ಐ ಲವ್ ಯು’ ಸಕ್ಸಸ್ ಸಂಭ್ರಮ

ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ ಐ ಲವ್ ಯು ಚಿತ್ರವು ನಿರೀಕ್ಷೆಯಂತೆ ರಿಯಲ್ ವಿನ್ನರ್ ಆಗಿದ್ದು 25ನೆ ದಿನಗಳತ್ತ ಮುನ್ನುಗ್ಗುತ್ತಿದೆ. ಈ ಸಂತಸವನ್ನು ಹಂಚಿಕೊಳ್ಳಲೆಂದೇ ನಿರ್ಮಾಪಕ ಆರ್.ಚಂದ್ರು ಅವರು ಮೊನ್ನೆ ಸಕ್ಸಸ್ ಮೀಟ್ ಅನ್ನು ಹಮ್ಮಿಕೊಂಡಿದ್ದರು.ನಟ ಉಪೇಂದ್ರ ಅವರು ಮಾತನಾಡಿ, ಈ ಚಿತ್ರದಿಂದ ಸಿನಿಮಾಕ್ಕೆ ಸಂಬಂದಿಸಿದ ನಿರ್ಮಾಪಕರು, ವಿತರಕರು, ಪ್ರದರ್ಶಕರು, ಪಾರ್ಕಿಂಗ್ ಸ್ಥಳದ ಗುತ್ತಿಗೆದಾರರು, ಕ್ಯಾಂಟೀನ್‍ನವರು ಸೇರಿದಂತೆ ಎಲ್ಲರೂ ಹಣ ಸಂಪಾದಿಸಿದ್ದಾರೆ ಆದ್ದರಿಂದಲೇ ಈ ಚಿತ್ರವು ರಿಯಲ್ ಗೆಲುವು ಕಂಡಿದೆ. ಐ ಲವ್ ಯು ಚಿತ್ರವು ಎಲ್ಲ ಪ್ರೇಕ್ಷಕರಿಗೂ ಇಷ್ಟವಾಗಿರುವುದಕ್ಕೆ ನನಗೂ ಸಂತಸವಾಗಿದೆ ಎಂದು ಹೇಳಿದರು.

ನಿರ್ದೇಶಕ ಕಂ ನಿರ್ಮಾಪಕ ಆರ್.ಚಂದ್ರು ಅವರು ಮಾತನಾಡಿ, ಐ ಲವ್ ಚಿತ್ರವು ಸಕ್ಸಸ್ ಹಾದಿಯಲ್ಲಿ ಸಾಗುತ್ತಿರುವುದಕ್ಕೆ ಸಹಜವಾಗಿ ನನ್ನ ಸಂತಸ ಇಮ್ಮಡಿಯಾಗಿದೆ. ಚಂದ್ರು ನಿರ್ದೇಶನದ ಚಿತ್ರಗಳೆಂದರೆ ಅಲ್ಲಿ ಹಳ್ಳಿ ಸೊಗಡು ಹಾಗೂ ಪ್ರೇಮದ ಗಮಲೇ ಹೆಚ್ಚಾಗಿರುತ್ತದೆ ಅವರು ಈಗಿನ ಜಾಯಮಾನಕ್ಕೆ ತಕ್ಕ ನಿರ್ದೇಶಕರಲ್ಲ ಎಂದು ಹೇಳುತ್ತಿದ್ದರು.ಆಗಲೇ ನಾನೊಂದು ಡಿಪರೆಂಟ್ ಸಿನಿಮಾ ನಿರ್ದೇಶಿಸಬೇಕೆಂದು ಯೋಚಿಸಿದೆ. ಅದಕ್ಕಾಗಿ ನನ್ನ ಸ್ನೇಹಿತರ ಜೊತೆ ಸುದೀರ್ಘವಾಗಿ ಚರ್ಚಿಸಿ, ಐ ಲವ್ ಯು ಕಥೆಯನ್ನು ಸಿದ್ಧಪಡಿಸಿದೆವು, ಇದಕ್ಕೆ ಉಪೇಂದ್ರ ರವರೇ ಸೂಕ್ತ ಎಂದು ಅವರ ಡೇಟ್ಸ್ ಕೇಳಿದಾಗ ಇದು ಚಂದ್ರು ಮಾಡಿದ ಕಥೆನಾ ಎಂದು ಅಚ್ಚರಿಯಿಂದ ತಮ್ಮ ಕಣ್ಣುಗಳನ್ನು ಗಿರಗಿರ ತಿರುಗಿಸಿದರು.

ನಾನು ಮೊದಲೇ ಹೇಳಿದ ಹಾಗೆ ಚಿತ್ರದ ಕ್ಲೈಮ್ಯಾಕ್ಸ್ ಪ್ರೇಕ್ಷಕರಿಗೆ ಇಷ್ಟವಾಗಿದ್ದು ಸಕ್ಸಸ್‍ಗೆ ಅಗತ್ಯವಾದ ಎಲ್ಲ ಅಂಶಗಳೂ ಕೂಡಿ ಬಂದಿವೆ. ಇದು ಕನ್ನಡ ಚಿತ್ರರಂಗದ ಗೆಲುವು, ವಿತರಕ ಮೋಹನ್‍ದಾಸ್‍ಪೈ ಅವರು ಪ್ರತಿದಿನ ಚಿತ್ರದ ಕಲೆಕ್ಷನ್ ಬಗ್ಗೆ ಮಾಹಿತಿ ಕೊಡುತ್ತಿದ್ದಾರೆ ಎಂದು ಹೇಳಿದರು.ಐ ಲವ್ ಯು ಚಿತ್ರಕ್ಕೆ ಬ್ಯಾಕ್ ಗ್ರೌಂಡ್ ಸಂಗೀತ ನೀಡಿರುವ ಗುರುಕಿರಣ್ ಮಾತನಾಡಿ, ಚಂದ್ರುಗೆ ಸಿನಿಮಾವೇ ಜೀವಾಳ. ಅವರಿಗೆ ಸಿನಿಮಾ ಬಿಟ್ಟು ಬೇರೆ ಯೋಚನೆಯೇ ಇಲ್ಲ. ಐ ಲವ್ ಯು ಚಿತ್ರದ ಗೆಲುವು ಅವರ ಹುಮ್ಮಸ್ಸು ಹೆಚ್ಚಿಸಿದ್ದು ಮತ್ತಷ್ಟು ಉತ್ತಮ ಚಿತ್ರಗಳನ್ನು ನಿರ್ದೇಶಿಸುವಂತಾಗಲಿ ಎಂದು ಹಾರೈಸಿದರು.

ಸಂಗೀತ ನಿರ್ದೇಶಕ ಡಾ.ಕಿರಣ್ ತೋಟಂಬೈಲು ಮಾತನಾಡಿ, ಐ ಲವ್ ಯು ಚಿತ್ರದ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿರುವುದಕ್ಕೆ ನನಗೆ ಹೆಮ್ಮೆ ಆಗಿದೆ. ಜೊತೆಗೆ ಚಿತ್ರಕ್ಕೂ ಮೆರಗು ತಂದುಕೊಟ್ಟಿದೆ ಎಂದು ಹೇಳಿದರು. ನಿರ್ಮಾಪಕ, ನಿರ್ದೇಶಕ ಆರ್.ಚಂದ್ರು ಹಾಗೂ ಉಪೇಂದ್ರ ಅವರ ಕಾಂಬಿನೇಷನ್‍ನ ಐ ಲವ್ ಯು ಚಿತ್ರವು ಶತದಿನೋತ್ಸವವನ್ನು ಆಚರಿಸಿಕೊಳ್ಳುವಂತಾಗಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!