೆ ಮಾಮೂಲಿಯಾಗಿ ಚಿತ್ರತಂಡ ಈ ಹಾಡನ್ನು ತಯಾರಿಸಿಲ್ಲ. ಪಿಆರ್ಕೆ ಯುಟ್ಯೂಬ್ನಲ್ಲಿ ‘ಜೇಮ್ಸ್’ನ ‘ಟ್ರೇಡ್ಮಾರ್ಕ್’ ಹಾಡಿನ ಕನ್ನಡ ಅವತರಣಿಕೆ ರಿಲೀಸ್ ಆಗಿದೆ. ಒಟ್ಟು 5 ಭಾಷೆಗಳಲ್ಲಿ ಈ ಹಾಡು ರಿಲೀಸ್ ಆಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಹಾಡಿಗೆ ಯುವರಾಜ್ಕುಮಾರ್ ಧ್ವನಿ ನೀಡಿರೋದು ವಿಶೇಷ. ಅಷ್ಟೇ ಅಲ್ಲ ಸ್ಯಾಂಡಲ್ವುಡ್ನ ಮುಂಚೂಣಿಯ ನಾಯಕಿಯರಾದ ರಚಿತಾ ರಾಮ್, ಆಶಿಕಾ ರಂಗನಾಥ್ ಹಾಗೂ ಶ್ರೀಲೀಲಾ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.
ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿರುವ ‘ಜೇಮ್ಸ್’ಗೆ ಕಿಶೋರ್ ಪತ್ತಿಕೊಂಡ ಬಂಡವಾಳ ಹೂಡಿದ್ದಾರೆ. ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಶರತ್ ಕುಮಾರ್, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಮೊದಲಾದವರು ಬಣ್ಣಹಚ್ಚಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಜೇಮ್ಸ್ ರಿಲೀಸ್ ಆಗಲಿದೆ. ಪುನೀತ್ ಜನ್ಮದಿನವಾದ ಮಾರ್ಚ್ 17ರಂದು ಜೇಮ್ಸ್ ತೆರೆಗೆ ಬರಲಿದೆ.
ಜೇಮ್ಸ್’ನಲ್ಲಿ ನಾಯಕಿಯಾಗಿ ತಮಿಳು ನಟಿ ಪ್ರಿಯಾ ಆನಂದ್ ನಟಿಸಿದ್ದಾರೆ. ‘ರಾಜಕುಮಾರ’ ಚಿತ್ರದಲ್ಲಿ ಪುನೀತ್ ತಂದೆಯಾಗಿ ಅಭಿನಯಿಸಿದ್ದ ಹಿರಿಯ ತಮಿಳು ನಟ ಶರತ್ ಕುಮಾರ್ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರಕ್ಕೆ ಎ. ಹರ್ಷ ಕೊರಿಯೋಗ್ರಫಿ, ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿ ನಿರ್ದೇಶಿಸಿದ್ದಾರೆ. ಕಿಶೋರ್ ಪತಿಕೊಂಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಚರಣ್ ರಾಜ್ ಸಂಗೀತ ಸಂಯೋಜನೆ, ಶ್ರೀಶ ಛಾಯಾಗ್ರಹಣ, ರವಿಸಂತೆ ಹೈಕ್ಲು ಕಲಾ ನಿರ್ದೇಶನ, ದೀಪು ಎಸ್.ಕುಮಾರ್ ಸಂಕಲನ ಇದೆ.
ಈ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು ಮತ್ತು ಮುಕೇಶ್ ರಿಷಿ ಸೇರಿದಂತೆ ದೊಡ್ಡ ತಾರಾಗಣ ನಟಿಸಿದೆ.
__
Be the first to comment