ʼಹೆಡ್‌ಬುಷ್ʼ ಯಶಸ್ಸಿನ ಖುಷಿಯಲ್ಲಿರುವ ಧನಂಜಯ ಅವರ ʼಒನ್ಸ್ ಅಪಾನ್ ಏ ಟೈಮ್ ಇನ್ ಜಮಾಲಿಗುಡ್ಡʼ ಚಿತ್ರ ಡಿ.30ರಂದು ತೆರೆಗೆ ಬರಲು ಸಿದ್ಧವಾಗಿದೆ.
ʼಜಮಾಲಿಗುಡ್ಡʼ ತನ್ನ ವಿಭಿನ್ನ ಮೇಕಿಂಗ್, ಸಾಂಗ್ ಸಿನಿಮಾದ ಟೈಟಲ್‌ನಿಂದ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಬ್ಯಾಕ್ ಟು ಬ್ಯಾಕ್ ಆಕ್ಷನ್ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸ್ತಾ ಇರುವ ಡಾಲಿ ಧನಂಜಯ್, ಮೊದಲ ಬಾರಿಗೆ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಾ ಇದ್ದಾರೆ.
ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ಬರ್ತಾ ಇರೋ ಸಿನಿಮಾದಲ್ಲಿ ಡಾಲಿ ಧನಂಜಯ್‌ಗೆ ಜೊತೆಗೆ ಅದಿತಿ ಪ್ರಭುದೇವ, ಬಾಲ ಕಲಾವಿದೆ ಪ್ರಾಣ್ಯ ರಾವ್, ಭಾವನಾ ರಾಮಯ್ಯ ಮುಂತಾದವರು ನಟಿಸಿದ್ದಾರೆ.
ಕುಶಾಲ್ ಗೌಡ ನಿರ್ದೇಶನದಲ್ಲಿ ರೆಡಿಯಾಗಿರೋ ಸಿನಿಮಾಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಸಿನಿಮಾದ ʼಸಾಗಿದೆ ಹಾಡುʼ ಪಾಪ್ಯುಲರ್ ಆಗಿದೆ. ಚಿತ್ರ ಶ್ರೀಹರಿ ನಿರ್ಮಾಣ ಮಾಡಿದ್ದಾರೆ.
___





Be the first to comment