ಕನ್ನಡ ಚಿತ್ರರಂಗದ ರೊಮ್ಯಾಂಟಿಕ್ ಹಾಗೂ ಇಂಟ್ರೆಸ್ಟಿಂಗ್ ಕಪಲ್ ಎಂದೇ ಗುರುತಿಸಿಕೊಂಡ ಜಗ್ಗೇಶ್ ಮತ್ತು ಪರಿಮಳಾ ಇಂದು 36ನೇ ವಿವಾಹ ವಾರ್ಷಿಕೋತ್ಸವವನ್ನೂ ಸಿಂಪಲ್ ಆಗಿ ಆಚರಿಸಿಕೊಂಡಿದ್ದಾರೆ….
1984ರಲ್ಲಿ ಮದುವೆಯಾದ ಈ ಜೋಡಿಯ ಸುಖಿ ದಾಂಪತ್ಯಕ್ಕೆ 36 ವರ್ಷ ತುಂಬಿದೆ. ಈ ಸುಮಧುರ ಕ್ಷಣ ನೆನೆದು ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ ಪರಿಮಳ ಜಗ್ಗೇಶ್ ‘ನಾನು 1984ರಲ್ಲಿ ಜಗ್ಗಿ ಮದುವೆ ಆದಾಗ ನೆನಸಲಿಲ್ಲ.. ನನಗೆ ಇಷ್ಟುದೊಡ್ಡ ಪರಿವಾರ ಸಿಗುತ್ತದೆ ಅಂತ’ ಎಂದು ಬರೆದಿದ್ದಾರೆ.
ಇದರೊಂದಿಗೆ ‘1984ರಲ್ಲಿ ಮದುವೆಯಾದ 15 ವರ್ಷದ ಪರಿಮಳಗೆ ಕೊಡುವುದೊಂದೇ ಸಲಹೆ: ಸಮಯ ಎಲ್ಲವನ್ನೂ ಬದಲಿಸುತ್ತದೆ. ಸುಖಕರ ಬಾಳು, ಸುಂದರ ಸಂಸಾರ ಮುಖ್ಯ’ ಎಂದು ಸಹ ಹೇಳಿದ್ದಾರೆ. ಮನೆಯವರ ವಿರೋಧದ ನಡುವೆಯೂ ಜಗ್ಗೇಶ್- ಪರಿಮಳ ಅವರು ಪ್ರೀತಿಸಿ ಮದುವೆಯಾಗಿದ್ದರು.
1984 ಮಾರ್ಚ್ 22ರಂದು ಜಗ್ಗೇಶ್ ದಂಪತಿಯ ಮದುವೆ ನಡೆದಿತ್ತು. ಹಾಗೇ ನೋಡುವುದಾದರೆ ಮದುವೆಯಾದ ಜಗ್ಗೇಶ್ ಅವರಿಗೆ 19 ವರ್ಷ ಆಗಿದ್ದರೆ ಪರಿಮಳ ಅವರಿಗೆ 15 ವರ್ಷ. ಮದುವೆಯಾದಾಗ ಜಗ್ಗೇಶ್ ಮೊದಲ ವರ್ಷದ ಡಿಗ್ರಿ ಓದುತ್ತಿದ್ದರೆ, ಪರಿಮಳ ಅವರು ಆಗ ತಾನೇ 9ನೇ ತರಗತಿಯಲ್ಲಿ ಓದುತ್ತಿದ್ದರು.
ಗಾಢವಾಗಿ ಪ್ರೀತಿಸಿದ್ದ ಈ ಜೋಡಿ ಮನೆಯವರ ವಿರೋಧದ ನಡುವೆಯೂ ರಿಜಿಸ್ಟರ್ ಆಫೀಸ್ನಲ್ಲಿ ಮದುವೆ ಮಾಡಿಕೊಂಡಿತ್ತು. ಮಗಳು ಚಿಕ್ಕವಳು ಎಂಬ ಕಾರಣಕ್ಕೆ ಈ ಮದುವೆಗೆ ಪರಿಮಳ ಅವರ ಕುಟುಂಬಸ್ಥರು ಒಪ್ಪಿರಲಿಲ್ಲ.
ಜಗ್ಗೇಶ್ ಹಾಗೂ ಪರಿಮಳ ಅವರು ಮದುವೆಯಾದಾಗ ಇನ್ನೂ ಮೈನರ್ ಆಗಿದ್ದ ಕಾರಣ, ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದು ಪರಿಮಳ ಕುಟುಂಬದವರು ಜಗ್ಗೇಶ್ ಅವರ ಮೇಲೆ ಅಪಹರಣ ಕೇಸ್ ಬುಕ್ ಮಾಡಿದ್ದರು. ಮದುವೆ ಕೇಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಮಾನವೀಯತೆಯ ಅಧಾರದ ಮೇಲೆ ಪ್ರೇಮಿಗಳ ಪರ ತೀರ್ಪು ನೀಡಿತ್ತು ಸುಪ್ರೀಂಕೋರ್ಟ್. ಹಲವು ಅಡೆತಡೆಗಳ ನಂತರ ಈ ಜೋಡಿ ಜೀವನಪೂರ್ತಿ ಕೂಡಿ ಬಾಳುವಂತಾಯಿತು. ಜೀವನದಲ್ಲಿ ಇಬ್ಬರೂ ಒಟ್ಟಿಗೆ ಚೆನ್ನಾಗಿ ಬದುಕಬೇಕು ಎಂದು ತೀರ್ಮಾನಿಸಿದ ಜಗ್ಗೇಶ್ ದಂಪತಿ ಇಂದು ಮಾದರಿ ಜೋಡಿಯಾಗಿ ಬಾಳುತ್ತಿದ್ದಾರೆ.
Pingback: best dumps store