ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ 2 ಸಿನಿಮಾದ ಬಹುನಿರೀಕ್ಷಿತ ಟೀಸರ್ ರಿಲೀಸ್ ಆಗಿದೆ.
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ. ರಿಲೀಸ್ ಆಗಿರುವ ಟೀಸರ್ ಸಖತ್ತಾಗಿದ್ದು ರಜನಿಕಾಂತ್ ಆ್ಯಕ್ಷನ್ ಗಮನ ಸೆಳೆದಿದೆ.
ಸದ್ಯ ರಿಲೀಸ್ ಆಗಿರುವ ಟೀಸರ್ ಸಖತ್ತಾಗಿದ್ದು, ನೆಲ್ಸನ್ ಹಾಗೂ ಅನಿರುದ್ಧ ಅವರು ಗೋವಾದಲ್ಲಿ ಕಥೆ ಚರ್ಚೆ ಮಾಡುತ್ತಾರೆ. ಸ್ಟೋರಿ ಲೈನ್ಗಾಗಿ ಇಬ್ಬರೂ ಹುಡುಕುತ್ತಾ ಇರುತ್ತಾರೆ. ಆ್ಯಕ್ಷನ್ ಚಿತ್ರ ಮಾಡಬೇಕು ಎಂಬ ಚರ್ಚೆ ನಡೆಯುತ್ತಾ ಇರುತ್ತದೆ. ರಜನಿಕಾಂತ್ ಅವರು ಮಾಸ್ ಅವತಾರದಲ್ಲಿ ಬಂದು ಎಲ್ಲರನ್ನೂ ಸಾಯಿಸುತ್ತಾರೆ. ಇದನ್ನೇ ಸ್ಟೋರಿ ಲೈನ್ ಮಾಡುವ ನಿರ್ಧಾರಕ್ಕೆ ಬರುತ್ತಾರೆ.
ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ 2023ರಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ 650 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ‘ಜೈಲರ್’ ಚಿತ್ರದಲ್ಲಿ ರಜನಿಕಾಂತ್ ಅವರ ಮಾಸ್ ಲುಕ್ ಸಖತ್ ಸದ್ದು ಮಾಡಿತ್ತು. ನೆಲ್ಸನ್ ನಿರ್ದೇಶನದ ಸಿನಿಮಾದಲ್ಲಿ ಶಿವರಾಜ್ಕುಮಾರ್, ಮೋಹನ್ಲಾಲ್ ಅವರ ಅತಿಥಿ ಪಾತ್ರ ಗಮನ ಸೆಳೆದಿತ್ತು.
ಈಗ ಸಿನಿಮಾ ರಿಲೀಸ್ ಆಗಿ ಎರಡು ವರ್ಷಗಳ ಬಳಿಕ ಸೀಕ್ವೆಲ್ ಬರುತ್ತಿದ್ದು ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿದೆ. ಸನ್ ಪಿಕ್ಚರ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
—-
Be the first to comment