ಚಿತ್ರ: ಜಲಂಧರ
ನಿರ್ದೇಶನ: ವಿಷ್ಣು ಪ್ರಸನ್ನ
ನಿರ್ಮಾಪಕ: ಮದನ್
ತಾರಾಗಣ: ಪ್ರಮೋದ್ ಶೆಟ್ಟಿ, ರಿಷಿಕಾ ರಾಜ್, ಸ್ಟೆಪ್ ಅಪ್ ಲೋಕಿ ಇತರರು
ರೇಟಿಂಗ್: 3
ಮಂಡ್ಯದ ರೈತಾಪಿ ವರ್ಗದ ಜನರು ಹೆಚ್ಚಿರುವ ಊರು ಒಂದರ ನದಿಯಲ್ಲಿ ನಡೆಯುವ ಸಾಲು ಸಾಲು ಕೊಲೆಯ ಹಿಂದಿನ ನಿಗೂಢ ಕಥೆಯನ್ನು ಹೇಳುವ ಚಿತ್ರ ಈ ವಾರ ತೆರೆಗೆ ಬಂದಿರುವ ಜಲಂಧರ.
ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಇನ್ಸ್ಪೆಕ್ಟರ್ ಆಗಿ ನಟಿಸಿದ್ದಾರೆ. ಅವರ ಪತ್ನಿ ಸಾಮಾಜಿಕ ಕಾರ್ಯಕರ್ತೆಯಾಗಿ ಶಾಸಕನ ಚಕ್ರವ್ಯೂಹದೊಳಗೆ ಸಿಲುಕಿಕೊಳ್ಳುತ್ತಾರೆ. ಅಲ್ಲಿಂದ ನಿಜವಾದ ಕಥೆ ಪ್ರಾರಂಭವಾಗುತ್ತದೆ. ನದಿಯಲ್ಲಿ ನಡೆಯುವ ಕೊಲೆಗಳ ಹಿಂದಿನ ಕಾರಣವೇನು? ಅದನ್ನು ಮಾಡಿಸುವವರು ಯಾರು ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಪ್ರಮೋದ್ ಶೆಟ್ಟಿ ಅವರ ಪಾತ್ರ ಮೊದಲ ಅರ್ಧದಲ್ಲಿ ಅತಿಥಿ ಪಾತ್ರದಂತೆ ಆಗಿದೆ. ಸ್ಟೆಪ್ ಆಫ್ ಲೋಕಿ ಮೇಲೆ ಚಿತ್ರದ ಕಥೆ ಬಹುತೇಕ ಸಾಗುತ್ತದೆ. ಪಾತ್ರ ಪೋಷಣೆಯಲ್ಲಿ ನಿರ್ದೇಶಕರು ಗಟ್ಟಿತನ ತೋರಿಸುವ ಅಗತ್ಯವಿತ್ತು. ಕಥೆಯ ನಿರೂಪಣೆ ಇನ್ನಷ್ಟು ಬಿಗಿಯಾಗಿದ್ದರೆ ಪ್ರೇಕ್ಷಕರಿಗೆ ಮನಸಿಗೆ ತಟ್ಟುವ ಸಾಧ್ಯತೆ ಇತ್ತು.
Be the first to comment