“ಇಂಡಿಯಾ ವರ್ಸಸ್ ಇಂಗ್ಲೆಂಡ್’ಈಗ ಅಮೆಜಾನ್ ಪ್ರೈಮ್ ನಲ್ಲಿ

ನಾಗತಿಹಳ್ಳಿ ಚಂದ್ರಶೇಖರ್ ಅವರ “ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರವು ಅಮೆಜಾನ್ ಪ್ರೈಮ್ ನಲ್ಲಿ ವಿಶ್ವಾದ್ಯಂತ ತೆರೆ ಕಂಡಿದೆ. ಕೊರೊನಾ ದಾಳಿಯಿಂದ ಮನೆಯಲ್ಲಿ ಕುಳಿತಿರುವವರಿಗೆ ಮನರಂಜನೆಯ ಸುಗ್ಗಿ! ಅಸಂಖ್ಯಾತ ಅನಿವಾಸಿ ಕನ್ನಡಿಗರು ಅಮೆರಿಕಾ, ಇಂಗ್ಲೆಂಡ್ ಮುಂತಾದ ದೇಶಗಳಿಂದ ಪ್ರಶಂಸೆಯ ಮಹಾಪೂರವನ್ನೇ ಕಳುಹಿಸುತ್ತಿದ್ದಾರೆ. ಇದೀಗ ಭಾರತದಲ್ಲೂ ಪ್ರದರ್ಶನ ಕಂಡು ಅಪಾರ ಮೆಚ್ಚುಗೆ ಗಳಿಸುತ್ತಿದೆ.

ಬಹುಭಾಗ ಇಂಗ್ಲೆಂಡಿನಲ್ಲಿ ಜತೆಗೆ ಭಾರತದುದ್ದಗಲಕ್ಕೂ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ನಾಡಗೀತೆಯೂ ರಾಷ್ಟ್ರಗೀತೆಯೂ ಬೇರೆ ಸ್ವರೂಪದಲ್ಲಿವೆ. ಅರ್ಜುನ್ ಜನ್ಯ ಐದು ಹಾಡುಗಳ ಮೂಲಕ ಮನಸೂರೆಗೊಂಡಿದ್ದಾರೆ. ವಸಿಷ್ಠ ಸಿಂಹ,ಮಾನ್ವಿತಾ,ಪ್ರಕಾಶ್ ಬೆಳವಾಡಿ, ಅನಂತ ನಾಗ್, ಸಾಧು ಕೋಕಿಲಾ, ಸುಮಲತಾ ಅಂಬರೀಷ್ ಅವರನ್ನೊಳಗೊಂಡ ಅದ್ದೂರಿ ತಾರಾಗಣವಿದೆ. ಮನೆಯಲ್ಲೇ ಮನೆಮಂದಿ ಎಲ್ಲಾ ಕುಳಿತು ಮನರಂಜನೆ ಪಡೆಯಲು ನಿಮ್ಮಮನೆ ಬಾಗಿಲಿಗೇ ಬಂದಿದೆ “ಇಂಡಿಯಾ ವರ್ಸಸ್ ಇಂಗ್ಲೆಂಡ್”

Be the first to comment

Leave a Reply

Your email address will not be published. Required fields are marked *

Translate »
error: Content is protected !!