ಇದು ಬೆಂಗಳೂರು ನಗರ ಧ್ವನಿಸಾಂದ್ರಿಕೆ ಲೋಕಾರ್ಪಣೆ

ಇದು ಬೆಂಗಳೂರು ನಗರ ಎಂಬ ಶೀರ್ಷಿಕೆ ಜೊತೆಯಲ್ಲೇ ಯಾರು ಮಾಡಬೇಡಿ ನಕರ ಎಂಬ ಸಬ್ ಟೈಟಲ್ ಕೂಡ ಇರುವ ಚಿತ್ರ ಇದು. ಕನ್ನಡ ಸಿನಿಮಾದ ಆಸಕ್ತಿಯಿಂದ ಈ ಚಿತ್ರಕ್ಕೆ ನಿರ್ದೇಶಕರಾಗಿರುವ ಮತ್ತು ನಿರ್ಮಾಪಕ ಕೆ.ಪಿ.ಸೆಲ್ವರಾಜ್ ಅವರು ಪ್ರಥಮ ಬಾರಿಗೆ ಇಂಥದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಅದಕ್ಕೆ ಕಾರಣ ಕನ್ನಡ ಸಿನಿಮಾದಲ್ಲಿನ ಆಸಕ್ತಿ ಎಂದು ಅವರು ತಿಳಿಸಿದರು. ಮಹಾನಗರ ಬೆಂಗಳೂರಿನಲ್ಲಿ ಹಲವಾರು ರೀತಿಯ ಜನರು ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿ ಸ್ನೇಹ, ಪ್ರೀತಿ, ವಾತ್ಸಲ್ಯ ತೋರಿಸುವ ಜನಗಳ ಜೊತೆಗೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದಷ್ಟು ವೈರತ್ವ ತುಂಬಿರುವ ಜನರೂ ಇದ್ದಾರೆ. ಇಂಥ ಒಂದು ವೈವಿದ್ಯತೆ ಇರುವ ಮಹಾನಗರಿಯಲ್ಲಿ ನಡೆಯುವ ಪ್ರೇಮ್ ಕಹಾನಿಯೊಂದನ್ನು ಬೆಂಗಳೂರು ನಗರ ಎಂಬ ಚಿತ್ರದ ಮೂಲಕ ತೆರೆಮೇಲೆ ತರಲು ಹೊರಟಿರುವುದಾಗಿ ನಿರ್ದೇಶಕ ಕೆ.ಪಿ. ಸೆಲ್ವರಾಜ್ ತಿಳಿಸಿದರು.ಇಡೀ ಚಿತ್ರದ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಅವರು, ವಿಜಯ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ತಾವೇ ನಿರ್ಮಿಸುತ್ತಿದ್ದಾರೆ. ನಿರ್ದೇಶನ, ನಿರ್ಮಾಣದ ಜೊತೆಗೆ ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ಸಂಗೀತ ನೀಡುವ ಮೂಲಕ ಆಲ್ ಇನ್ ವನ್ ಆಗಿದ್ದಾರೆ. ರಿಂದಲೂ ಚಿತ್ರರಂಗದಲ್ಲಿರುವ ಇವರು, ಕ್ಯಾಮೆರಾಮೆನ್ ಮತ್ತು ಟಕ್ನಿಷಿಯನ್ ಆಗಿ ತೆರೆಯ ಹಿಂದೆ ಸಾಕಷ್ಟು ಕೆಲಸಗಳನ್ನು ಮಾಡಿ ಅನುಭವ ಪಡೆದುಕೊಂಡಿದ್ದಾರೆ. ಇದೇ ಅನುಭವ ಇಟ್ಟುಕೊಂಡು ಬೆಂಗಳೂರು ನಗರ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ.
ಚಿತ್ರದಲ್ಲಿ ನವ ನಾಯಕರಾಗಿ ಅಂಜನ್, ನಾಯಕಿಯಾಗಿ ಅಂಜಲಿ ಮತ್ತು ಸಹ ಕಲಾವಿದರಾಗಿ ಓಂ ಪ್ರಕಾಶ್ ನಾಯ್ಕ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಎ.ಎಸ್.ರಾಜ್ ಮತ್ತು ಕೆ.ಪಿ.ಎಸ್.ವಿಜಯ್ ರಾಜ್ ನಿರ್ವಹಿಸಿದ್ದಾರೆ. ನೃತ್ಯ ನಿರ್ದೇಶಕರಾಗಿ ರಾಮ್ ಜಿ ಕಾರ್ಯನಿರ್ವಹಿಸಿದ್ದಾರೆ. ಕೃಷ್ಣೇಗೌಡರು ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!