Inamdar: ಇನಾಮ್ದಾರ್ ಶೀಘ್ರ ತೆರೆಗೆ

ಸಂದೇಶ ಶೆಟ್ಟಿ ಆಜ್ರಿ ನಿರ್ದೇಶನದ ಇನಾಮ್ದಾರ್ ಚಿತ್ರ ಶೀಘ್ರ ತೆರೆಯ ಮೇಲೆ ಬರಲಿದೆ.

ಅಕ್ಟೋಬರ್ 5ರಂದು ಬೆಂಗಳೂರಿನಲ್ಲಿ ಬಹುಭಾಷೆಯಲ್ಲಿ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 15ರಂದು ಬೆಳಗಾವಿಯಲ್ಲಿ ಚಿತ್ರದ ಧ್ವನಿ ಸುರಳಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಇದು ಕಪ್ಪು ಬಿಳುಪೆಂಬ ಎರಡು ಬಣ್ಣಗಳನ್ನು ಆಧರಿಸಿದ ಎರಡು ಜನಾಂಗಳ ಭೇದದ ಕಥೆ ಎಂದು ತಿಳಿದು ಬಂದಿದೆ. ಬಯಲುಸೀಮೆಯ ಒಂದು ಜನಾಂಗ ಮತ್ತು ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಇನ್ನೊಂದು ಜನಾಂಗ ನಡುವೆ ನಡೆಯುವ ವರ್ಣ ಭೇದದ ಕಥೆ ಚಿತ್ರದಲ್ಲಿದೆ.

ಚಿತ್ರದಲ್ಲಿ ಪಶ್ಚಿಮ ಘಟ್ಟದ ತಪ್ಪಲಿನ ಸೌಂದರ್ಯ ಕಾಣಬಹುದಾಗಿದೆ. ಬಯಲು ಸೀಮೆಯ ಸೊಬಗು ಕೂಡಾ ಚಿತ್ರ ರಸಿಕರಿಗೆ ಸಿಗಲಿದೆ. ಇನಾಮ್ದಾರ್ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು ತೆರೆಗೆ ಬರಲು ಸಿದ್ಧವಾಗಿದೆ.

ʻಕತ್ತಲೆ ಕೋಣೆʼ ಹೆಸರಿನ ವಿಭಿನ್ನ ಹಾರರ್ ಬೇಸ್, ಸೈಂಟಿಫಿಕ್ ಥ್ರಿಲ್ಲರ್ ಚಿತ್ರವನ್ನು ತೆರೆಯ ಮೇಲೆ ತಂದಿದ್ದ ಸಂದೇಶ ಶೆಟ್ಟಿ ಆಜ್ರಿ ಅವರು ಮೂರು ವರ್ಷಗಳ ಬ್ರೇಕ್ ನಂತರ ʻಇನಾಮ್ದಾರʼʼ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ.

ಚಿರಶ್ರೀ ಅಂಚನ್ ಅವರು ನಾಯಕಿ ಆಗಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಅವಿನಾಶ್, ಎಂ.ಕೆ. ಮಠ, ಕಾಂತಾರ ಖ್ಯಾತಿಯ ನಾಗರಾಜ್ ಬೈಂದೂರು, ಪ್ರಶಾಂತ್ ಸಿದ್ಧಿ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!