ಉಪೇಂದ್ರ, ರಚಿತಾರಾಮ್, ಸೋನುಗೌಡ ಅಭಿನಯ, ಆರ್.ಚಂದ್ರು ನಿರ್ದೇಶನ ಮತ್ತು ನಿರ್ಮಾಣದ ಅದ್ದೂರಿ ‘ಐ ಲವ್ ಯು’ ಸಿನಿಮಾದ ಮಾತಿನ ಭಾಗದ ಚಿತ್ರೀಕರಣವು ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ದಲ್ಲಿ ನಿರತವಾಗಿದೆ. ಮೊಟ್ಟ ಮೊದಲಬಾರಿ ವೈದ್ಯ ಕಿರಣ್ ಆರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಈ ಪೈಕಿ ‘ನಿನ್ನೆ ಪ್ರೀತಿಸ್ತೇನೆ’ ಗೀತೆಯನ್ನು ಪ್ರೀತ್ಸೆ,ಪ್ರೀತ್ಸೆ ಮಾದರಿಯಲ್ಲಿ ದುಬೈ, ಮಸ್ಕಟ್ದಲ್ಲಿ ಶೂಟ್ ಮಾಡಲು ಯೋಜನೆ ಹಾಕಲಾಗಿದೆ. ಇದಕ್ಕಾಗಿ ಫೆಬ್ರವರಿ ಮೊದಲವಾರದಂದು ಅಲ್ಲಿಗೆ ಪ್ರಯಾಣ ಕೈಗೊಳ್ಳುತ್ತಾರಂತೆ. ವಿಷಯವನ್ನು ತಿಳಿಸಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು.
ವಿವರವನ್ನು ಹೇಳದೆ ಇರಲು ನಿರ್ದೇಶಕರಿಂದ ಸೂಚನೆ ಬಂದಿದ್ದರಿಂದ ಎಲ್ಲರು ಪಾತ್ರದ ಗೌಪ್ಯತೆಯನ್ನು ಕಾಪಾಡಿದರು. ಬಿಸಿ ತುಪ್ಪ ಇದ್ದಂತೆ ರೋಲ್ ಇದೆ. ಉಪ್ಪಿ ಸರ್ ಜೊತೆ ಅಭಿನಯಿಸಿದ್ದು ಖುಷಿ ನೀಡಿತು. ಹೆಚ್ಚಾಗಿ ಅಪ್ಪನೊಂದಿಗೆ ತೆರೆ ಹಂಚಿಕೊಂಡಿದ್ದು ಮರೆಯಲಾಗದ ಅನುಭವ ಅಂತಾರೆ ಸೋನುಗೌಡ.
ಸೆಟ್ನಲ್ಲಿ ಉಪ್ಪಿ ಅವರಿಂದ ಸಾಕಷ್ಟು ಲವ್ ಬಗ್ಗೆ ತಿಳಿದುಕೊಂಡೆ. ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ಹೇಗಿರುತ್ತದೆ ಎಂಬುದನ್ನು ತೋರಿಸಲಾಗಿದೆ. ಚಂದ್ರು, ಉಪ್ಪಿ ಇಬ್ಬರು ನನಗೆ ಲವ್ ಗುರುಗಳು ಆಗಿದ್ದರು. ಏನು ಬೇಕಾದರೂ ಸಾಧನೆ ಮಾಡಬಹುದು. ಆದರೆ ಇದನ್ನು ಮಾಡುವುದು ಕಷ್ಟ. ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ಲವ್ ಬಗ್ಗೆ ಉಪ್ಪಿ ಅವರೊಂದಿಗೆ ಆರೋಗ್ಯಕರ ಚರ್ಚೆ ನಡೆಸಿ ಮಾತಿಗೆ ವಿರಾಮ ಹಾಕಿದರು ನಾಯಕಿ ರಚಿತಾರಾಮ್ ಪ್ರೀತಿ ಬಗ್ಗೆ ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ. ಪ್ರಾರಂಭದಲ್ಲೆ ಇದೊಂದು ಗೀತಾಂಜಲಿ ಆಗುತ್ತದೆಂದು ಹೇಳಿದ್ದೆ. ಅದೇ ರೀತಿ ಬಂದಿದೆ. ಕ್ಲೈಮಾಕ್ಸ್ ಥ್ರಿಲ್ ಆಗಿದ್ದು, ಹೊರಗೆ ಬರುವಾಗ ಪ್ರತಿಯೊಬ್ಬರು ಯಾರಿಗಾದರೂ ಐ ಲವ್ ಯು ಹೇಳುತ್ತಾರೆ. ಪ್ರೀತಿ ಅಂದರೆ ಏನು ಅಂತ ಹೇಳಲಾಗಿದೆ. ಲವ್ ಆಗೋದು, ಮಾಡೋದು ಬೇರೆ, ಕಾಮಿಡಿಯನ್ನು ಹೇಗೆ ಮಾಡುವುದೆಂದು ರಚಿತರಾಮ್ ಅವರಿಂದ ಕಲಿತೆ ಎಂದು ಉಪೇಂದ್ರ ಕಾಲೆಳೆದರು.
ಕರ್ನಾಟಕದ ಮದ್ಯ ಭಾಗ ದಾವಣಗೆರೆಯಲ್ಲಿ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮದಲ್ಲಿ ಗುರುಕಿರಣ್ ಸಂಗೀತ ಸಂಜೆ ನಡೆಯಲಿದೆ. ಉಪ್ಪಿ ಸರ್ಗೆ ಕಾಲಿವುಡ್, ಟಾಲಿವುಡ್ದಲ್ಲಿ ಬೇಡಿಕೆ ಇರುವ ಕಾರಣ ರಜನಿಕಾಂತ್, ರಾಜಮೌಳಿ ಅವರನ್ನು ಕರೆಸಲು ಪ್ರಯತ್ನಗಳು ನಡೆಯುತ್ತಿದೆ. ಭಾರತದ ಟಾಪ್ 10 ನಿರ್ದೇಶಕರಲ್ಲಿ ಉಪೇಂದ್ರ ಒಬ್ಬರಾಗಿದ್ದಾರೆ. ಇದೇ 30ರಂದು ಟ್ರೈಲರ್, ಜನವರಿ 12 ಆಡಿಯೋ ಸಿಡಿ ಬಿಡುಗಡೆ, ಪ್ರೇಮಿಗಳ ದಿನದಂದು ಅವರಿಗೆ ಉಡುಗೊರೆಯಾಗಿ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬರಲಿದೆ ಎಂಬುದರ ಮಾಹಿತಿಯನ್ನು ಆರ್.ಚಂದ್ರು ಬಿಚ್ಚಿಟ್ಟರು.
Pingback: sex organ mold silicone