ಉತ್ತರ ಕರ್ನಾಟಕದ ಕಂಪ್ಲೀಟ್ ಪ್ಯಾಕೇಜ್ ಇರುವಂತಹ ಸಿನಿಮಾವೊಂದು ಈಗ ತೆರೆಗೆ ಬರುತ್ತಿದೆ. ’ಜೈ ಕೇಸರಿ ನಂದನ’ ಎಂಬ ಈ ಚಿತ್ರದ ಹಾಡುಗಳ ಸಿಡಿ ಹಾಗೂ ಟ್ರೈಲರ್ ಅನಾವರಣ ಸಮಾರಂಭ ಇತ್ತೀಚೆಗೆ ನಡೆಯಿತು. ಹನುಮಂತ ಹಾಲಗೇರಿ ರವರ ಊರು ಸುತ್ತು ಹನುಮಪ್ಪ ಹೊರಗೆ ಎಂಬ ಜನಪ್ರಿಯ ನಾಟಕವನ್ನಾಧರಿಸಿ ಈ ಚಿತ್ರವನ್ನು ಶ್ರೀಧರ್ ಜಾವೂರ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ೨೫೦ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಈ ನಾಟಕವನ್ನು ಹಲವಾರು ನಾಟಕ ತಂಡಗಳು ಅಭಿನಯಿಸಿವೆ. ಶ್ರೀಧರ್ ಜಾವೂರ್ ಈ ಹಿಂದೆ ಕೆಂಗುಲಾಬಿ ಚಿತ್ರವನ್ನು ನಿರ್ದೇಶಿಸಿದ್ದರು. ಜೈ ಕೇಸರಿ ನಂದನ ಅವರ ೨ನೇ ಚಿತ್ರ. ಇದೇ ಏಪ್ರಿಲ್ ೧೨ ರಂದು ರಾಜ್ಯಾಧ್ಯಂತ ತೆರೆಗೆ ಬರಲು ಸಿದ್ಧವಾಗಿರುವ ಈ ಚಿತ್ರದಲ್ಲಿ ಗುರುರಾಜ್ ಹೊಸಕೋಟೆ, ರಾಜು ತಾಳಿಕೋಟೆ, ಶಶಿಧರ್ ದಾನಿ, ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಲ್ಲೇಶ್ ವರ್ಧನ್ ಹಾಗೂ ಅಮೃತ ಆರ್. ಹಾಗೂ ಅಮೃತ ಕಾಳ ಈ ಚಿತ್ರದ ನಾಯಕ-ನಾಯಕಿಯ ಪಾತ್ರಗಳಲ್ಲಿ ನಿರ್ವಹಿಸಿದ್ದಾರೆ. ಅಶ್ವಿನಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ೨ ಗ್ರಾಮಗಳ ನಡುವಿನ ಜಗಳದಲ್ಲಿ ಪೊಲೀಸ್ ಠಾಣೆ ಸೇರಿದ ಹನುಮಂತಪ್ಪನ ಕಥೆ ಇದಾಗಿದೆ. ಜನ ಮತ್ತು ಮೂಢನಂಬಿಕೆ ನಡುವೆ ನಡೆಯುವಂತಹ ಕಥೆ ಇದಾಗಿದೆ. ಧರಗಟ್ಟಿ ಮತ್ತು ವಜ್ರಗಟ್ಟಿ ಎಂಬ ಎರಡು ಗ್ರಾಮಗಳ ಊರುಸುಟ್ಟು ಹನುಮಪ್ಪನ ಜಾತ್ರೆ ಸಮಯದಲ್ಲಿ ನಡೆದ ಘೋರ ದುರಂತವನ್ನು ಈ ಚಿತ್ರದಲ್ಲಿ ಹೇಳಿದ್ದೇವೆ ಎಂದು ನಿರ್ದೇಶಕ ಶ್ರೀಧರ್ ಜಾವೂರ್ ಹೇಳಿದರು. ಶಶಿಧರ್ ದಾನಿ ಹಾಗೂ ಪ್ರವೀಣ್ ಕತ್ರಿ, ನಾರಾಯಾಣ್ ಷಾ, ಪವಾರ್, ಲಕ್ಷ್ಮಣ್ ಸಿಂಗ್ರಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಾಮಾ ಹರೀಶ್ ಹಾಗೂ ಸಿದ್ದನಕೊಳ್ಳದ ಮಠದ ಶಿವಕುಮಾರ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.ನಾಯಕ ನಟ ಕಲ್ಲೇಶ್ ವರ್ಧನ್ ಮಾತನಾಡಿ ಗಂಭೀರವಾದ ವಿಷಯವನ್ನು ನಾಜೂಕಾಗಿ ಹೇಳುವ ಪ್ರಯತ್ನ ಇಲ್ಲಿ ನಡೆದಿದೆ. ೨ ಊರುಗಳ ನಡುವೆ ಹನುಮಪ್ಪನಿಗಾಗಿ ನಡೆದ ಘಟನೆ ಈ ಚಿತ್ರದ ಕಥಾವಸ್ತು ಎಂದು ಹೇಳಿದರು. ನಾಯಕಿ ಅಮೃತ ಆರ್ ಮಾತನಾಡಿ ತುಂಗ ಎಂಬ ಪಾತ್ರವನ್ನು ನಾಡು ಮಾಡಿದ್ದೇನೆ. ಉತ್ತರ ಕರ್ನಾಟಕದವಳೇ ಆಗಿದ್ದರಿಂದ ಭಾಷೆ ನನಗೆ ಸುಲಭವಾಯಿತು. ಬಾಮಾ ಹರೀಶ್ ಮಾತನಾಡಿ ಇದುವರೆಗೆ ಹನುಮಪ್ಪನನ್ನು ಇಟ್ಟುಕೊಂಡು ಮಾಡಿದ ಯಾವ ಚಿತ್ರವೂ ಫೇಲಾಗಿಲ್ಲ. ಒಳ್ಳೆ ಕಂಟೆಂಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು.
ಪಯಣಿಗರ ಟ್ರೇಲರ್ ಅನಾವರಣ
ಈ ಹಿಂದೆ ಸಡಗರ ಡೀಲ್ ರಾಜ ಚಿತ್ರಗಳಿಗೆ ಆಕ್ಸನ್ ಕಟ್ ಹೇಳಿದ್ದ ರಾಜ್‌ಗೋಪಿ ಈಗ ಮತ್ತೊಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಪಯಣಿಗರು ಎಂಬ ವಿಭಿನ್ನ ಶೀರ್ಷಿಕೆ ಹೊಂದಿರುವ ಈ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಬಿಗ್‌ಬಾಸ್ ಹಾಗೂ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಟ್ರೈಲರ್‌ನ್ನು ಅನಾವರಣಗೊಳಿಸಿದರು. ಜೀವನದಲ್ಲಿ ಸುಖ-ದುಃಖಗಳನ್ನೆಲ್ಲ ಅನುಭವಿಸಿ ನೆಮ್ಮದಿ ಪಡೆಯಲು ಗೋವಾ ಟ್ರಿಪ್ ಹೊರಡುವ ನಾಲ್ವರು ಗೆಳೆಯರ ಕಥೆ ಇದಾಗಿದೆ. ನಲವತ್ತು ದಾಟಿದ ಈ ಸ್ನೇಹಿತರು ಮನೆಯಲ್ಲಿ ಹೆಂಡತಿಯರ ವಿರೋಧದ ನಡುವೆಯೂ ಗೋವಾ ಪಯಾಣ ಆರಂಭಿಸುತ್ತಾರೆ. ನಂತರ ಈ ನಾಲ್ವರ ಜರ್ನಿಯಲ್ಲಿ ಏನೆಲ್ಲಾ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ ಎಂಬುದೇ ಪಯಣಿಗರ ಚಿತ್ರದ ಕಥೆ. ಕೆಂಪಿರುವೆ ಖ್ಯಾತಿಯ ಲಕ್ಷ್ಮಣ್, ಶಿವಶಂಕರ್ ಅಶ್ವಿನ್ ಹಾಸನ್, ರಾಮಚಂದ್ರನಾಯಕ್ ಹಾಗೂ ಇತರರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಮಾತನಾಡಿದ ರಾಜ್‌ಗೋಪಿ ಅವರವರ ಜೀವನದಲ್ಲಿ ಪ್ರತಿಯೊಬ್ಬರು ಪಯಣಿಗರೇ. ಆ ಪಯಣ ಮುಗಿಯುವವರೆಗೆ ನಾವು ಸಂತೋಷವಾಗಿದ್ದು ಇತರರನ್ನು ಸಂತೋಷವಾಗಿಡಿ ಅನ್ನೋದೆ ಈ ಚಿತ್ರದ ಕಥೆ. ಈ ಚಿತ್ರದಲ್ಲಿ ಲವ್ ಜರ್ನಿ, ಕಾಮಿಡಿ ಜರ್ನಿ ಎರಡೂ ಇದೆ. ಸಂಸಾರದ ನೊಗವನ್ನು ಹೊತ್ತ ಈ ನಾಲ್ವರು ಗೋವಾ ಪ್ರಯಾಣಕ್ಕೆ ಅಲ್ಲಿ ಏನೊ ಒಂದು ಎಡವಟ್ಟಿನಲ್ಲಿ ಸಿಕ್ಕಿಹಾಕಿಕೊಂಡು ಮತ್ತೆ ಅದರಿಂದ ಹೇಗೆ ಹೊರಬರುತ್ತಾರೆ. ಪ್ರತಿಯೊಬ್ಬರ ಜೀವನಕ್ಕೆ ಬೆಲೆ ಕೊಡಬೇಕು, ಕುಟುಂಬಕ್ಕೆ ಬೆಲೆ ಕೊಡಬೇಕು. ಮನೆಯವರಿಗೆ ಒಂದಷ್ಟು ಕಾಲವನ್ನು ಮೀಸಲಿಡಿ ಎಂದು ಈ ಚಿತ್ರದ ಮೂಲಕ ಸಂದೇಶ ಹೇಳಹೊರಟಿದ್ದೇವೆ ಎಂದು ಹೇಳಿದರು. ವಿನು ಮನಸ್ಸು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ೬೦-೭೦ ಭಾಗದಷ್ಟು ಚಿತ್ರದ ಕಥೆ ಕಾರಿನಲ್ಲೇ ನಡೆಯುತ್ತದೆ.
Pingback: Sex position