ನಿರೀಕ್ಷೆ ಮೂಡಿಸಿದ ಜಮಾಲಿಗುಡ್ಡ ಟೀಸರ್

ಧನಂಜಯ್ ನಟನೆಯ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸಿನಿಮಾ ಡಿಸೆಂಬರ್ 30 ರಂದು ತೆರೆಗೆ ಬರಲಿದ್ದು, ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ.

ಚಿತ್ರವು ಕೌಟುಂಬಿಕ ಮತ್ತು ಸ್ನೇಹದ ಅಂಶಗಳೊಂದಿಗೆ ರೋಮ್ಯಾಂಟಿಕ್ ಥ್ರಿಲ್ಲರ್ ಹೊಂದಿದೆ. ಚಿತ್ರ ಮಾನವೀಯತೆಯ ಮಹತ್ವವನ್ನು ಒತ್ತಿಹೇಳುವುದನ್ನು ಟೀಸರ್ ನಲ್ಲಿ ನೋಡಬಹುದು.

ಕುಶಾಲ್ ಗೌಡ ಅವರ ನಿರ್ದೇಶನದ ಈ ಚಿತ್ರ ಭರವಸೆ ಮೂಡಿಸಿದ್ದು, ಯಶ್ ಶೆಟ್ಟಿ, ಅದಿತಿ ಪ್ರಭುದೇವ, ಭಾವನಾ, ಬೇಬಿ ಪ್ರಣ್ಯ ಮತ್ತು ಪ್ರಕಾಶ್ ಬೆಳವಾಡಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ನಿಹಾರಿಕಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಶ್ರೀಹರಿ ರೆಡ್ಡಿ ಅವರ ನಿರ್ಮಾಣದ ಸಿನಿಮಾಕ್ಕೆ ಅನೂಪ್ ಸೀಳಿನ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಅರ್ಜುನ್ ಜನ್ಯ ಹಾಡುಗಳನ್ನು ಸಂಯೋಜಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!