ಜಾಕ್ವೆಲಿನ್ ನಟನೆಯ ಪೋಸ್ಟರ್ ಬಿಡುಗಡೆ

‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿರುವ ಫಸ್ಟ್ ಲುಕ್ ಮೋಷನ್ ಪೋಸ್ಟರ್, ಪಾತ್ರದ ಪರಿಚಯ ಬಿಡುಗಡೆ ಆಗಿದ್ದು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಪೋಸ್ಟರ್ ರಿಲೀಸ್ ಆಗಿದೆ. ‘ಗದಂಗ್ ರಕ್ಕಮ್ಮ’ ಎಂಬ ರಗಡ್ ಪಾತ್ರದಲ್ಲಿ ಶ್ರೀಲಂಕಾ ಚೆಲುವೆ ಜಾಕ್ವೆಲಿನ್ ನಟಿಸುತ್ತಿದ್ದು ಪೋಸ್ಟರ್ ಚಿತ್ರ ಪ್ರೇಮಿಗಳ ಗಮನ ಸೆಳೆಯುತ್ತಿದೆ.
ನಟಿ ಜಾಕ್ವೆಲಿನ್ ಅವರು ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಹಾಡಿಗೆ ಡ್ಯಾನ್ಸ್ ಮಾಡಬೇಕಿತ್ತು. ಆದರೆ ಕೊನೆಗೆ ಜಾಕ್ವೆಲಿನ್ ಈ ಸಿನಿಮಾದಲ್ಲಿ ನಟನೆ ಕೂಡ ಮಾಡಿದ್ದಾರೆ. ನಟ ಸುದೀಪ್ ಚಿತ್ರದಲ್ಲಿ ಡ್ಯಾನ್ಸ್ ಮಾಡುವುದರ ಜೊತೆಗೆ ಕೆಲವು ಸೀನ್‌ಗಳಲ್ಲಿ ನಟಿಸಿದ್ದಾರೆ.
ಭಾರತೀಯ ಸಿನಿಮಾಗಳಲ್ಲಿ ಯಾವುದು ಹೆಚ್ಚು ನಿರೀಕ್ಷೆ ಮೂಡಿಸಿದೆ ಎನ್ನುವ ಕುರಿತು ಐಎಂಡಿಬಿ ಸಂಸ್ಥೆ ಪ್ರಕಟಿಸಿದ ಪಟ್ಟಿಯಲ್ಲಿ ವಿಕ್ರಾಂತ್ ರೋಣ ಸಿನಿಮಾ ಮೊದಲ ಸ್ಥಾನದಲ್ಲಿದೆ.
ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರದ ರಿಲೀಸ್ ದಿನಾಂಕವೂ ಪ್ರಕಟವಾದ ಬಳಿಕ ‘ವಿಕ್ರಾಂತ್ ರೋಣ’ ಸಿನೆಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!