ಜಿಕೆ ಶಶಿರಾಜ್ ದೊರೆ

ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಜಿಕೆ ಶಶಿರಾಜ್ ದೊರೆ

ಭರವಸೆಯ ನಟ, ನಿರೂಪಕ, ಆರ್‌ ಜೆ, ವಿಜೆ, ನಿರ್ದೇಶಕ ಇತರೆ ಬಹುಮುಖ ಪ್ರತಿಭೆ ಹೊಂದಿರುವ ಯುವ ಪ್ರತಿಭೆ ಜಿಕೆ ಶಶಿ ರಾಜ್ ದೊರೆ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ.

ರಂಗಭೂಮಿಯಿಂದ ಸಿನಿಮಾಗೆ ಪ್ರಯಾಣ

ಸೌತ್ ಬೆಂಗಳೂರಿನಲ್ಲಿ ಜನಿಸಿದ ಶಶಿರಾಜ್, ಬಾಲ್ಯದಿಂದಲೇ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದರು. ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಶಾಲೆಯಲ್ಲಿ ಆಯೋಜಿಸಲಾಗುತ್ತಿದ್ದ ಕ್ಲಾಸ್ ಇಂಟರ್‌ಕ್ಲಾಸ್ ನಾಟಕ ಸ್ಪರ್ಧೆಗಲ್ಲಿ ಭಾಗವಹಿಸುತ್ತಿದ್ದರಂತೆ. ಜೊತೆಗೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದ ಅವರು, ಸಿನಿಮಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವ ಕನಸನ್ನು ಹೊಂದಿದ್ದು ಜೊತೆಗೆ ಅನಾಥಾಶ್ರಮದ ಮಕ್ಕಳಿಗೆ ನಾಟಕ ಮತ್ತು ನೃತ್ಯ ಕಲಿಸುವ ಮೂಲಕ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

ಜಿಕೆ ಶಶಿರಾಜ್ ದೊರೆ

ಶಾರ್ಟ್ ಫಿಲ್ಮ್‌ಗಳಿಂದ ಸಿನಿಮಾಗೆ ಪಾದಾರ್ಪಣೆ

2014ರಿಂದ ಶಾರ್ಟ್ ಫಿಲ್ಮ್‌ಗಳನ್ನು ನಿರ್ದೇಶಿಸಲು ಆರಂಭಿಸಿದ ಶಶಿರಾಜ್ ಗೆ ಅವರ ಶಾರ್ಟ್ ಫಿಲ್ಮ್‌ಗಳು ಕನ್ನಡ ಚಿತ್ರರಂಗದ ಗಮನ ಸೆಳೆದು ಅವರಿಗೆ 2015 ರಲ್ಲಿ ನ್ಯಾಷನಲ್ ಬೆಸ್ಟ್ ಶಾಟ್೯ ಫಿಲ್ಮ್ ಪ್ರಶಸ್ತಿ ಬಂದಿದೆ. ಶಾರ್ಟ್ ಫಿಲ್ಮ್‌ಗಳಿಂದಲೇ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶಗಳು ಸಿಗಲು ಕಾರಣವಾಗಿದೆ ಎಂದರು. ಅವರ ಮೊದಲ ಸಿನಿಮಾ ‘ಚೂರಿಕಟ್ಟೆ’, ನಂತರ ‘ತಾಯಿಗೆ ತಕ್ಕ ಮಗ’, ‘ರುಸ್ತುಂ’, ‘ಶಕೀಲಾ’, ‘ಅವಾರಿಸ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಜಿಕೆ ಶಶಿರಾಜ್ ದೊರೆ

ಶಂಕರ್ ನಾಗ್ ಅವರ ಪ್ರೇರಣೆ

ಶಶಿರಾಜ್‌ಗೆ ಶಂಕರ್ ನಾಗ್ ಅವರು ದೊಡ್ಡ ಪ್ರೇರಣೆಯಂತೆ. ಶಂಕರ್ ನಾಗ್ ಅವರ ಸಿನಿಮಾಗಳಷ್ಟೇ ಅಲ್ಲದೆ ಅವರ ಸಾಮಾಜಿಕ ಕೆಲಸಗಳು ಕೂಡ ಅವರನ್ನು ಬಹಳವಾಗಿ ಪ್ರಭಾವಿಸಿದ್ದು, ಇದೇ ಕಾರಣದಿಂದ ಶಂಕರ್ ನಾಗ್ ಅವರಂತೆ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಆಸೆಯಿಂದ ‘ದೇವರ ಮಾರ್ಗ ಮಾನವ ಧರ್ಮ’ ಎಂಬ ಟ್ರಸ್ಟ್‌ನ್ನು ಸ್ಥಾಪಿಸಿದ್ದಾರೆಂದು ಹೇಳಿಕೊಂಡಿದ್ದಾರೆ.

ಸಿನಿಮಾ ಮತ್ತು ಸೀರಿಯಲ್‌

ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡುತ್ತಾ, ಸೀರಿಯಲ್‌ಗಳು ಮನೆಮನೆಗೆ ತಲುಪುತ್ತವೆ ಎಂದು ಹೇಳುತ್ತಾರೆ. ‘ಮುದ್ದು ಲಕ್ಷ್ಮಿ’ ಅವರ ಮೊದಲ ಸೀರಿಯಲ್‌ ಆಗಿದೆಯಂತೆ. ದೊಡ್ಡ ಸಿನಿಮಾಗಳಲ್ಲಿ ಅಭಿನಯಿಸುವ ಆಸೆ ಹೊಂದಿರುವ ಶಶಿರಾಜ್, ಅವರಿಗೆ ಇಂಟರ್ನ್ಯಾಷನಲ್ ವಿಜೆ ಅವಾರ್ಡ್ – 2017 ಹೈದರಾಬಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಸಿಕ್ಕಿದೆ. ಮತ್ತು ಕೇರಳದ ಕರ್ನಾಟಕ ಪ್ರೈಡ್ -2017 ಪ್ರಶಸ್ತಿ ಕೂಡ ಬಂದಿದೆ. ಇದರೊಂದಿಗೆ
ಆಸ್ಕರ್, ನ್ಯಾಷನಲ್ ಅವಾರ್ಡ್ ಮತ್ತು ಫಿಲಂ ಫೇರ್ ಪ್ರಶಸ್ತಿಗಳನ್ನು ಪಡೆಯುವ ಕನಸನ್ನು ಹೊಂದಿದ್ದಾರೆ.

ಜಿಕೆ ಶಶಿರಾಜ್ ದೊರೆ

ನಿರ್ದೇಶಕನಾಗಿ ಸಾಧನೆ

ನಟನೆಯ ಜೊತೆಗೆ ನಿರ್ದೇಶಕನಾಗಿಯೂ ಹೆಸರು ಮಾಡಿರುವ ಶಶಿರಾಜ್, ‘ಸಿಂಹದ ಹಾದಿ’ ಟೆಲಿಫಿಲ್ಮ್ ಅನ್ನು ನಿರ್ದೇಶಿಸಿದ್ದು. ಈ ಚಿತ್ರ ವಿಷ್ಣುವರ್ಧನ್ ಅಭಿಮಾನಿಗಳ ಕತೆಯನ್ನು ಆಧರಿಸಿದೆಯಂತೆ. ಈ ಚಿತ್ರವು ಈಗಾಗಲೇ ವಿವಿಧ ದೇಶಗಳ ಫಿಲಂ ಫೆಸ್ಟಿವಲ್‌ಗಳಲ್ಲಿ ಪ್ರದರ್ಶನಗೊಂಡು ಅನೇಕ ಪ್ರಶಸ್ತಿಗಳು ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!