ನಟ ನಿರಂಜನ್ ಶೆಟ್ಟಿ ಅಭಿನಯದ ‘ಜಗತ್ ಕಿಲಾಡಿ’ ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಜೂಜು ಮಾಫಿಯಾ ಆಗಿರುವ ರೈಸ್ ಪುಲ್ಲಿಂಗ್ ಬಗ್ಗೆ ಬೆಳಕು ಚೆಲ್ಲಲಾಗಿದ್ದು, ನಿರಂಜನ್ ಶೆಟ್ಟಿ 13 ಶೇಡ್ಗಳಿರುವ ಪಾತ್ರದಲ್ಲಿ ನಟಿಸಿದ್ದಾರಂತೆ. ‘ಹೆಸರೇ ಹೇಳುವಂತೆ ಚಿತ್ರದ ನಾಯಕ ಜಗತ್ ಕಿಲಾಡಿ. ಆತ ಒಟ್ಟು 13 ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಾನೆ. ಪ್ರತಿ ಗೆಟಪ್ಗೂ ಒಂದೊಂದು ಹಿನ್ನೆಲೆ ಇದೆ. ಅದು ಏನು ಎಂಬುದನ್ನು ಥಿಯೇಟರ್ನಲ್ಲೇ ನೋಡಬೇಕು. ಈ ಚಿತ್ರ ನನ್ನ ವೃತ್ತಿ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ ನಿರಂಜನ್.
ತಮಿಳಿನಲ್ಲಿ ತೆರೆಕಂಡ ‘ಚದುರಂಗ ವೆಟ್ಟೈ’ ಚಿತ್ರದ ರಿಮೇಕ್. ಈ ಸಿನಿಮಾವನ್ನು ರಿಮೇಕ್ ಮಾಡುತ್ತಿರುವುದಕ್ಕೆ ಕಥೆಯೇ ಕಾರಣವಂತೆ. ‘ಮೂಲ ಸಿನಿಮಾದ ಕಥೆ ಚೆನ್ನಾಗಿತ್ತು. ಹಾಗಾಗಿ ರಿಮೇಕ್ ಮಾಡುತ್ತಿದ್ದೇವೆ. ಇಲ್ಲಿನ ನೇಟಿವಿಟಿಗೆ ಸೂಕ್ತ ಎನಿಸುವ ಕಥೆ ಚಿತ್ರದಲ್ಲಿದೆ. ಸಸ್ಪೆನ್ಸ್, ಥ್ರಿಲ್ಲರ್ ಜತೆಗೆ ಭಾವನೆಗಳಿಗೂ ಚಿತ್ರದಲ್ಲಿ ಸ್ಥಾನ ನೀಡಲಾಗಿದೆ’ ಎನ್ನುವುದು ನಿರಂಜನ್ ಮಾತು.
ಲಯನ್ ಎನ್. ರಮೇಶ್ ಬಾಬು ಇದರ ನಿರ್ವಪಕರು. ‘ಧ್ವನಿ’ ನಂತರ ಅವರಿಗೆ ಇದು ಎರಡನೇ ಚಿತ್ರ. ಚಿತ್ರದಲ್ಲಿರುವ ಐದು ಹಾಡುಗಳಿಗೆ ಸಂಗೀತ ನಿರ್ದೇಶಕ ಗಿರಿಧರ್ ದಿವಾನ್ ರಾಗ ಸಂಯೋಜನೆ ಮಾಡಿದ್ದಾರೆ. ಸಿನಿಟೆಕ್ ಸೂರಿ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ ಈ ಚಿತ್ರಕ್ಕಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು, ಮುಂದಿನ ತಿಂಗಳು ಬಿಡುಗಡೆಗೆ ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.
Pingback: qa automation tools for web applications