ಹದಿನೇಳು ವರ್ಷಗಳ ನಂತರ ಮತ್ತೊಮ್ಮೆ ಭಾರತ ಹೆಮ್ಮೆಯ ಗರಿಯನ್ನು ಮುಡಿಗೇರಿಸಿಕೊಂಡು ನವಿಲಾಗಿ ನಲಿದಿದೆ. ಭಾರತೀಯ ಕುವರಿ, ಹರಿಯಾಣದ ಮಾನುಷಿ ಛಿಲ್ಲರ್ “ವಿಶ್ವಸುಂದರಿ” ಪಟ್ಟಕ್ಕೇರಿ ಮಿಂಚಿದ್ದಾಳೆ. ಮಡಿಕಲ್ ಓದುವವರು ಪುಸ್ತಕದ ಹುಳುಗಳು, ಅವರಿಗೆ ಓದುವುದು ಮಾತ್ರ ಗೊತ್ತು ಎಂಬ ಭಾವನೆಯನ್ನು ಈ ಸುಂದರಿ ಸುಳ್ಳು ಮಾಡಿದ್ದಾಳೆ. ಇದು ಮೆಡಿಕಲ್ ಓದುತ್ತಿರುವ ಮಾಡೆಲಿಂಗ್ ಕಥೆ…
ಮಾನುಷಿ ಛಿಲ್ಲರ್ ಡಾ.ಮಿತ್ರಾಬಸು ಛಿಲ್ಲರ್ ಮತ್ತು ಡಾ. ನೀಲಮ್ ಛಿಲ್ಲರ್ ದಂಪತಿಯ ಪುತ್ರಿ. ಓದಿನಲ್ಲೂ ಮುಂದಿರುವ ಮಾನುಷಿ ಪ್ರತಿಭಾವಂತೆ. ಇಂಗ್ಲೀಷ್ ಮೇಲೆ ಭಾರಿ ಹಿಡಿತ ಹೊಂದಿದ್ದಾರೆ. ಇವರು ಸೌಂದರ್ಯ ಸ್ಪರ್ಧೆಗೆ ನೊಂದಾಯಿಸಿಕೊಂಡಾಗ ಮೆಡಿಸಿನ್ ಮತ್ತು ಸರ್ಜರಿಯಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಕೂಚುಪುಡಿ ನೃತ್ಯದಲ್ಲೂ ಸೈ ಎನಿಸಿಕೊಂಡಿರುವ ಮಾನುಷಿ ಸಾಕಷ್ಟು ಮಾಡೆಲಿಂಗ್ ಹಾಗೂ ಪ್ರಿಂಟ್‍ಆ್ಯಡ್‍ಗಳಲ್ಲಿ ಕಾಣಿಸಿಕೊಂಡಿದ್ದರು. ಮಿಸ್ ಹರಿಯಾಣ ಟೈಟಲ್ ಗೆದ್ದಿರುವ ಈ ಭಾರತೀಯ ನಾರಿ, ಫೆಮಿನಾ ಮಿಸ್ ಇಂಡಿಯಾ ಪೇಜೆಂಟ್ ನಂತರ ಚೀನಾದಲ್ಲಿ ನಡೆದ 2017ರ ವಿಶ್ವ ಸುಂದರಿ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 2016ರ ವಿಶ್ವ ಸುಂದರಿ ವಿಜೇತೆ ಸ್ಟೇಫಾನಿ ಡೆಲ್ ವ್ಯಾಲೆ ಮಾನುಷಿಗೆ ಮಿಸ್ ವಲ್ರ್ಡ್ ಕಿರೀಟ ತೊಡಿಸಿದರು. ಫೂಲ್ ಸಿಂಗ್ ವೈದ್ಯಕೀಯ ಕಾಲೇಜಿನ ಪದವೀಧರೆಯಾಗಿರುವ ಮಾನುಷಿ “ನಾನು ತಾಯಿಗೆ ಹೆಚ್ಚು ಸನಿಹದಲ್ಲಿರುವುದರಿಂದ ಈ ಪದವಿ ಅವರಿಗೆ ಸೇರಬೇಕು. ನಾನು ಈ ಮಟ್ಟಕ್ಕೆ ಬೆಳೆಯಲು ನನ್ನ ತಾಯಿ ಸ್ಪೂರ್ತಿ” ಎಂದಿದ್ದಾರೆ.
Pingback: Login Area
Pingback: plumbing contractor Boonville NC