ಚಿತ್ರ: ಇಂಟರ್ವಲ್
ನಿರ್ದೇಶನ: ಭರತ್ ವರ್ಷ
ತಾರಾ ಬಳಗ: ಶಶಿ ರಾಜ್, ಪ್ರಜ್ವಲ್ ಕುಮಾರ್ ಗೌಡ, ಸುಕೇಶ್ ಸುಕಿ, ಚರಿತ್ರ ರಾವ್, ಸಹನಾ ಆರಾಧ್ಯ, ರಂಗನಾಥ್ ಇತರರು
ರೇಟಿಂಗ್: 3.5
ತಮಗೆ ಇಷ್ಟ ಬಂದಂತೆ ಬದುಕುತ್ತಿರುವ ಯುವಕ, ಯುವತಿಯರಿಗೆ ಬದುಕಿನ ಜವಾಬ್ದಾರಿಯ ಬಗ್ಗೆ ತಿಳಿ ಹೇಳುವ ಚಿತ್ರ ಈ ವಾರ ಬಿಡುಗಡೆ ಆಗಿರುವ ಇಂಟರ್ವಲ್.
ಚಿತ್ರದಲ್ಲಿ ತುಂಟಾಟದಲ್ಲಿ ಕಾಲ ಕಳೆಯುವ ಗ್ರಾಮೀಣ ಭಾಗದ ಮೂವರು ಯುವಕರ ಕಥೆ ಇದೆ. ಇಂಜಿನಿಯರಿಂಗ್ ಓದಿದ ಬಳಿಕ ಕೆಲಸ ಕಂಡುಕೊಳ್ಳಲು ಪರದಾಡುವ ಈ ಯುವಕರು ನಗರಕ್ಕೆ ಬಂದು ಬಳಿಕ ಪ್ರೀತಿಯಲ್ಲಿ ಬೀಳುತ್ತಾರೆ. ನಗರ ಜೀವನ ಉತ್ತಮ ಎಂದು ಹಳ್ಳಿಯಿಂದ ವಲಸೆ ಬರುವ ಯುವಕರು ಬದುಕನ್ನು ಸಾಗಿಸಲು ಯಾವ ದಾರಿಯನ್ನು ಕಂಡುಕೊಳ್ಳುತ್ತಾರೆ? ಅವರಿಗೆ ಎದುರಾಗುವ ಸಮಸ್ಯೆ ಏನು ಎನ್ನುವುದನ್ನು ತಿಳಿದುಕೊಳ್ಳಲು ಚಿತ್ರವನ್ನು ನೋಡಬೇಕಿದೆ.
ನಿರ್ದೇಶಕರು ಚಿತ್ರದಲ್ಲಿ ಯುವ ಪೀಳಿಗೆಗೆ ಉತ್ತಮ ಸಂದೇಶವನ್ನು ನೀಡುವ ಯತ್ನವನ್ನು ಮಾಡಿದ್ದಾರೆ. ಬದುಕಿನಲ್ಲಿ ವಿದ್ಯೆ ಎಷ್ಟು ಮುಖ್ಯ ಎನ್ನುವ ಜೊತೆಗೆ ಬದುಕು ರೂಪಿಸಿಕೊಳ್ಳಲು ಹುಡುಕುವ ದಾರಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.
ಚಿತ್ರದ ಸಂಭಾಷಣೆ, ಸಂಗೀತ, ಛಾಯಾಗ್ರಹಣ ಗಮನ ಸೆಳೆಯುತ್ತದೆ. ಶಶಿ ರಾಜ್, ಸುಕೇಶ್ ಹಾಗೂ ಪ್ರಜ್ವಲ್ ತಮ್ಮ ನಟನೆಯ ಮೂಲಕ ಗಮನ ಸೆಳೆಯುತ್ತಾರೆ. ನಟಿಯರಾದ ಸಹನ ಆರಾಧ್ಯ, ಚರಿತ್ರ ರಾವ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಮೀಕ್ಷಾ ಅವರ ನಟನೆ ಉತ್ತಮವಾಗಿದೆ. ಉಳಿದಂತೆ ರಂಗನಾಥ್, ದಾನಂ ಶಿವಮೊಗ್ಗ ಚಿತ್ರದ ಓಟಕ್ಕೆ ಕೊಡುಗೆ ನೀಡಿದ್ದಾರೆ.
ಯುವ ಜನಾಂಗ ಜವಾಬ್ದಾರಿಯಿಂದ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ತರಲೆ, ಪ್ರೀತಿಯೇ ಬದುಕಲ್ಲ ಎಂದು ಸಂದೇಶ ಸಾರುವ ಈ ಚಿತ್ರವನ್ನು ಯುವಕ ಯುವತಿಯರು ನೋಡಬೇಕಿದೆ.

Be the first to comment