ಚಿತ್ರ: ಜೈ
ನಿರ್ದೇಶನ: ರೂಪೇಶ್ ಶೆಟ್ಟಿ
ನಿರ್ಮಾಣ: ಸುಧಾಕರ್ ಶೆಟ್ಟಿ, ಅನಿಲ್ ಶೆಟ್ಟಿ, ಮಂಜುನಾಥ್ ಅತ್ತಾವರ
ತಾರಾ ಬಳಗ: ರೂಪೇಶ್ ಶೆಟ್ಟಿ, ಸುನಿಲ್ ಶೆಟ್ಟಿ, ಅದ್ವಿತಿ ಶೆಟ್ಟಿ, ರಾಜ್ ದೀಪಕ್ ಶೆಟ್ಟಿ, ಅರವಿಂದ ಬೋಳಾರ್, ನವೀನ್ ಡಿ ಪಡೀಲ್ ಇತರರು
ರೇಟಿಂಗ್: 3.5
ಕರಾವಳಿಯ ರಾಜಕೀಯ ಪಡಸಾಲೆಯಲ್ಲಿ ನಡೆಯುವ ರಾಜಕಾರಣಿಯ ಸ್ವಹಿತಾಸಕ್ತಿಯ ಕಥಾಂದರವನ್ನು ಹೊಂದಿರುವ ಚಿತ್ರ ಈ ವಾರ ಬಿಡುಗಡೆ ಆಗಿರುವ ಜೈ.
ಈ ಚಿತ್ರ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಬಿಡುಗಡೆಗೊಂಡಿದೆ. ಚಿತ್ರದ ನಾಯಕ ನಟ ಆಗಿ ನಟಿಸಿರುವ ರೂಪೇಶ್ ಶೆಟ್ಟಿ, ಸಿಂಹಬೆಟ್ಟು ಗ್ರಾಮದಲ್ಲಿ ಮೊದಲಿಗೆ ಸ್ವಹಿತಾಸಕ್ತಿಯ ಶಾಸಕನ ನೆರವಿಗೆ ನಿಂತ ಬಳಿಕ ಶಾಸಕನ ನಿಜವಾದ ಕಾರ್ಯವೈಖರಿ ಗೋಚರವಾಗಿ ಬಳಿಕ ಯಾವ ರೀತಿ ಗ್ರಾಮದಲ್ಲಿ ಬದಲಾವಣೆ ತರುತ್ತಾರೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಚಿತ್ರದ ವಿಶೇಷ ಪಾತ್ರದಲ್ಲಿ ಸುನಿಲ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಕೊನೆಗೆ ಆಗಮಿಸುವ ಸುನಿಲ್ ಶೆಟ್ಟಿ ಪಾತ್ರದಿಂದ ಚಿತ್ರಕ್ಕೆ ಹೊಸ ತೂಕ ಬಂದಿದೆ.
ಕರಾವಳಿ ಭಾಗದ ರಾಜಕೀಯ, ಜನರ ಸಮಸ್ಯೆಗಳು ಹಾಗೂ ಬೇಡಿಕೆಗಳು ಚಿತ್ರದಲ್ಲಿವೆ. ನಿರೂಪಣೆಯಲ್ಲಿ ವೇಗ ಹಾಗೂ ಮೇಕಿಂಗ್ ನಲ್ಲಿ ಅದ್ದೂರಿತನವನ್ನು ತುಂಬುವ ಯತ್ನ ಮಾಡಲಾಗಿದೆ. ಹಾಡುಗಳು ಹಾಗೂ ಫೈಟ್ ಗಳು ಚಿತ್ರಕ್ಕೆ ಪೂರಕವಾಗಿ ಕಾಣಿಸಿಕೊಂಡಿವೆ.
ರೂಪೇಶ್ ಶೆಟ್ಟಿ ನಟನೆಯಲ್ಲಿ ಜೈ ಎನಿಸುತ್ತಾರೆ. ಸುನಿಲ್ ಶೆಟ್ಟಿ ಮಾಸ್ ಎಂಟ್ರಿ ಚಿತ್ರಕ್ಕೆ ಹೊಸ ತಿರುವನ್ನು ನೀಡುತ್ತದೆ. ಉಳಿದಂತೆ ಚಿತ್ರದ ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ.





Be the first to comment