ನ.7ಕ್ಕೆ ‘ಐ ಆ್ಯಮ್ ಗಾಡ್’ ಬಿಡುಗಡೆ

ಉಪೇಂದ್ರ ಅವರ ಶಿಷ್ಯ ರವಿ ಗೌಡ  ನಿರ್ದೇಶಿಸಿ, ನಟಿಸಿ, ನಿರ್ಮಾಣ ಮಾಡಿರುವ ಸಿನಿಮಾ ‘ಐ ಆ್ಯಮ್ ಗಾಡ್’ ನ.7ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಟ್ರೇಲರ್ ಮೂಲಕ ಸಿನಿಮಾ ಗಮನ ಸೆಳೆಯುತ್ತಿದೆ. ‘ಐ ಆ್ಯಮ್ ಗಾಡ್’ ಸಿನಿಮಾದ ಟ್ರೇಲರ್​​ನಲ್ಲಿ ಇದೊಂದು ‌ಸಸ್ಪೆನ್ಸ್ ಥ್ರಿಲ್ಲರ್ ಲವ್‌ ಸ್ಟೋರಿ ಇರುವ ಸಿನಿಮಾ ಎಂಬ ಸುಳಿವು ಸಿಕ್ಕಿದೆ.

ರವಿ ಗೌಡ ಅವರು ಉಪೇಂದ್ರ ಗರಡಿಯಲ್ಲಿ ಸಿನಿಮಾದ ಪಾಠಗಳನ್ನು ಕಲಿತವರು. ಉಪೇಂದ್ರ ಜೊತೆ ‘ಉಪ್ಪಿ 2’ ಸಿನಿಮಾದಲ್ಲಿ ಕೆಲಸ ಮಾಡಿ ಅವರು ಅನುಭವ ಪಡೆದರು. ಈಗ ‘ಐ ಆ್ಯಮ್ ಗಾಡ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ರವಿ ಗೌಡ ಹಾಗೂ ವಿಜೇತಾ ಜೋಡಿಯಾಗಿ ನಟಿಸಿರುವ ‘ಐ ಆ್ಯಮ್ ಗಾಡ್’  ಸಿನಿಮಾದಲ್ಲಿ  ರವಿಶಂಕರ್‌, ಅವಿನಾಶ್‌, ಅರುಣಾ ಬಾಲರಾಜ್‌, ನಿರಂಜನ್‌ ಕುಮಾರ್‌ ನಟಿಸಿದ್ದಾರೆ. ಜನೀಶ್‌ ಲೋಕನಾಥ್‌ ಅವರು  ಸಿನಿಮಾಗೆ ಸಂಗೀತ ನೀಡಿದ್ದಾರೆ. ಜಿತಿನ್‌ ದಾಸ್‌ ಅವರು ಛಾಯಾಗ್ರಹಣ ಮಾಡಿದ್ದಾರೆ.

ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಮುಖ್ಯ ಅತಿಥಿಯಾಗಿ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.   ಈಗಾಗಲೇ  ಸಿನಿಮಾದ 2 ಹಾಡುಗಳು ಹಿಟ್ ಆಗಿವೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!