ಮಾರ್ಚ್ 11ಕ್ಕೆ ‘ಜೇಮ್ಸ್’ ಚಿತ್ರದ ಹೀರೋ ಇಂಟ್ರೊಡಕ್ಷನ್ ಹಾಡು ರಿಲೀಸ್ ಆಗಲಿದೆ.
ಪುನೀತ್ ನಟನೆಯ ಕೊನೆಯ ಚಿತ್ರದಲ್ಲಿ ಅಪ್ಪು ಡಾನ್ಸ್ ನೋಡಲು ಅಭಿಮಾನಿ ಬಳಗ ಕಾತರವಾಗಿದೆ. ಇಂಟ್ರೊಡಕ್ಷನ್ ಹಾಡು ಎಂದರೆ ಅಲ್ಲಿ ಅಪ್ಪು ಅವರ ಅದ್ದೂರಿ ಡಾನ್ಸ್ ಇರುತ್ತೆ. ಜೊತೆಗೆ ಭಿನ್ನ, ವಿಭಿನ್ನ ಸ್ಟೆಪ್ಸ್ ಇರುತ್ತೆ. ಹಾಗಾಗಿ ಈ ಹೀರೋ ಇಂಟ್ರೊಡಕ್ಷನ್ ಹಾಡಿನ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಚಂದನ್ ಶೆಟ್ಟಿ ಇತ್ತೀಚೆಗೆ ಈ ಹಾಡಿನ ಎರಡು ಸಾಲುಗಳನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೇ ಮಾರ್ಚ್ 17 ರಂದು ಜೇಮ್ಸ್ ತೆರೆಗೆ ಬರುತ್ತಿದೆ. ಅಂದು ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಆಗಿದ್ದು, ಸಿನಿಮಾದ ಜೊತೆಗೆ ಅಪ್ಪು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.
ಜೇಮ್ಸ್’ ತಂಡ ಈಗಾಗಲೇ ಮೊದಲ ಹಂತದಲ್ಲಿ ಸುಮಾರು 130ಕ್ಕೂ ಅಧಿಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ತಾಲೂಕು ಸೆಂಟರ್‌ಗಳಲ್ಲೂ ‘ಜೇಮ್ಸ್’ ರಿಲೀಸ್ ಆಗಲಿದೆ. ಯೂರೋಪ್‌ನಲ್ಲಿ ರಿಲೀಸ್ ಆಗುತ್ತಿರುವ ಚಿತ್ರಮಂದಿರಗಳ ಪಟ್ಟಿ ಈಗಾಗಲೇ ರಿಲೀಸ್ ಆಗಿದೆ. ಸದ್ಯ ಕರ್ನಾಟಕದಲ್ಲಿ 400ಕ್ಕೂಅಧಿಕ ಚಿತ್ರಮಂದಿರಗಳಲ್ಲಿ ಜೇಮ್ಸ್ ಬಿಡುಗಡೆಯಾಗಲಿದೆ.
ಅಭಿಮಾನಿಗಳು ‘ಜೇಮ್ಸ್’ ಸಿನಿಮಾ ಬಿಡುಗಡೆ, ಅಪ್ಪು ಹುಟ್ಟುಹಬ್ಬದ ಅಂಗವಾಗಿ ಎರಡು ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಿದ್ದಾರೆ. ಈ ಹೆಲಿಕಾಪ್ಟರ್ ಮೂಲಕ ವೀರೇಶ್ ಚಿತ್ರಮಂದಿರ, ಪ್ರಸನ್ನ ಹಾಗೂ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ವೀರೇಶ್ ಹಾಗೂ ಪ್ರಸನ್ನ ಚಿತ್ರಮಂದಿರಕ್ಕೆ ಒಂದು ಹೆಲಿಕಾಪ್ಟರ್ ಹಾಗೂ ಕಂಠೀರವ ಸ್ಟುಡಿಯೋ ಮತ್ತೊಂದು ಹೆಲಿಕಾಪ್ಟರ್ ಮೂಲಕ ಹೂವಿನ ಮಳೆಯನ್ನು ಸುರಿಸಲು ಸಿದ್ಧತೆ ನಡೆಸಿದ್ದಾರೆ.
___






Be the first to comment