ಜ್ಯೂ.ಎನ್ಟಿಆರ್ ಹುಟ್ಟು ಹಬ್ಬದಂದು ಕಟೌಟ್ಗೆ ಮೇಕೆ ರಕ್ತದಿಂದ ಅಭಿಷೇಕ ಮಾಡಿದ 9 ಜನ ಅಭಿಮಾನಿಗಳು ಜೈಲು ಕಂಬಿ ಎಣಿಸುತ್ತಿದ್ದಾರೆ.
ಇತ್ತೀಚೆಗೆ ಜ್ಯೂ.ಎನ್ಟಿಆರ್ ಅವರು 40ನೇ ಹುಟ್ಟುಹಬ್ಬ ಆಚರಿಸಿದ್ದಾರೆ. ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಫ್ಯಾನ್ಸ್ ನಾನಾ ರೀತಿ ಸೆಲೆಬ್ರೇಟ್ ಮಾಡಿದ್ದಾರೆ. ಕೆಜಿಎಫ್ ಸಮೀಪದ ರಾಬರ್ಟ್ ಸನ್ ಪೇಟ್ ನ ಥಿಯೇಟರ್ ನಲ್ಲಿ ಜ್ಯೂ.ಎನ್ಟಿಆರ್ ಕಟೌಟ್ಗೆ ಅಭಿಮಾನಿಗಳು ಎರಡು ಕುರಿಗಳನ್ನ ಕಡಿದು ರಕ್ತಾಭಿಷೇಕ ಮಾಡಿದ್ದು ಈ ವೀಡಿಯೋಗಳು ಹೊರ ಬರುತ್ತಿದ್ದಂತೆ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿ ಬಲಿ ಕೊಟ್ಟ ಕಾರಣಕ್ಕೆ ಅಭಿಮಾನಿಗಳನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಜ್ಯೂ,ಎನ್ಟಿಆರ್ ಫ್ಯಾನ್ಸ್ ಗಳದ್ದು ಅತಿರೇಕದ ಅಭಿಮಾನ. ಈಗ ಅದುವೇ ಅವರಿಗೆ ಮುಳುವಾಗಿದೆ. ಹಾಲಿನ ಅಭಿಷೇಕ, ಎಳ ನೀರಿನ ಅಭಿಷೇಕ ಮಾಡುವ ಬದಲು ರಕ್ತದ ಅಭಿಷೇಕ ಮಾಡಿದ ಅಭಿಮಾನಿಗಳು ಜೈಲಿನ ಹಾದಿ ಹಿಡಿದಿದ್ದಾರೆ.
___

Be the first to comment