ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಬಾಲಿವುಡ್ ನಟಿ ಕರೀನಾ ಕಪೂರ್ ಅವರನ್ನು ಟೀಕಿಸಿ ಸುದ್ದಿ ಆಗಿದ್ದಾರೆ.
ವರ್ಷದ ಆರಂಭದಲ್ಲಿ ಐಐಟಿ ಕಾನ್ಪುರದಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ ಮಾತನಾಡಿದ ನಾರಾಯಾಣ ಮೂರ್ತಿ ಅವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಕರೀನಾ ಕಪೂರ್ ಅವರ ಪಕ್ಕದಲ್ಲೇ ಕುಳಿತ ಘಟನೆಯನ್ನು ಬಹಿರಂಗ ಪಡಿಸಿ ಕರೀನಾ ವರ್ತನೆ ಇಷ್ಟವಾಗಿಲ್ಲ ಎಂದು ಹೇಳಿದ್ದರು.
ನಾನು ಲಂಡನ್ನಿಂದ ಬರುತ್ತಿದ್ದೆ ಆಗ ನನ್ನ ಪಕ್ಕದಲ್ಲಿ ಕರೀನಾ ಕಪೂರ್ ಕುಳಿತಿದ್ದರು. ತುಂಬಾ ಜನರು ಅವರ ಬಳಿ ಬಂದು ಹಲೋ ಹೇಳುತ್ತಿದ್ದರು. ಆದರೆ ಅವರು ಒಂದು ಪ್ರತಿಕ್ರಿಯೆ ಕೂಡ ನೀಡಿಲ್ಲ. ನನಗೆ ಆಶ್ಚರ್ಯವಾಯಿತು. ಯಾರೇ ನನ್ನ ಬಳಿ ಬಂದರೂ ನಾನು ಎದ್ದು ನಿಂತು ನಾವು ಒಂದು ನಿಮಿಷ ಅಥವಾ ಅರ್ಧ ನಿಮಿಷ ಮಾತನಾಡಿದೆವು. ಅದನ್ನೇ ಅವರು ಕರೀನಾ ಅವರಿಂದ ನಿರೀಕ್ಷಿಸುತ್ತಿದ್ದರು’ ಎಂದು ಹೇಳಿದರು.
ನಾರಾಯಣ ಮೂರ್ತಿ ಕರೀನಾ ಕಪೂರ್ ಅವರನ್ನು ಟೀಕಿಸುತ್ತಿದ್ದಂತೆ ಪತ್ನಿ ಸುಧಾ ಮೂರ್ತಿ ಅವರು ಕರೀನಾ ಬೆಂಬಲಕ್ಕೆ ನಿಂತರು.
‘ಅವರಿಗೆ ಮಿಲಿಯನ್ ಗಟ್ಟಲೇ ಅಭಿಮಾನಿಗಳು ಇರುತ್ತಾರೆ. ಅವರು ಸುಸ್ತಾಗಿರಬಹುದು’ ಎಂದು ಹೇಳಿದರು. ಈ ವೇಳೆ ಪ್ರೇಕ್ಷಕರು ಸುಧಾ ಮೂರ್ತಿ ಅವರನ್ನು ಶ್ಲಾಘಿಸಿದರು.
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ನಾರಾಯಾಣ ಮೂರ್ತಿ ಮತ್ತು ಅವರ ಪತಿ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಬಾಲಿವುಡ್ ನಟಿ ಕರೀನಾ ಕಪೂರ್ ಬಗ್ಗೆ ಹೇಳಿರುವ ಈ ಮಾತುಗಳು ವೈರಲ್ ಆಗಿವೆ.
Be the first to comment