ಜನವರಿ 2ಕ್ಕೆ ‘ಜಗನ್ಮಾತೆ ಅಕ್ಕಮಹಾದೇವಿ‌’ ಚಿತ್ರ ಬಿಡುಗಡೆ

ಭರತ್ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ಸಿದ್ದವಾಗಿರುವ ’ಶ್ರೀ ಜಗನ್ಮಾತೆ ಅಕ್ಕಮಹಾದೇವಿ’ ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿಯು ಯಾವುದೇ ದೃಶ್ಯಕ್ಕೆ ಆಕ್ಷೇಪ ವ್ಯಕ್ತ್ತಪಡಿಸಿದೆ ಕ್ಲೀನ್ ’ಯು’ ಪ್ರಮಾಣಪತ್ರ ನೀಡಿದೆ. ’ಮನಸುಗಳ ಮಾತು ಮಧುರ, ಡಾ.ಅಂಬೇಡ್ಕರ್, ಗಂಗಾಕಾವೇರಿ, ಕಲ್ಯಾಣಕುವರ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ಹಿರಿಯ ತಂತ್ರಜ್ಘ ವಿಷ್ಣುಕಾಂತ್.ಬಿ.ಜೆ ನಿರ್ಮಾಣ, ಆಕ್ಷನ್ ಕಟ್ ಹೇಳುವ ಜತೆಗೆ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸುಮಾರು 900 ವರ್ಷಗಳ ಹಿಂದೆ ನಡೆದ ಅಕ್ಕಮಹಾದೇವಿ ಕಥೆಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಶ್ರೀ ಬಸವಣ್ಣ ಮತ್ತು ಅಕ್ಕಮಹಾದೇವಿ ಬರೆದಿರುವ 21 ವಚನಗಳನ್ನು ಬಳಸಿಕೊಂಡು ನಿರ್ದೇಶಕರು ಮೂರು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.

ಬೀದರ್ ಮೂಲದವರಾದ ಸುರಕ್ಷಾ ಕೈರ ರವರು, 2018 ರಲ್ಲಿ ತೆರೆ ಕಂಡಿದ್ದ ‘ಸೇಡು’ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದವರು.

ಮೊದಲ ಚಿತ್ರದಲ್ಲಿ ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಸುಲಕ್ಷಾ ಕೈರಾ ಅವರು, ಸ್ನೇಹಿತ, ವಿದ್ಯಾ ಗಣೇಶ್, ಅಂದುಕೊಂಡಗಲ್ಲಾ ಜೀವನ, ಎಬಿ ಪಾಸಿಟಿವ್, ಮರಳಿ ಬಾ ಮನ್ವಂತರವೇ, ಮತ್ತೆ ಮಳೆ ಹೊಯ್ಯೂತ್ತಿದೆ… ಸೇರಿದಂತೆ ಕನ್ನಡ ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ.
ನಿರ್ದೇಶಕರು ಮೂರು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.
ಆರ್.ಪಳನಿಸೇನಾಪತಿ ಸಂಗೀತ ಸಾರಥ್ಯದಲ್ಲಿ ಲೈವ್ ವಾದ್ಯಗಳೊಂದಿಗೆ ಧ್ವನಿಗ್ರಹಣ ನಡೆಸಿರುವುದು ವಿಶೇಷ. ತಾರಾಗಣದಲ್ಲಿ ಸುಲಕ್ಷಾಕೈರಾ, ಶ್ವೇತಾ, ಬಿರಾದಾರ್, ಮೈಸೂರು ಹೆಲನ್, ಪಲ್ಲಕ್ಕಿ ರಾಧಾಕೃಷ್ಣ, ತಬಲಾನಾಣಿ, ಸುಚೇಂದ್ರಪ್ರಸಾದ್, ಅಭಿನಯಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!