ಮೈಸೂರಿನಲ್ಲಿ ಜೈಲರ್‌ 2 ಶೂಟಿಂಗ್

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ  ಜೈಲರ್‌ 2 ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ಭರದಿಂದ ಸಾಗಿದೆ.

ಶೂಟಿಂಗ್‌ಗಾಗಿ ಮೈಸೂರಿಗೆ ಆಗಮಿಸಿರುವ  ರಜನಿಕಾಂತ್ ನೋಡಿ ಅಭಿಮಾನಿಗಳು ಖುಷಿಯಿಂದ ಕೇಕೆ ಹಾಕಿ ಕೂಗಿದ್ದಾರೆ. ರಜನಿಕಾಂತ್ ಕಾರಿನ ಮೇಲೆ ನಿಂತು ಅಭಿಮಾನಿಗಳತ್ತ ಕೈ ಬೀಸಿದ್ದಾರೆ.

ಹುಣಸೂರು ಸಮೀಪವಿರುವ ಬಿಳಿಕೆರೆ ಬಳಿ ಜೈಲರ್‌ 2 ಚಿತ್ರದ ಶೂಟಿಂಗ್ ನಡೆದಿದೆ. ನೆಚ್ಚಿನ ನಟನನ್ನ ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಈ ವೇಳೆ ಕಾರಿನ ಮೇಲೆ ನಿಂತು ಅಭಿಮಾನಿಗಳತ್ತ ರಜನಿಕಾಂತ್ ಕೈಬೀಸಿ ಅಭಿಮಾನಿಗಳ ಪ್ರೀತಿಗೆ ಕೈ ಎತ್ತಿ ಮುಗಿದಿದ್ದಾರೆ.

ಜೈಲರ್‌ 2 ಚಿತ್ರ   ರಜನಿಕಾಂತ್ , ಮೋಹನ್ ಲಾಲ್, ಶಿವರಾಜ್ ಕುಮಾರ್ ಮತ್ತು ಜಾಕಿ ಶ್ರಾಫ್ ಹೀಗೆ ಬಹುತಾರೆಯರನ್ನೊಳಗೊಂಡಿದೆ.

ಸನ್ ಪಿಕ್ಚರ್ಸ್ ನಿರ್ಮಾಣದ ‘ಜೈಲರ್’ ಸಿನಿಮಾದಲ್ಲಿ  ರಜನಿಕಾಂತ್ ಜೊತೆಗೆ ಅತಿಥಿ ಪಾತ್ರಗಳಲ್ಲಿ ಶಿವರಾಜ್‌ಕುಮಾರ್ ಮತ್ತು ಮೋಹನ್‌ಲಾಲ್ ಮಿಂಚಿದ್ದರು. ನಟಿ ತಮನ್ನಾ ಭಾಟಿಯಾ, ತೆಲುಗು ನಟರಾದ ಸುನೀಲ್, ನಾಗ ಬಾಬು, . ರಮ್ಯಾ ಕೃಷ್ಣ, ವಸಂತ್ ರವಿ, ಯೋಗಿ ಬಾಬು, ಕಿಶೋರ್, ರೆಡಿನ್ ಕಿಂಗ್ಸ್‌ಲೇ, ಜಾಕಿ ಶ್ರಾಫ್‌ ಮುಂತಾದವರು ನಟಿಸಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!