ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಥೆ ಹೊಂದಿರುವ ಜಲಪಾತ ಚಿತ್ರ ಅಕ್ಟೋಬರ್ 6ರಂದು ತೆರೆಗೆ ಬರಲಿದೆ.
ಈ ಚಿತ್ರವನ್ನು ರಮೇಶ್ ಬೇಗಾರ್ ನಿರ್ದೇಶಿಸಿದ್ದಾರೆ. ಇಂದಿನ ಯುಗದಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡಕ್ಕೆ ನಿಸರ್ಗದಲ್ಲಿ ಮಾತ್ರ ಪರಿಹಾರ ಇದೆ. ಜನರ ಜೀವನ ಶೈಲಿ, ಆಹಾರ ಕ್ರಮಗಳು, ನಿಸರ್ಗದ ಕುರಿತಾದ ಕಥೆ ಚಿತ್ರದಲ್ಲಿದೆ.
ಎಂ ಡಿ ರವೀಂದ್ರ ತುಂಬರಮನೆ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ರಜನೀಶ್ ಅವರು ನಾಯಕನ ಪಾತ್ರದಲ್ಲಿ ನಡೆಸಿದ್ದಾರೆ. ನಾಯಕಿ ಆಗಿ ನಾಗಶ್ರೀ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಆಯೋಜನೆಯಾಗಿದೆ.
ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಕ್ಟೋಬರ್ ಆರರಂದು ಚಿತ್ರ ಬಿಡುಗಡೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ಮಾಡಲಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ನಾನು ಪರಿಸರ ತಜ್ಞ ಎಲ್ಲಪ್ಪ ರೆಡ್ಡಿ ಅವರ ಶಿಷ್ಯ. ನಿರ್ದೇಶಕರು ಪರಿಸರದ ಕಾಳಜಿ ಇರುವ ಚಿತ್ರದ ಬಗ್ಗೆ ಹೇಳಿದಾಗ ಚಿತ್ರ ನಿರ್ಮಾಣ ಮಾಡಲು ಮುಂದಾದೆ ಎಂದು ನಿರ್ಮಾಪಕ ಎಂ ಡಿ ರವೀಂದ್ರ ತುಂಬರಮನೆ ಹೇಳಿದ್ದಾರೆ.
ಪದವಿ ಪೂರ್ವ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ನಾನು ಈ ಚಿತ್ರದ ಮೂಲಕ ನಾಯಕನಾಗಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕನಟ ರಜನೀಶ್ ಅವರು ತಿಳಿಸಿದ್ದಾರೆ.
ನಾವು ಮಲೆನಾಡನ್ನು ಕೇವಲ ಒಂದು ಪ್ರವಾಸಿ ತಾಣವಾಗಿ ನೋಡುತ್ತಿದ್ದೇವೆ. ಆದರೆ ಅಲ್ಲಿನ ಸಂಸ್ಕೃತಿಯ ಪರಿಚಯದ ಜೊತೆಗೆ ಅಲ್ಲಿರುವ ಸಮಸ್ಯೆಗಳನ್ನು ಚಿತ್ರದಲ್ಲಿ ತೋರಿಸುವ ಯತ್ನ ಮಾಡಲಾಗಿದೆ. ನನ್ನ ಪಾತ್ರ ಚೆನ್ನಾಗಿದೆ ಎಂದು ನಾಯಕಿ ನಾಗಶ್ರೀ ಹೇಳಿದ್ದಾರೆ.
ರಮೇಶ್ ಬೇಗಾರ್ ಅವರು ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಗೀತ ನಿರ್ದೇಶನ ಸಾಧ್ವಿನಿ ಕೊಪ್ಪ, ಛಾಯಾಗ್ರಹಣ ಶಶಿರ್ ಅವರದ್ದು ಆಗಿದೆ.
ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಎಂ ಆರ್ ಸುರೇಶ್ ಇತರರು ನಟಿಸಿದ್ದಾರೆ.
ಚಿತ್ರ ತಂಡದ ಅಭಿಷೇಕ್ ಹೆಬ್ಬಾರ್, ಕಾರ್ತಿಕ್, ಚಿದಾನಂದ ಹೆಗ್ಗಾರ್, ರಶ್ಮಿ ಮೊದಲಾದವರು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
______
Be the first to comment