ಹಾಲಿವುಡ್ನ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವರು ‘ಘೋಸ್ಟ್ಸ್ ಆಫ್ ಹಿರೋಶಿಮಾ’ ಕೃತಿ ಆಧರಿಸಿ ಹಿರೋಶಿಮಾ ಅಣುಬಾಂಬ್ ದಾಳಿ ಕುರಿತು ಹೊಸ ಸಿನಿಮಾ ಘೋಷಿಸಿದ್ದಾರೆ.
‘ಟೈಟಾನಿಕ್ ಬಳಿಕ ನನಗೆ ಇಷ್ಟು ಆಕರ್ಷಕವಾದ ಕಥೆ ಸಿಕ್ಕಿರಲಿಲ್ಲ. ಶೀಘ್ರದಲ್ಲೇ ನಾನು ಇದನ್ನು ನಿರ್ದೇಶಿಸುತ್ತೇನೆ’ ಎಂದು ಜೇಮ್ಸ್ ಕ್ಯಾಮೆರಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
1945ರ ಆಗಸ್ಟ್ 6ರಂದು ಹಿರೋಶಿಮಾ ನಗರದ ಮೇಲೆ ಅಣುಬಾಂಬ್ ಹಾಕಲಾಗಿತ್ತು. ಆಗಸ್ಟ್ 9ರಂದು ನಾಗಸಾಕಿ ನಗರದ ಮೇಲೆ ಅಣುಬಾಂಬ್ ದಾಳಿ ನಡೆಯಿತು. ಆ ಘಟನೆ ನಡೆದು 80 ವರ್ಷ ಕಳೆದಿದೆ. ರಿಯಲ್ ಘಟನೆ ಆಧರಿಸಿ ‘ಟೈಟಾನಿಕ್’ ಸಿನಿಮಾ ಮೂಡಿ ಬಂದಿತ್ತು. ಮತ್ತೆ ನೈಜ ಘಟನೆ ಆಧಾರಿತ ಸಿನಿಮಾ ಮಾಡಲು ಜೇಮ್ಸ್ ಕ್ಯಾಮೆರಾನ್ ಅವರಿಗೆ ಹಿರೋಶಿಮಾದ ಕಥೆಯೇ ಸೂಕ್ತ ಎಂದು ಅನಿಸಿದೆ.
ಜೇಮ್ಸ್ ಕ್ಯಾಮೆರಾನ್ ಅವರು ‘ಟರ್ಮಿನೇಟರ್’, ‘ಟೈಟಾನಿಕ್’, ‘ಅವತಾರ್’ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದಾರೆ. ‘ಅವತಾರ್’ ಬಳಿಕ ಅವರು ಹೊಸ ಸಿನಿಮಾ ಘೋಷಿಸಿರಲಿಲ್ಲ. . ಈಗ ಅವರು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.
ಹೊಸ ಸಿನಿಮಾ ಘೋಷಣೆ ಮಾಡಿರುವುದಕ್ಕೆ ಅಭಿಮಾನಿಗಳಿಗೆ ಖುಷಿ ಆಗಿದೆ. ಈ ಸಿನಿಮಾ ಯಾವಾಗ ಸೆಟ್ಟೇರಲಿದೆ? ಯಾರೆಲ್ಲ ನಟಿಸಲಿದ್ದಾರೆ ಎಂಬಿತ್ಯಾದಿ ವಿವರಗಳು ಮುಂದಿನ ದಿನಗಳಲ್ಲಿ ಸಿಗಲಿದೆ.
ಜೇಮ್ಸ್ ಕ್ಯಾಮೆರಾನ್ ಅವರ ‘ಅವತಾರ್’ 3ನೇ ಪಾರ್ಟ್ ‘ಅವತಾರ್: ಫೈರ್ ಆ್ಯಂಡ್ ಆ್ಯಶ್’ ಈ ವರ್ಷ ಡಿಸೆಂಬರ್ 19ಕ್ಕೆ ಬಿಡುಗಡೆ ಆಗಲಿದೆ. ‘ಅವತಾರ್ 4’ ಸಿನಿಮಾ 2029ಕ್ಕೆ ತೆರೆ ಕಾಣಲಿದೆ.
—-





Pingback: achat enclomiphene en ligne