‘ಜಾಕಿ’ ಚಿತ್ರ ಮತ್ತೆ ಬಿಡುಗಡೆ: ಅಭಿಮಾನಿಗಳಿಂದ ಸಂಭ್ರಮಾಚರಣೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಅಭಿನಯದ ‘ಜಾಕಿ’ ಚಿತ್ರ ರೀ ರಿಲೀಸ್  ಗೊಂಡಿದ್ದು, ಚಿತ್ರಮಂದಿರದ ಮುಂದೆ ಪಟಾಕಿ ಸಿಡಿಸಿ, ಅಪ್ಪು  ಅಭಿಮಾನಿಗಳು  ಸಿನಿಮಾ ಬಿಡುಗಡೆಯನ್ನು ಹಬ್ಬದಂತೆ ಸಂಭ್ರಮಿಸಿದ್ದಾರೆ.

ಕೆಆರ್ ಜಿ ಸ್ಟುಡಿಯೋಸ್ ಸಂಸ್ಥೆ ‘ಜಾಕಿ’ ಚಿತ್ರವನ್ನು ರೀ ರಿಲೀಸ್ ಮಾಡಿದೆ. ನವೀಕರಣಗೊಂಡ ಆಡಿಯೋ ಜತೆಗೆ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದ್ದುಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ. ಕಟೌಟ್, ಬ್ಯಾನರ್, ಹಾರ, ಪಟಾಕಿ ಥಿಯೇಟರ್‌ಗಳಲ್ಲಿ ಮುಗಿಲು ಮುಟ್ಟಿದೆ. ತೆರೆಮೇಲೆ ನೆಚ್ಚಿನ ನಟನನ್ನು ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಬೆಂಗಳೂರಿನ ನರ್ತಕಿ ಹಾಗೂ ಪ್ರಸನ್ನ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದೆ. ಈ ಎರಡು ಥಿಯೇಟರ್‌ಗಳಲ್ಲಿ ಬೆಳಗಿನ ಜಾವವೇ ‘ಜಾಕಿ’ ಸಿನಿಮಾ ಶೋಗಳು ಆರಂಭವಾಗಿತ್ತು. ‘ಜಾಕಿ’ ಸಿನಿಮಾ ಮೊದಲ ಬಾರಿ ಬಿಡುಗಡೆಯಾದಾಗ ಇದೇ ರೀತಿಯ ರೆಸ್ಪಾನ್ಸ್, ಸೆಲೆಬ್ರೇಷನ್ ಕಂಡು ಬಂದಿತ್ತು. ಇದೀಗ ಅದು ಪುನರಾವರ್ತನೆ ಆಗುತ್ತಿದೆ.

ಥಿಯೇಟರ್ ಗಳ ಮುಂದೆ ಹೌಸ್‌ಫುಲ್ ಬೋರ್ಡ್‌ಗಳು ಬಿದ್ದಿವೆ. ಇದೇ ವೇಳೆ ‘ಜಾಕಿ’ ಸಿನಿಮಾ ನೋಡಿ ಅಭಿಮಾನಿಗಳು ಅಪ್ಪು ನೆನೆದು ಕಣ್ಣೀರಿಟ್ಟಿದ್ದಾರೆ. ನೆಚ್ಚಿನ ನಟನ ಕಳೆದುಕೊಂಡ ನೋವು ಅಭಿಮಾನಿಗಳಲ್ಲಿ ಇನ್ನು ಮರೆಯಾಗಿಲ್ಲ.

14 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ‘ಜಾಕಿ’ ಚಿತ್ರವನ್ನು ದುನಿಯಾ ಸೂರಿ ನಿರ್ದೇಶಿಸಿದ್ದರು. ಅಪ್ಪು ಜತೆಗೆ ಭಾವನಾ ಮೆನನ್ (Bhavana Menan) ನಾಯಕಿಯಾಗಿ ಮಿಂಚಿದ್ದರು. ವಿ. ಹರಿಕೃಷ್ಣ  ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ ಬಂದ ‘ಜಾಕಿ’ ಆಲ್ಬಮ್ ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ರಂಗಾಯಣ ರಘು, ಶೋಭರಾಜ್ ಸೇರಿದಂತೆ ಅನುಭವಿ ಕಲಾವಿದರು ಚಿತ್ರದಲ್ಲಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!