21 ವರ್ಷ ವಯಸ್ಸಿನ ಮಾಡೆಲ್ ಹರ್ನಾಜ್ ಸಂಧು ಅವರು ಮಿಸ್ ಯೂನಿವರ್ಸ್ ಪ್ರಶಸ್ತಿ ಜಯಿಸುವ ಮೂಲಕ ಭಾರತ ಭರ್ಜರಿ 21 ವರ್ಷಗಳ ಬಳಿಕ ಈ ಸಾಧನೆ ಮಾಡಲು ಕಾರಣರಾಗಿದ್ದಾರೆ.
ಇಸ್ರೆಲ್‌ನಲ್ಲಿ ನಡೆದ 2021ರ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಆಗಿ ಆಯ್ಕೆ ಆದರು. ಈ ಹಿಂದೆ ಲಾರಾ ದತ್ತ ಅವರು 21 ವರ್ಷಗಳ ಹಿಂದೆ ಮಿಸ್ ಯೂನಿವರ್ಸ್ ಆಗಿ ಆಯ್ಕೆ ಆಗಿದ್ದರು.
ಡಿಸೆಂಬರ್ 12ರ ರಾತ್ರಿ ಇಸ್ರೇಲ್‌ನ ಇಲಾಟ್‌ನಲ್ಲಿ ನಡೆದ ವರ್ಣರಂಜಿತ ಫೈನಲ್ ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ಅವರನ್ನು ಮಿಸ್ ಯೂನಿವರ್ಸ್ ಆಗಿ ಘೋಷಣೆ ಮಾಡಲಾಯಿತು. 2020ರ ಮಿಸ್ ಯೂನಿವರ್ಸ್ ಆಂಡ್ರಿಯಾ ಮೇಜಾ ಅವರು ಮಿಸ್ ಯೂನಿವರ್ಸ್ ಕಿರೀಟವನ್ನು ಹರ್ನಾಜ್ ಅವರಿಗೆ ತೊಡಿಸಿದರು.
79 ಚೆಲುವೆಯರು ಪಾಲ್ಗೊಂಡ ಸ್ಪರ್ಧೆಯಲ್ಲಿ ಹರ್ನಾಜ್ ವಿಶ್ವದ 70ನೇ ಮಿಸ್ ಯೂನಿವರ್ಸ್ ಎನಿಸಿದರು. ರನ್ನರ್ ಅಪ್ ಸ್ಥಾನವನ್ನು ಪೆರುಗ್ವೆಯ ನಾಡಿಯಾ ಫೆರೆರಿಯಾ, ಎರಡನೇ ರನ್ನರ್ ಅಪ್ ಸ್ಥಾನವನ್ನು ದಕ್ಷಿಣ ಆಫ್ರಿಕಾದ ಲಲೇಲಾ ಸ್ವಾನೆ ಪಡೆದುಕೊಂಡರು.
“21 ವರ್ಷಗಳ ನಂತರ ಈ ಕಿರೀಟವನ್ನು ಭಾರತಕ್ಕೆ ತರುತ್ತಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ” ಎಂದು ಹರ್ನಾಜ್ ಹೇಳಿದ್ದಾರೆ.
ಪಂಜಾಬಿನ ಚಂಢಿಘಡದಲ್ಲಿ ಶಾಲೆ, ಕಾಲೇಜು ಮುಗಿಸಿದ ಹರ್ನಾಜ್ ಮಾಡೆಲಿಂಗ್ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರುಕೆಲವು ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲುವು ಕಂಡಿದ್ದಾರೆ.
____
Be the first to comment