ಇದನ್ನು ಅರಿತು ಬಹಳಷ್ಟು ಬಡ ಜನರಿಗೆ ತೊಂದರೆಯಲ್ಲಿ ಸಿಕ್ಕಿದವರಿಗೆ ಸಹಾಯ ಮಾಡುತ್ತಾ ಬರುತ್ತಿದ್ದಾರೆ. ಈಗ ಇನ್ಫೋಸಿಸ್ ಸಂಸ್ಥೆಯ ವತಿಯಿಂದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಗೆ ಇಂದು 2000 ದಿನಸಿ ಕಿಟ್ಗಳನ್ನು ನೀಡಿದ್ದಾರೆ.
ಇನ್ಫೋಸಿಸ್ ಫೌಂಡೇಶನ್ ಆರ್ಥಿಕ ಸಲಹೆಗಾರರು ಪ್ರಶಾಂತ್ ಹೆಗಡೆ ಹಾಗೂ ಇನ್ಫೋಸಿಸ್ ಫೌಂಡೇಷನ್ ಪರವಾಗಿ ನಿರ್ಮಾಪಕ ರಮೇಶ್ ರೆಡ್ಡಿ ರವರು ಕೆಟಿವಿಎ ನ ಅಧ್ಯಕ್ಷರಾದ ಶಿವಕುಮಾರ್ ಗೆ ಕಿಟ್ ಗಳನ್ನು ಹಸ್ತಾಂತರಿಸಿದರು.
ಈಗಾಗಲೇ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ನಲ್ಲಿರುವ ದಿನಗೂಲಿ ಕಾರ್ಮಿಕರು, ಕಲಾವಿದರು , ತಂತ್ರಜ್ಞರು ಒಟ್ಟು ಸದಸ್ಯರ ಸಂಖ್ಯೆ ಸುಮಾರು ಆರು ಸಾವಿರಕ್ಕೂ ಹೆಚ್ಚು ಇದ್ದು, ಎಲ್ಲರೂ ಲಾಕ್ ಡೌನ್ ಆದ ಕಾರಣ ಕೆಲಸ ಇಲ್ಲದೆ, ಆದಾಯವಿಲ್ಲದೆ ಒತ್ತಡಕ್ಕೆ ಸಿಕ್ಕಿ ಜೀವನ ನಿರ್ವಹಿಸಲು ಕಷ್ಟ ಪಡುತ್ತಿದ್ದ ಸಂಕಷ್ಟದ ಸಮಯದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಸದಸ್ಯೆರಿಗೆ ದಿನಸಿ, ಧಾನ್ಯಗಳನ್ನು ತಲುಪಿಸಿದ್ದೇವೆ.
ಆದರೆ ಇದೀಗ ಲಾಕ್ ಡೌನ್ ಮುಂದುವರಿದಿದ್ದು, ಕೆಟಿವಿಎಯಿಂದ ಸಹಾಯಕ್ಕಾಗಿ ದೇಶದ ಪ್ರತಿಷ್ಠೆ ಸಂಸ್ಥೆಯಾದ ಇನ್ಫೋಸಿಸ್ ಫೌಂಡೇಷನ್ ಸಂಸ್ಥೆಯವರಿಗೆ ನಾವು ಸಹಾಯಕ್ಕಾಗಿ ಮನವಿ ಸಲ್ಲಿಸಿದ್ದೆವು, ಕೂಡಲೇ ಅವರು ನಮ್ಮ ಮನವಿಗೆ ಸ್ಪಂದಿಸಿದ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಸುಧಾಮೂರ್ತಿಯವರು ಸಂಕಷ್ಟದಲ್ಲಿರುವ ನಮ್ಮ ಸದಸ್ಯರಿಗೆ ಎರಡು ಸಾವಿರ ದಿನಸಿ ಕಿಟ್ ಗಳನ್ನು ಕೊಟ್ಟಿದ್ದಾರೆ. ಅವರಿಗೆ ನಾವು ಸದಾ ಚಿರಋಣಿಯಾಗಿರುತ್ತೇನೆ ಎಂದು ಸಂಘದ ಅಧ್ಯಕ್ಷ ಎಸ್.ವಿ. ಶಿವಕುಮಾರ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಭಾಸ್ಕರ್ , ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ರಾಜು, ಕಾರ್ಯದರ್ಶಿ ವೀರೇಂದ್ರ ಬೆಳ್ಳಿ ದೀಪ ಸೇರಿದಂತೆ ಕಿರುತೆರೆ ಕಲಾವಿದರು ಕೂಡ ಹಾಜರಿದ್ದರು.
Pingback: 3mexican