ಯಶ್ ಶೆಟ್ಟಿ, ಸಲಗ ಖ್ಯಾತಿಯ ಕೆಂಡ ಶ್ರೇಷ್ಠ ಮತ್ತು ಅಂಜನ್ ದೇವ್, ಪ್ರಜ್ವಲ್ ಶೆಟ್ಟಿ, ಹರಿ ಮುಖ್ಯಭೂಮಿಕೆಯಲ್ಲಿರುವ ʼಇನ್‌ಸ್ಟಂಟ್ ಕರ್ಮ ʼ ಸಿನಿಮಾ ಮಾರ್ಚ್ ನಲ್ಲಿ ಚಿತ್ರಮಂದಿರಗಳಿಗೆ ಬರಲಿದೆ.
ಚಿತ್ರವು ಸಂಪೂರ್ಣವಾಗಿ ಸಿದ್ಧವಾಗಿದೆ.ಇದನ್ನು ಮಾರ್ಚ್ ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸುತ್ತಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಜನವರಿ 28ಕ್ಕೆ ಬಿಡುಗಡೆ ಆಗಲಿದೆ.
ಬ್ರೇಕ್ ಫ್ರೀ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸಂತೋಷ್ ಮಹಾಂತೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರವು ಗ್ಯಾಂಗ್‌ಸ್ಟರ್ ಕ್ರೈಮ್ ಥ್ರಿಲ್ಲರ್ ಆಗಿದ್ದು, ಪ್ರತಿಯೊಬ್ಬ ಮನುಷ್ಯನಿಗೆ ಸಂಬಂಧಿಸಿದ ಭಾವನೆಯನ್ನು ಹೊಂದಿದೆ. ಭಾಸ್ಕರ್ ರೆಡ್ಡಿ ಛಾಯಾಗ್ರಹಣ, ಸಂಕಲನ ಸುರೇಶ್ ಆರ್ಮುಗಂ, ಸಂಗೀತ ನಿರ್ದೇಶನ ಸೂರಜ್ ಜೋಯಿಸ್ ಅವರದ್ದು ಆಗಿದೆ.
ಮುಂದಿನ ದಿನಗಳಲ್ಲಿ ಪ್ರಮೋಷನಲ್ ಹಾಡು, ಪೋಸ್ಟರ್‌ಗಳು, ಟ್ರೈಲರ್ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ. ಉತ್ತಮ ಕಥೆ, ಹೊಸ ಶೈಲಿಯ ನಿರೂಪಣೆ, ನಟರ ಉತ್ತಮ ಅಭಿನಯದ ಕಾರಣದಿಂದ ಸಿನಿಮಾದ ಬಗ್ಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ಕೊಡುವ ಬಗ್ಗೆ ಚಿತ್ರತಂಡ ವಿಶ್ವಾಸ ಇಟ್ಟುಕೊಂಡಿದೆ. ಚಲನಚಿತ್ರವನ್ನು ಚಿತ್ರರಂಗದ ಕೆಲವು ಪರಿಚಿತ ವ್ಯಕ್ತಿಗಳಿಗೆ ತೋರಿಸಲಾಗಿದೆ. ಅವರ ಸಲಹೆಯಂತೆ ಚಿತ್ರತಂಡವು ನೇರವಾಗಿ OTT ನಲ್ಲಿ ಬಿಡುಗಡೆ ಮಾಡದೆ ಥಿಯೇಟರ್ ನಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದೆ.
Be the first to comment