ಐ.ಪಿ.ಎಲ್ ಕೀರ್ತನೆಗಳ ಕರಾಳ ಮುಖ!

ಒಂದು ಕಾಲದಲ್ಲಿ ಕ್ರಿಕೆಟ್‌ ಆಟವು ಮನರಂಜನೆ ಕೊಡುತ್ತದೆಂದು ಹೇಳುತ್ತಿದ್ದರು, ಕಾಲ ಬದಲಾದಂತೆ ಇದು ವ್ಯಾಪಾರ ಎನ್ನುವಂತೆ ಆಗಿದೆ.ಅದರಲ್ಲೂ ಐಪಿಎಲ್ ಮ್ಯಾಚ್‌ದಲ್ಲಿ ಬೆಟ್ಟಿಂಗ್‌ದಂದೆ ಶುರುವಾಗಿ ಹಲವು ಕುಟುಂಬಗಳು ಕಷ್ಟದ ಸುಳಿಗೆ ಸಿಲುಕಿದೆ.ಇಂತಹುದೆ ಒಂದಷ್ಟು ನೈಜ ಘಟನೆಗಳನ್ನು ಹೆಕ್ಕಿಕೊಂಡು ಅದನ್ನು ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರದ ಮೂಲಕ ತೋರಿಸಲಾಗಿದೆ. ಬಿಡುಗಡೆ ಪೂರ್ವ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ಕುಮಾರ್ ಹೇಳುವಂತೆ ಪ್ರತಿ ವರ್ಷ ಬೆಟ್ಟಿಂಗ್‌ನಿಂದ ಸೋತು ಸುಮಾರು 200 ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಶೇಕಡ 70ರಷ್ಟು ಜನರ ಬದುಕು ಸಾಲದ ಸುಳಿಯಲ್ಲಿ ಸಿಲುಕಿದೆ.

ನಾಲ್ಕು ವಿಭಾಗಗಳಲ್ಲಿ ಕತೆಯು ಸಾಗಲಿದ್ದು, ಒಂದಕ್ಕೊಂದು ಸಂಬಂದ ತರಿಸುತ್ತದೆ.ಇದಕ್ಕೆ ಪೂರಕವಾಗುವಂತೆ ಬೆಂಗಳೂರು, ಮಂಗಳೂರು, ಮಂಡ್ಯ ಮತ್ತು ಬೆಳಗಾವಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹ್ಯೂಮರಸ್ ಹಾಗೂ ಎಮೋಶನ್ಸ್ತುತುಂಬಿಕೊಂಡಿದ್ದು, ನೋಡುಗನಿಗೆ ಕ್ಲೈಮಾಸ್ಕ್ ಕಾಡುತ್ತದೆ. ನಾನೇಕೆ ಬೆಟ್ಟಿಂಗ್‌ ಆಡಬೇಕೆಂಬ ಪ್ರಶ್ನೆ ಮೂಡುತ್ತದೆ.ಟ್ರೈಲರ್ ನಾಲ್ಕು ಲಕ್ಷ ಜನರು ವೀಕ್ಷಿಸಿದ್ದಾರೆಂದು ಹೇಳಿದರು.

ವಕೀಲರಾಗಿ ನಟಿಸಿರುವ ತಬಲನಾಣಿ ಮಾತನಾಡಿ ‘ಕೆಮಿಷ್ಟಿ ಆಫ್‌ ಕರಿಯಪ್ಪ’ ಸಿನಿಮಾದಿಂದ ನನಗೆ ಕಾರ್ಡ್ ನವೀಕರಣವಾದಂತೆ, ಎಂಟು ಚಿತ್ರಗಳಲ್ಲಿ ಅವಕಾಶ ದೊರಕಿತು.ಒಂದು ವಿಷಯ,ತಂಡಗೆದ್ದರೆ ಅಷ್ಟು ಜನರಿಗೆ ಅನುಕೂಲವಾಗುತ್ತದೆ. ಯಾರಲ್ಲೂಧೋರಣೆಗುಣಇಲ್ಲ. ಅದರಿಂದಲೇಉತ್ತಮಚಿತ್ರಕೊಡಲು ಸಾಧ್ಯವಾಯಿತು.ದಯವಿಟ್ಟು ನಿಮ್ಮಗಳ ತಂಡವನ್ನು ಹಾಳು ಮಾಡಿಕೋಬೇಡಿ. ಗುಂಪು ಚೆನ್ನಾಗಿದ್ದರೆತಂಪುಕೊಡುತ್ತದೆ.ನೋಡಿದವರು ಖುಷಿ ಪಡ್ತಾರೆ.ಕಷ್ಟಗಳು ಪಾಠ ಕಲಿಸುತ್ತದೆ ಎಂದು ಅನುಭವಗಳನ್ನುಹಂಚಿಕೊಂಡರು.ತಾರಗಣದಲ್ಲಿಅರುಣಾಬಾಲರಾಜ್,ಗುರುರಾಜಹೊಸಕೋಟೆ, ತರಂಗವಿಶ್ವ ಮುಂತಾದವರ ನಟನೆಇದೆ.

ನ್ಯಾಯಧೀಶರಾಗಿ ಕಾಣಿಸಿಕೊಂಡಿರುವ ಸುಚೇಂದ್ರಪ್ರಸಾದ್, ಮಧ್ಯಮ ವರ್ಗದ ಕುಟುಂಬದವನಾಗಿ ರಾಜೇಶ್ ‌ನಟರಂಗ, ಪತ್ನಿಯಾಗಿ ಅಪೂರ್ವ ಭಾರದ್ವಾಜ್, ನವಪ್ರತಿಭೆ ದೀಪಾ ಜಗದೀಶ್, ಡ್ರಾಮಾ ಜ್ಯೂನಿಯರ್ ಪುಟ್ಟರಾಜು ಮತ್ತು ಮಹೇಂದ್ರ ಪ್ರಸಾದ್, ಯಶಸ್‌ ಅಭಿ, ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ವೀರ ಸಮರ್ಥ್, ಛಾಯಾಗ್ರಾಹಕ ಶಿವಸೇನ ಉಪಸ್ತಿತರಿದ್ದು ಚಿತ್ರದ ಸಾರವನ್ನುತೆರೆದಿಟ್ಟರು. ನಿರ್ದೇಶಕರು ಸಮಾನ ಮನಸ್ಕರುಗಳ ಜೊತೆ ಸೇರಿಕೊಂಡು ನಿರ್ಮಾಣ ಮಾಡಿರುವುದು ಹೊಸ ಅನುಭವ. ಸಿನಿಮಾವುಇದೇ ತಿಂಗಳು ಕೊನೆವಾರದಂದುತೆರೆಗೆ ಬರುವ ಸಾದ್ಯತೆ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!