ಚಿತ್ರ: ಟೇಕ್ವಾಂಡೋ ಗರ್ಲ್
ನಿರ್ದೇಶನ: ರವೀಂದ್ರ ವಂಶಿ
ತಾರಾಗಣ: ಋತು ಸ್ಪರ್ಶ, ಪಲ್ಲವಿ ರಾವ್, ರವೀಂದ್ರ ವಂಶಿ, ಇತರರು
ರೇಟಿಂಗ್: 3.5
ಬಡತನ, ಅನಕ್ಷರತೆ, ಹಿಂಸೆಯ ವಾತಾವರಣದಲ್ಲಿ ಬೆಳೆಯುವ ಹುಡುಗಿ ಕೊರಿಯಾದ ಮಾರ್ಷಲ್ ಆರ್ಟ್ ಟೇಕ್ವಾಂಡೋದಲ್ಲಿ ಯಾವ ರೀತಿ ಸಾಧನೆಯನ್ನು ಮೆರೆಯುತ್ತಾಳೆ ಎನ್ನುವುದು ಈ ವಾರ ಬಿಡುಗಡೆಗೊಂಡಿರುವ ಟೇಕ್ವಾಂಡೋ ಗರ್ಲ್ ಚಿತ್ರದ ಕಥೆ.
ಕೊಳಗೇರಿಯ ಹುಡುಗಿ ಶಿಕ್ಷಣ ಹಕ್ಕಿನ ಮೂಲಕ ಪ್ರತಿಷ್ಠಿತ ಶಾಲೆಗೆ ಸೇರ್ಪಡೆಗೊಂಡಾಗ ಉಂಟಾಗುವ ಸಮಸ್ಯೆಯ ಬಗ್ಗೆ ಚಿತ್ರದಲ್ಲಿ ಹೇಳಲಾಗಿದೆ. ಇದರ ಜೊತೆಗೆ ಟೇಕ್ವಾಂಡೋ ಮಾರ್ಷಲ್ ಆರ್ಟ್ ಬಗೆಗೆ ಸಾಕಷ್ಟು ವಿವರಗಳಿವೆ. ಈ ಮಾರ್ಷಲ್ ಆರ್ಟ್ ನ ತರಬೇತಿ ಸೂಕ್ತ ಪ್ರತಿಭೆಗಳಿಗೆ ಯಾಕೆ ಸಿಗುತ್ತಿಲ್ಲ ಎನ್ನುವ ಮಾಹಿತಿ ಕೂಡಾ ಚಿತ್ರದಲ್ಲಿದೆ.
ಟೇಕ್ವಾಂಡೋ ಗರ್ಲ್ ಆಗಿ ಪುಟ್ಟ ಹುಡುಗಿ ಋತು ಸ್ಪರ್ಶ ಚುರುಕಾಗಿ ನಟಿಸಿದ್ದಾಳೆ. ಈ ಚಿತ್ರ ಈಕೆಯ ಪ್ರತಿಭೆಗೆ ವೇದಿಕೆ ಒದಗಿಸಿದೆ. ಇದು ಕಥೆ ಅನ್ನುವದಕ್ಕಿಂತ ಎಲ್ಲರೂ ಕಲಿಯಬೇಕಾದ ಕಲೆಯಾಗಿದೆ. ಮಕ್ಕಳಿಗೆ ಸ್ಪೂರ್ತಿ ತುಂಬುವ ಚಿತ್ರವನ್ನು ನಿರ್ಮಾಪಕಿಯಾದ ಡಾ.ಸುಮಿತ್ರ ಪ್ರವೀಣ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅವರು ಕೂಡ ಟೇಕ್ವಾಂಡೋ ಶಿಕ್ಷಕಿಯಾಗಿ ಒಂದು ಪಾತ್ರವನ್ನು ಸಹ ಮಾಡಿದ್ದಾರೆ.
ಪುಟ್ಟ ಬಾಲಕಿಯ ಪ್ರತಿಭೆಗೆ ಸಿನಿಮಾ ರೂಪಗೊಂಡಿದೆ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ಕಮರ್ಷಿಯಲ್ ಚಿತ್ರಗಳ ನಡುವೆ ಕಲಾತ್ಮಕ ವಾಗಿ ಮೂಡಿಬಂದಿರುವ ಟೇಕ್ವಾಂಡೋ ಗರ್ಲ್ ಚಿತ್ರವನ್ನು ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಈ ಚಿತ್ರವನ್ನು ನೋಡಲೇಬೇಕು.
Be the first to comment