‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿ ಲಾಯರ್ ಜಗದೀಶ್ ‘ಬಿಗ್ ಬಾಸ್’ ಬಗ್ಗೆ ಅಶ್ಲೀಲವಾಗಿ ಮಾತಾನಾಡಿ ಕಾರ್ಯಕ್ರಮವನ್ನು ಟೀಕಿಸಿದ್ದಾರೆ.
ಕ್ಯಾಮೆರಾ ಮುಂದೆ ನಿಂತ ಜಗದೀಶ್ ಬಿಗ್ ಬಾಸ್ ಕಾರ್ಯಕ್ರಮವನ್ನುಅಶ್ಲೀಲವಾಗಿ ಟೀಕಿಸಿದ್ದಾರೆ. ಅವರು ಹೇಳಿದ ಕೆಲವು ಪದಗಳಿಗೆ ಬೀಪ್ ಹಾಕಲಾಗಿದ್ದು, ಜಗದೀಶ್ ಮಾತನಾಡಿದ್ದಕ್ಕೆ ರಂಜಿತ್, ಉಗ್ರಂ ಮಂಜು ಅವರು ಉಗ್ರ ರೂಪ ತಾಳಿದ್ದಾರೆ. ಮನೆಯ ಕ್ಯಾಪ್ಟನ್ ಶಿಶಿರ್ ಅವರು ಪರಿಸ್ಥಿತಿ ಸುಧಾರಿಸಲು ಕಷ್ಟಪಟ್ಟಿದ್ದಾರೆ.
‘ನಿನ್ನ ಪ್ರೋಗ್ರಾಂ ನೀನೇ ಮಾಡಿಕೋ. ನಾನು ಹೊರಗೆ ಹೋಗ್ತೀನಿ. ಇಮೇಜ್ಗೆ ಡ್ಯಾಮೇಜ್ ಮಾಡಿಕೊಂಡು ನಾನು ಇಲ್ಲಿ ಇರಲ್ಲ. ಹೊರಗೆ ನೂರು ಜನಕ್ಕೆ ನಾನು ಊಟ ಹಾಕಿದ್ದೇನೆ. ಇಲ್ಲಿ ಊಟಕ್ಕೆ ರೂಲ್ಸ್ ಮಾಡ್ತಾರೆ. ಈಗಲೇ ಬಾಗಿಲು ತೆರೆಯಿರಿ. ನಾನು ನೇರವಾಗಿ ಹೊರಗೆ ಹೋಗುತ್ತೇನೆ. ಕಿರಿಕ್ ಮಾಡಿಕೊಂಡು ಮಜಾ ತೆಗೆದುಕೊಳ್ಳುವವರಿಗೆ ಬೆಲೆ ಜಾಸ್ತಿ. ಬಿಟ್ಟರೆ ನಾನು ಬ್ಯಾಗ್ ತೆಗೆದುಕೊಂಡು ಹೋಗುತ್ತೇನೆ’ ಎಂದು ಜಗದೀಶ್ ಹೇಳಿದ್ದಾರೆ.
ಜಗದೀಶ್ ಅವರಿಂದ ಈ ವರ್ತನೆ ಪದೇ ಪದೇ ಬಂದಿದ್ದಕ್ಕೆ ಬೇರೆ ಸ್ಪರ್ಧಿಗಳಿಗೆ ಕೋಪ ಬಂದಿದೆ. ತಮ್ಮನ್ನು ಖಂಡಿಸಿದವರ ವಿರುದ್ಧವೂ ಜಗದೀಶ್ ತಿರುಗಿ ಬಿದ್ದಿದ್ದಾರೆ. ‘ನನ್ನ ತಕರಾರು ಇರುವುದು ಬಿಗ್ ಬಾಸ್ ಬಳಿ. ನೀವು ಯಾರೂ ಮಾತನಾಡಬೇಕಿಲ್ಲ. ಟೈಮ್ ಪಾಸ್ ಮಾಡಲು ನಾನು ಬಂದಿಲ್ಲ. ಇಲ್ಲಿ ಬಂದು ಪರ್ಫಾರ್ಮೆನ್ಸ್ ಮಾಡಿದ್ದೇನೆ. 50 ಲಕ್ಷ ರೂಪಾಯಿ ಆಸೆ ನನಗೆ ಇಲ್ಲ. ಕಪ್ ಗೆಲ್ಲುವುದು ಕೂಡ ಬೇಕಿಲ್ಲ. ನಾನು ಗುಲಾಮಗಿರಿ ಮಾಡಲ್ಲ. ಬಿಗ್ ಬಾಸ್ ಮನೆಯಿಂದ ನಾನು ಹೀರೋ ಆಗಬೇಕಿಲ್ಲ’ ಎಂದಿದ್ದಾರೆ.
ಈ ಹಿಂದೆ ಬಿಗ್ ಬಾಸ್ ಶೋ ಬಗ್ಗೆ ಜಗದೀಶ್ ಕೆಟ್ಟದಾಗಿ ಮಾತನಾಡಿದ್ದರು. ಈ ಕಾರ್ಯಕ್ರಮವನ್ನು ಹೊರಗೆ ಹೋಗಿ ಬಯಲಿಗೆ ಎಳೆಯುವುದಾಗಿ ಹೇಳಿದ್ದರು. ಆದರೆ ಅದನ್ನು ಜೋಕ್ ರೀತಿಯಲ್ಲಿ ಸುದೀಪ್ ಟ್ರೀಟ್ ಮಾಡಿದ್ದರು. ತಾನಾಗಿಯೇ ಹೊರಗೆ ಹೋಗುತ್ತೇನೆ ಎಂದರೂ ಜಗದೀಶ್ ಅವರಿಗೆ ಬಿಗ್ ಬಾಸ್ ಸಮಾಧಾನ ಮಾಡಿ ಕೂರಿಸಿದ್ದರು.

Be the first to comment