ಐಎಫ್ ಎಂಎ ಗೆ ಸಲ್ಲಬೇಕಾಗಿದೆ ವ್ಯಾಪಕ‌ ಪ್ರಶಂಸೆ!

ಕ್ಯೂಬ್ ಸಿನಿಮಾಸ್ ಒಳ್ಳೆಯದೊಂದು ನಿರ್ಧಾರ ಪ್ರಕಟಿಸಿದೆ. ಆದರೆ ಆ ನಿರ್ಧಾರದ ಹಿಂದೆ ಐಎಫ್ಎಂಎ ಕೆಲಸ ಮಾಡಿದೆ ಎನ್ನುವುದು ಬಹಳ ಮಂದಿಗೆ ಗೊತ್ತಿಲ್ಲ.

7 ತಿಂಗಳಿಗೂ ಹೆಚ್ಚಿನ ಕಾಲ ನಿಂತಿದ್ದ ಸಿನಿಮಾ ಪ್ರೊಡಕ್ಷನ್ಸ್ ಮತ್ತು ಡಿಸ್ಟ್ರಿಬ್ಯುಶನ್ ಕೆಲಸ ಇತ್ತೀಚೆಗೆ ಮತ್ತೆ ಶುರುವಾಗಿದೆ. ಕೈಗಾರಿಕಾ ಘಟಕ ಕೂಡಾ ನಿಧಾನವಾಗಿ ವ್ಯವಹಾರವನ್ನು ಆರಂಭಿಸಿದೆ.

ಕೊರೊನಾದಂತಹ ರೋಗದಿಂದ ಆರ್ಥಿಕವಾಗಿ ಕುಗ್ಗಿರುವ ಚಿತ್ರೋದ್ಯಮದ ಪ್ರೊಡ್ಯುಸರ್ ಮತ್ತು ಡಿಸ್ಟ್ರಿಬ್ಯೂಟರ್ ನವರಿಗೆ ಸಹಾಯ ಮಾಡುವುದಾಗಿ ಎರಡು ದಿನಗಳ ಹಿಂದೆ ಪ್ರಕಟಣೆಯ ಮೂಲಕ ತಿಳಿಸಿತ್ತು. ಎಲ್ಲಾ ಸಿನಿಮಾಗಳಿಗೆ ವರ್ಚುವಲ್ ಪ್ರಿಂಟ್ ಶುಲ್ಕವನ್ನು ಡಿಸಿಐ ಹಾಗೂ ಇ – ಸಿನೆಮಾ ಈಗಿರುವ ದರದಿಂದ 50% ವಿನಾಯಿತಿ ಕೊಡುತ್ತೇವೆ ಎಂದು ಕ್ಯೂಬ್ ಹೇಳಿಕೊಂಡಿದೆ. ಈ ದರ ಥಿಯೇಟರ್ ಓಪನ್ ಆದಾಗಿನ ತಾರೀಕಿನಿಂದ ಡಿಸೆಂಬರ್ 31 ರವರೆಗೆ ಇರುತ್ತದೆ.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗಳಾದ ದಿಲೀಪ್ ಈ ತರಹದ ಒಂದು ನಿಯಮವನ್ನು ಜಾರಿಗೆ ತರುವಂತೆ ತಿಂಗಳ ಹಿಂದೆಯೇ ತಮ್ಮ ಸಂಸ್ಥೆಯ ಮೂಲಕ ಕ್ಯೂಬ್ ಗಮನ ಸೆಳೆದಿರುವುದಾಗಿ ಬಿ ಸಿನಿಮಾಸ್ ಗೆ ತಿಳಿಸಿದ್ದಾರೆ. ಕ್ಯೂಬ್ ಚಾರ್ಜ್ 50% ಇಳಿಸಬೇಕೆಂದು ಇಂಡಿಯನ್ ಫಿಲಂ ಮೇಕರ್ಸ್ ನಿಂದ ಅಧ್ಯಕ್ಷ ಮೂರ್ತಿ ಮನವಿ ಮಾಡಿದ್ದಾರೆ. ಹಾಗಾಗಿ ಇದು ತಮ್ಮ ಪ್ರಯತ್ನಕ್ಕೆ ಸಿಕ್ಕ ಫಲ ಎಂದು ತಿಳಿಸಿದ್ದಾರೆ. ನಿಜಕ್ಕೂ ಸಿನಿಮಾ ಉದ್ಯಮಿಗಳಿಗೆ ಈ ತರಹದ ಒಂದು ಅವಕಾಶ ನಿರಾಳತೆಯನ್ನು ತಂದುಕೊಟ್ಟಿದೆ.‌ ಅದಕ್ಕಾಗಿ ಕ್ಯೂಬ್ ಜೊತೆಗೆ ಐಎಫ್ ಎಂ ಎ ಗೂ ಕೃತಜ್ಞತೆ ಸಲ್ಲಿಸಬೇಕಾಗಿದೆ.

This Article Has 2 Comments
  1. Pingback: fish spatula yourfishguide.com

  2. Pingback: codeless framework

Leave a Reply

Your email address will not be published. Required fields are marked *

Translate »
error: Content is protected !!