ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ನಟಿಸಿದ್ದ ವಿನಾಯಕನ್ ನೆರೆಮನೆಯವರ ಎದುರು ಅಶ್ಲೀಲವಾಗಿ ವರ್ತಿಸಿದ್ದು ನಟನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿನಾಯಕನ್ ನೆರೆಮನೆಯವರಿಗೆ ಬೈಯುತ್ತಾ ಅಶ್ಲೀಲವಾಗಿ ನಡೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ಮನೆಯ ಬಾಲ್ಕನಿಯಲ್ಲಿ ನೆರೆಮನೆಯವರಿಗೆ ಅಶ್ಲೀಲ ಪದಗಳಿಂದ ವಿನಾಯಕನ್ ನಿಂದಿಸಿದ್ದಾರೆ. ಈ ವೇಳೆ ಲುಂಗಿ ಬಿದ್ದರೂ ಕುಡಿದು ಜಗಳಕ್ಕೆ ನಿಂತಿದ್ದಾರೆ. ಅನೇಕರು ವಿನಾಯಕನ್ ಅವರ ವರ್ತನೆಯನ್ನು ಟೀಕಿಸಿದ್ದಾರೆ.
ರಜನಿಕಾಂತ್ ನಟನೆ ‘ಜೈಲರ್’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುವ ಮೂಲಕ ವಿನಾಯಕನ್ ಅವರು ಹೆಚ್ಚು ಖ್ಯಾತಿ ಗಳಿಸಿದರು. . ಅವರು ಅತ್ಯುತ್ತಮ ನಟ ಎಂಬುದರಲ್ಲಿ ಅನುಮಾನ ಇಲ್ಲ. ಕೇರಳ ರಾಜ್ಯ ಪ್ರಶಸ್ತಿ, ಫಿಲ್ಮ್ಫೇರ್ ಪ್ರಶಸ್ತಿಗಳು ಅವರಿಗೆ ಸಿಕ್ಕಿವೆ. ಈ ಹಿಂದೆ ಕೂಡ ವಿನಾಯಕನ್ ಅವರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕುಡಿದು ರಂಪಾಟ ಮಾಡಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು.
‘ಒಬ್ಬ ವ್ಯಕ್ತಿಯಾಗಿ, ಸಿನಿಮಾ ನಟನಾಗಿ ನನಗೆ ಎಷ್ಟೋ ವಿಷಯಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನನ್ನಿಂದ ನೆಗೆಟಿವ್ ಎನರ್ಜಿ ಉಂಟಾಗಿದ್ದಕ್ಕೆ ನನ್ನ ಕಡೆಯಿಂದ ಜನರ ಬಳಿ ಕ್ಷಮೆ ಕೇಳುತ್ತೇನೆ. ಚರ್ಚೆ ಮುಂದುವರಿಯಲಿ’ ಎಂದು ವಿನಾಯಕನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
—–
Be the first to comment