ಈ ವಾರ ತೆರೆಗೆ “ಇದು ಆಕಾಶವಾಣಿ ಬೆಂಗಳೂರು ನಿಲಯ”

ಲಾಕ್ ಡೌನ್ ಸಮಯದಲ್ಲಿ ಇಡೀ ಚಿತ್ರರಂಗವೇ ಸ್ತಭ್ದವಾಗಿ ಹೋಗಿತ್ತು. ಆದರೆ ಧೃತಿಗೆಡದೆ ಒಂದು ತಂಡಕ್ಕೆ ಬೆನ್ನೆಲುಬಾಗಿ ನಿಂತು ಚಿತ್ರವನ್ನ ಪೂರ್ಣಗೊಳಿಸಿ ಇದೇ ವಾರ ಬಿಡುಗಡೆಗೆ ತರುತ್ತಿರುವಂತಹ ಚಿತ್ರವೇ “ಇದು ಆಕಾಶವಾಣಿ ಬೆಂಗಳೂರು ನಿಲಯ” ಈ ಹಿಂದೆ ನಾವೇ ಭಾಗ್ಯವಂತರು ಎಂಬ ಚಿತ್ರ ನಿರ್ದೇಶಿಸಿದ್ದ ಎಂ.ಹರಿಕೃಷ್ಣ ಅವರ ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು , ಇವರ ಬೆಂಬಲಕ್ಕೆ ನಿಂತ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಶಿಕ್ಷಕರಾದ ಶಿವಾನಂದಪ್ಪ ಬಳ್ಳಾರಿ ಅವರು ನಿರ್ಮಿಸಿರುವ ಈ “ಇದು ಆಕಾಶವಾಣಿ ಬೆಂಗಳೂರು ನಿಲಯ” ಚಿತ್ರ ಇದೇ 8ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಇತ್ತೀಚೆಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ಮಾಪಕ ಶಿವಾನಂದಪ್ಪ ಈ ಚಿತ್ರದ ಕಥೆಗಾರ ವಿಜಯಕುಮಾರ್ ಅವರು ಸುಮಾರು ಪುಸ್ತಕಗಳನ್ನು ಬರೆದಿದ್ದಾರೆ. ಋಷಿಕುಮಾರ ಗುರುಗಳ ಬಗ್ಗೆ ಸಿನಿಮಾ ಮಾಡಬೇಕಾದರೆ ಡಾಕ್ಯುಮೆಂಟರಿ ಮಾಡಬೇಕು, ಅದಕ್ಕೆ ತುಂಬಾ ಖರ್ಚಾಗುತ್ತದೆ, ಹಾಗಾಗಿ ಒಂದು ಸಿನಿಮಾ ಮಾಡೋಣ ಎಂದು ಯೋಚಿಸಿ ಹರಿಕೃಷ್ಣ ಅವರನ್ನು ಕರೆತಂದು ಈ ಚಿತ್ರ ಮಾಡಿಸಿದ್ದಾರೆ. ನಿರ್ದೇಶಕರು ಹೇಳಿದ ಹಾಗೆ ಎಲ್ಲವನ್ನೂ ಒದಗಿಸಿದ್ದೇವೆ ಎಂದರು.

ಈಗಾಗಲೇ ಹಲವಾರು ಚಿತ್ರಗಳಲ್ಲಿ ಉತ್ತಮ ಅಭಿನಯವನ್ನು ನೀಡಿದಂಥ ನಾಯಕಿ ನಿಖಿತಾ ಸ್ವಾಮಿ ಮಾತನಾಡಿ ಈ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ, ಅನಾಥ ಹುಡುಗಿಯೊಬ್ಬಳು ಹಳ್ಳಿಯಲ್ಲಿ ತನಗಾದ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಸಿಟಿಗೆ ಬಂದು ಯಾವ ರೀತಿ ಬದಲಾಗ್ತಾಳೆ, ಒಬ್ಬ ಹುಡುಗಿಗೆ ಯಾರೂ ಇಲ್ಲ ಎಂದಾಗ ಆಕೆಯನ್ನು ಜನ ಹೇಗೆಲ್ಲ ನೋಡ್ತಾರೆ, ಮ್ಯಾಟ್ರಿಮೋನಿ ಯಿಂದ ಜನ ಹೇಗೆ ಮೋಸ ಹೋಗ್ತಿದ್ದಾರೆ ಎಂಬ ಹಲವಾರು ವಿಷಯಗಳು ಚಿತ್ರದಲ್ಲಿದೆ. ನಿಮ್ಮೆಲ್ಲರ ಪ್ರೋತ್ಸಾಹ ಬೆಂಬಲ ಸದಾ ನನ್ನ ಮೇಲೆ ಇರಲಿ ಎಂದು ಕೇಳಿಕೊಂಡರು.

ಈ ಚಿತ್ರದ ನಾಯಕ ರಣವೀರ್ ಪಾಟೀಲ ಮಾತನಾಡಿ ನನ್ನ ಪಾತ್ರಕ್ಕೆ ಮೂರು ಶೇಡ್ ಇದೆ. ಅದರಲ್ಲೊಂದು ಡೆವಿಲ್ ಕ್ಯಾರೆಕ್ಟರ್ ಇದೆ. 3 ಕೂಡ ವಿಭಿನ್ನವಾಗಿದ್ದು , ನನ್ನ ಸಿನಿಮಾ ಕೆರಿಯರ್ ಗೆ ಉತ್ತಮ ಚಿತ್ರ ಇದಾಗಲಿದೆ ಎಂದು ಹೇಳಿದರು.

ಈ ಚಿತ್ರದಲ್ಲಿ ಟೆನಿಸ್ ಕೃಷ್ಣ ಕೂಡಾ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮಾತನಾಡುತ್ತಾ ಲಾಕ್ ಡೌನ್ ಸಮಯಗಳಿಂದ ನಾನು ಮನೆಯಿಂದ ಹೊರಗೆ ಬರೋದು ತುಂಬಾ ಕಷ್ಟವಾಗಿತ್ತು. ಇಂತಹ ಸಮಯದಲ್ಲಿ ಸಿಕ್ಕ ಚಿತ್ರ ಇದು. ನೊಣವಿನಕೆರೆಯಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಿದ್ದಾರೆ.

ಬಹಳ ಉತ್ತಮವಾಗಿ ಚಿತ್ರ ಬಂದಿದೆ. ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಒಳ್ಳೇದಾಗಲಿ. ಚಿತ್ರ ಯಶಸ್ಸು ಕಾಣಲಿ ಎಂದು ಶುಭಕೋರಿದರು.
ಹಾಗೆಯೇ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಾಮಿಡಿ ಕಿಲಾಡಿಗಳು ದಿವ್ಯಶ್ರೀ ಮಾತನಾಡಿ ನಾನು ಕೆಲಸದವಳ ಪಾತ್ರ ಮಾಡಿದ್ದೇನೆ, ನಾನು ಮಲೆನಾಡು ಭಾಗದಿಂದ ಬಂದವಳಾದರೂ ಈ ಪಾತ್ರಕ್ಕಾಗಿ ಮಂಡ್ಯ ಗ್ರಾಮೀಣ ಭಾಷೆಯನ್ನು ಕಲಿತೆ ಎಂದು ಹೇಳಿದರು.

ಮತ್ತೊಬ್ಬ ನಟ ನಾರಾಯಣ ಸ್ವಾಮಿ ಮಾತನಾಡಿ ನಾನು 21 ವರ್ಷದಿಂದ ಚಿತ್ರರಂಗದಲ್ಲಿ ಇದ್ದೇನೆ. ನಿರ್ದೇಶಕ ಹರಿಕೃಷ್ಣ ವಜ್ರೇಶ್ವರಿಯಲ್ಲಿ ಕಲಿತವರು. ಅವರ ನಿರ್ದೇಶನದ ನಾವೇ ಭಾಗ್ಯವಂತರು ಚಿತ್ರದಲ್ಲಿ ಅಭಿನಯಿಸಿದೆ. ಈ ಚಿತ್ರದಲ್ಲಿ ನಾನು ಪೋಲಿಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಮಾಡಿದ್ದಾರೆ ಎಂದರು.

ಕಥೆಗಾರ ವಿಜಯಕುಮಾರ್ ಮಾತನಾಡುತ್ತ ಚಿತ್ರದ ಟೈಟಲ್‌ಗೂ ಆಕಾಶವಾಣಿ ಕೇಂದ್ರಕ್ಕೂ ಯಾವುದೇ ಸಂಬಂಧವಿಲ್ಲ, ಚಿತ್ರದಲ್ಲಿ ರೇಡಿಯೋ ಕೂಡ ಒಂದು ಪಾತ್ರವಾಗಿ ಮೂಡಿಬಂದಿದ್ದು, ಆಗಾಗ ಈ ಪದ ಪ್ಲೇ ಆಗ್ತಿರುತ್ತದೆ, ಹಾಗಾಗಿ ಅದೇ ಹೆಸರಿಟ್ಟಿದ್ದೇವೆ ಎಂದರು.

ನಿರ್ದೇಶಕ ಎಂ. ಹರಿಕೃಷ್ಣ ಮಾತನಾಡುತ್ತ ನಮ್ಮ ಚಿತ್ರಕ್ಕೆ ಆರಂಭದಲ್ಲಿ ಬೇರೆ ಹೆಸರಿತ್ತು. ಆಕಾಶವಾಣಿ ಸಂಸ್ಥೆ ಹಾಗೂ ಅದರ ಸಿಬ್ಬಂದಿಗೆ ಅಪಪ್ರಚಾರ ಮಾಡುವ ಯಾವುದೇ ಕಂಟೆಂಟ್ ನಮ್ಮ ಚಿತ್ರದಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು. ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು, ತಿಪಟೂರು ಹಾಗೂ ನೊಣವಿನಕೆರೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ವಿಜಯ ಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ಎ.ಟಿ.ರವೀಶ್ ಅವರ ಸಂಗೀತ, ಆಂಟೋನಿ ಎಂ, ಶಿವರಾಜ್ ಗುಬ್ಬಿ ಅವರ ಸಾಹಿತ್ಯ, ಪ್ರವೀಣ್‌ಶೆಟ್ಟಿ ಅವರ ಛಾಯಾಗ್ರಹಣ, ಪವನ್‌ಗೌಡ ಅವರ ಸಂಕಲನ ಚಿತ್ರಕ್ಕಿದೆ. ಸುಚೇಂದ್ರ ಪ್ರಸಾದ್ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಈ ಚಿತ್ರ ಇದೇ ವಾರ ತೆರೆ ಮೇಲೆ ಬರುತ್ತಿದ್ದು , ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಕಾದು ನೋಡಬೇಕು.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!