‘ಟೇಕ್ವಾಂಡೋ ಗರ್ಲ್’ ಸಿನಿಮಾದ ಮೂಲಕ ಆರನೇ ತರಗತಿ ವಿದ್ಯಾರ್ಥಿನಿ ಸ್ಪರ್ಶಳನ್ನು ಋತುಸ್ಪರ್ಶ ಹೆಸರಲ್ಲಿ ಸಿನಿಮಾ ಪರದೆಗೆ ಪರಿಚಯಿಸಲಾಗುತ್ತಿದೆ.
ಸ್ಪರ್ಶ ಹುಟ್ಟಿದ್ದು ಬೆಂಗಳೂರಿನಲ್ಲಿ. ಈಕೆ ಶಿವಮೊಗ್ಗದ ಸುಮಿತ ಮತ್ತು ಮುಂಬೈ ಮೂಲದ ಪ್ರವೀಣ್ ದಂಪತಿಯ ಏಕೈಕ ಪುತ್ರಿ. ಗಾರ್ಡನ್ ಸಿಟಿ ಪಬ್ಲಿಕ್ ಸ್ಕೂಲ್ ಮಲ್ಲೇಶ್ವರದಲ್ಲಿ ಆರನೇ ತರಗತಿ ವಿದ್ಯಾರ್ಥಿನಿಯಾಗಿರುವ ಸ್ಪರ್ಶ ಪ್ರತಿಭಾವಂತೆ. ಈಕೆ ಕಥಕ್, ಯಕ್ಷಗಾನ, ಹಿಪ್ ಹಾಪ್, ಬಾಲಿವುಡ್, ಭರತನಾಟ್ಯ ಎಲ್ಲವನ್ನೂ ಕಲಿಯುತ್ತಿದ್ದಾಳೆ. ತಾನಾಗಿಯೇ ಕೊರಿಯೋಗ್ರಫಿ ಮಾಡುವ ಧೈರ್ಯವನ್ನೂ ತೋರಿಸಿದ್ದಾಳೆ.
ತಾಯಿಗೆ ಈಕೆಯ ಡಾನ್ಸಿಂಗ್ ಪ್ರತಿಭೆಯನ್ನು ಸಿನಿಮಾದ ಮೂಲಕ ಬೆಳಕಿಗೆ ತರುವ ಮನಸಾಗಿ ಚಿತ್ರ ನಿರ್ಮಾಣ ಆಗಿದೆ. ನಿರ್ದೇಶಕರಾಗಿ ಎಂಟ್ರಿ ನೀಡಿದ ರವೀಂದ್ರ ವಂಶಿ ಟೇಕ್ವಾಂಡೋ ಮೂಲಕ ಬಾಲಕಿಯ ಮತ್ತೊಂದು ಮುಖವನ್ನು ಅನಾವರಣ ಮಾಡಿದ್ದಾರೆ.
ಟೇಕ್ವಾಂಡೋ ಎನ್ನುವುದು ಒಂದು ಕೊರಿಯನ್ ಸಮರ ಕಲೆ. ಇದರ ಹಿನ್ನೆಲೆಯೂ ಕತೆಯಲ್ಲಿರುವ ಕಾರಣ ಕೊರಿಯನ್ ಭಾಷೆಯ ಅಗತ್ಯವೂ ಚಿತ್ರಕ್ಕೆ ಇತ್ತು. ಕೊರಿಯನ್ ಸ್ಪರ್ಧೆಯನ್ನು ತೋರಿಸುವಾಗ ನಿಜವಾದ ಕೊರಿಯನ್ ಭಾಷೆಯನ್ನೇ ಚಿತ್ರದಲ್ಲಿ ಬಳಸಲಾಗಿದೆ. ಟೇಕ್ವಾಂಡೋ ಪ್ರದರ್ಶನದ ನೈಜತೆಗಾಗಿ ಟೇಕ್ವಾಂಡೋ ಮಾಸ್ಟರ್ ವಿಫಾ ರವಿಯವರನ್ನೇ ಬಳಸಿಕೊಳ್ಳಲಾಗಿದೆ. ಇವರು ಋತುಸ್ಪರ್ಶ ಗುರುಗಳೂ ಹೌದು. ಗುರುಪುತ್ರ, ಹಾಗೂ ಸಹಪಾಠಿಯೂ ಆದ ಜ್ಯೋತಿಷ್ ನೆಗೆಟಿವ್ ಪಾತ್ರ ಮಾಡಿದ್ದಾನೆ ಎಂದಿದ್ದಾರೆ ನಿರ್ಮಾಪಕಿ ಸುಮಿತ.
ಮಗಳ ಚಿತ್ರ ಎನ್ನುವ ಮಮತೆಯಿಂದ ಸಿನಿಮಾ ನಿರ್ಮಾಣಕ್ಕೆ ಇಳಿದ ಸುಮಿತಗೆ ಈ ಸಿನಿಮಾ ಹೊಸದೊಂದು ಅನುಭವ ಕಲಿಸಿದೆ. ಮಗಳ ಪಾತ್ರಕ್ಕೆ ತಕ್ಕಂತೆ ಹೊಂದುವ ಕತೆ ಮಾಡಿದ ನಿರ್ದೇಶಕ ರವೀಂದ್ರ ವಂಶಿಯಿಂದ ಹಿಡಿದು ಚಿತ್ರತಂಡದ ಪ್ರತಿಯೊಬ್ಬರಿಗೂ ಇವರು ತಮ್ಮ ಧನ್ಯವಾದ ಹೇಳಿದ್ದಾರೆ.
Be the first to comment