Jalapatha Movie Review : ಪರಿಸರ ಕಾಳಜಿಯ ಪಾಠ ಜಲಪಾತ

ಚಿತ್ರ: ಜಲಪಾತ

ನಿರ್ದೇಶನ: ರಮೇಶ್ ಬೇಗಾರ್
ನಿರ್ಮಾಣ: ಟಿ ಸಿ ರವೀಂದ್ರ ತುಂಬರಮನೆ
ತಾರಾಗಣ: ರಜನೀಶ್, ನಾಗಶ್ರೀ ಬೇಗಾರ್, ಪ್ರಮೋದ್ ಶೆಟ್ಟಿ ಇತರರು
ರೇಟಿಂಗ್: 3.5

ಮಲೆನಾಡಿನ ಸುಂದರ ಪರಿಸರವನ್ನು ತೋರಿಸುವ ಜೊತೆಗೆ ಅಲ್ಲಿನ ಸಮಸ್ಯೆಗಳು, ಪರಿಸರ ಕಾಳಜಿಯನ್ನು ಹೇಳುವ ಚಿತ್ರವಾಗಿ ಜಲಪಾತ ಗಮನ ಸೆಳೆಯುತ್ತದೆ.

ಪ್ಲಾಸ್ಟಿಕ್ ಬಳಕೆಯನ್ನು ಬಿಡಬೇಕು. ಮರಗಳನ್ನು ಹೆಚ್ಚಾಗಿ ನೆಡಬೇಕು ಎನ್ನುವ ಸಂದೇಶವನ್ನು ಚಿತ್ರದಲ್ಲಿ ನೀಡುವ ಯತ್ನ ನಡೆದಿದೆ. ಮಲೆನಾಡಿನ ಪ್ರಕೃತಿ ಸೊಬಗನ್ನು ಚಿತ್ರದಲ್ಲಿ ತೋರಿಸುವ ಜೊತೆಗೆ ಮಾನಸಿಕ ಒತ್ತಡಕ್ಕೆ ನಿಸರ್ಗದಲ್ಲಿ ಮಾತ್ರ ಪರಿಹಾರ ಸಿಗಲು ಸಾಧ್ಯ ಎನ್ನುವುದನ್ನು ಚಿತ್ರ ಸಾರುತ್ತದೆ.

ಚಿತ್ರದ ನಾಯಕ ರಜನೇಶ್ ಹಾಗೂ ಆತನ ಪೋಷಕರು ಹಲವು ವರ್ಷಗಳಿಂದ ವಿದೇಶದಲ್ಲಿ ನೆಲೆಸಿರುತ್ತಾರೆ. ನಾಯಕ ತನ್ನ ತವರೂರಿಗೆ ಹಿಂತಿರುಗಿದಾಗ ಪ್ಲಾಸ್ಟಿಕ್ ನಿಂದ ಪರಿಸರ ಹಾಳಾಗುವುದು ಕಂಡುಬಂದು ಸೋಶಿಯಲ್ ಮೀಡಿಯಾ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಯತ್ನವನ್ನು ಮಾಡುತ್ತಾನೆ. ಆಗ ಬಾಲ್ಯದ ಗೆಳತಿ ನಾಯಕನಿಗೆ ಜೊತೆಯಾಗುತ್ತಾಳೆ. ಅವಳು ಊರಿಗೆ ಯಾರೇ ಬಂದರೂ ಅವರನ್ನು ಜಲಪಾತಕ್ಕೆ ಕರೆದುಕೊಂಡು ಹೋಗುತ್ತಾಳೆ. ಆಕೆಗೆ ಕ್ಯಾನ್ಸರ್ ಬಂದಾಗಲೂ ಜಲಪಾತ ಸ್ಥಳಕ್ಕೆ ಹೋದಾಗ ಆಕೆಗೆ ನೆಮ್ಮದಿ ಸಿಗುತ್ತದೆ.

ಚಿತ್ರದಲ್ಲಿ ನಿರ್ದೇಶಕರು ಪರಿಸರ ಕಾಳಜಿಯ ಜೊತೆಗೆ ಕೌಟಿಂಬಿಕ ಕಥೆಯನ್ನು ಹೇಳುವ ಮೂಲಕ ಚಿತ್ರಕ್ಕೆ ಕಮರ್ಷಿಯಲ್ ಟಚ್ ನೀಡುವ ಯತ್ನವನ್ನು ಮಾಡಿದ್ದಾರೆ. ಮಲೆನಾಡಿನ ಸುಂದರ ಪರಿಸರವನ್ನು ತೋರಿಸುವ ಜೊತೆಗೆ ಅಲ್ಲಿಯ ಸಮಸ್ಯೆಗಳಿಗೆ ಪರಿಹಾರವನ್ನು ಚಿತ್ರದಲ್ಲಿ ಸೂಚಿಸಲಾಗಿದೆ.

ಚಿತ್ರದಲ್ಲಿ ಸಾದ್ವಿನಿ ಕೊಪ್ಪ ಅವರ ಸಂಗೀತ, ಶಿಶಿರ್ ಅವರ ಕ್ಯಾಮರಾ ವರ್ಕ್ ಹೊಸ ರೂಪ ನೀಡಿದೆ. ಪರಿಸರ ಹಾಳಾಗುತ್ತಿರುವ ವೇಳೆ ಪರಿಸರದ ಕಾಳಜಿಯ ಕುರಿತ ಚಿತ್ರ ತೆರೆಗೆ ಬಂದಿರುವುದು ಸ್ವಾಗತಾರ್ಹ ಅನಿಸುತ್ತದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!