ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರ್ಮಾಪಕ ಎಂ. ರಮೇಶ್ ರೆಡ್ಡಿ (ನಂಗ್ಲಿ)

ಜನಸಾಮಾನ್ಯರಾಗಿ ಗುರ್ತಿಸಿಕೊಂಡು, ಉದ್ಯಮದಲ್ಲಿ ಶ್ರಮಪಟ್ಟು ಮೇಲೆ ಬಂದಂತಹ ವ್ಯಕ್ತಿ ಎಂ. ರಮೇಶ್ ರೆಡ್ಡಿ . ಇನ್ಫೋಸಿಸ್ ಮುಖ್ಯಸ್ಥೆ ಶ್ರೀಮತಿ ಸುಧಾ ಮೂರ್ತಿ ಅಮ್ಮನವರ ಆಪ್ತ ವಲಯದಲ್ಲಿ ಇರುವ ಇವರು ಬಹಳ ಸರಳ ಹಾಗೂ ಸ್ನೇಹ ಜೀವಿ ವ್ಯಕ್ತಿತ್ವವನ್ನು ಹೊಂದಿದ್ದಾರೆ.

ಇವರು ಚಿತ್ರೋದ್ಯಮದ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದು , ಸದಭಿರುಚಿ ಚಿತ್ರವನ್ನು ನಿರ್ಮಿಸಲು ಮುಂದಾದರು.ಅದರಂತೆ ತೆಲುಗು ಹಾಗೂ ಕನ್ನಡ ಚಿತ್ರಗಳನ್ನು ನಿರ್ಮಿಸಿ ಯಶಸ್ವಿ ನಿರ್ಮಾಪಕ ಎನಿಸಿಕೊಂಡರು.

ತೆಲುಗಿನಲ್ಲಿ ಸರೇ ನೀ ಇಷ್ಟೆo , ಲವ್ ಇನ್ ಹೈದ್ರಾಬಾದ್ ಚಿತ್ರ ಸೇರಿದಂತೆ ಕನ್ನಡದಲ್ಲಿ ಪಡ್ಡೆಹುಲಿ , ನಾತಿಚರಾಮಿ , ಉಪ್ಪು ಹುಳಿ ಖಾರ ಚಿತ್ರಗಳ ನಿರ್ಮಾಣ ಮಾಡಿದ್ದಾರೆ. ಇನ್ನೂ ಹಲವಾರು ಚಿತ್ರಗಳು ಈಗ ನಿರ್ಮಾಣದ ಹಂತದಲ್ಲಿದೆ. ಆ ನಿಟ್ಟಿನಲ್ಲಿ ರಮೇಶ್ ಅರವಿಂದ್ ಅಭಿನಯದ “100” ಚಿತ್ರವು ಕೂಡ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿ ಬಿಡುಗಡೆಗೆ ಸಿದ್ಧವಾಗುತ್ತಿದೆ.

ಅದಲ್ಲದೆ ಯೋಗರಾಜ್ ಭಟ್ ನಿರ್ದೇಶನದಲ್ಲಿ ಗಾಳಿಪಟ -2 ಚಿತ್ರವೂ ಕೂಡ ಚಿತ್ರೀಕರಣ ನಡೆಸಿದೆ. ಹೀಗೆ ಒಂದರ ಹಿಂದೆ ಒಂದಂತೆ ತಮ್ಮ ಸೂರಜ್ ಪ್ರೊಡಕ್ಷನ್ಸ್ ಮೂಲಕ ಅದ್ದೂರಿ ವೆಚ್ಚದಲ್ಲಿ ಚಿತ್ರಗಳು ನಿರ್ಮಾಣವಾಗುತ್ತಿದ್ದು , ಕನ್ನಡ ಚಿತ್ರರಂಗಕ್ಕೆ ಇಂಥ ಸದಭಿರುಚಿಯ ನಿರ್ಮಾಪಕರು ಅತ್ಯಗತ್ಯವಿದೆ.

ಕೊರೋನಾ ಸಮಯದಲ್ಲಿ ಬಹಳಷ್ಟು ತೊಂದರೆಯಲ್ಲಿದ್ದ ಚಿತ್ರೋದ್ಯಮದ ಕಾರ್ಮಿಕರಿಗೆ ಸಹಾಯ ಹಸ್ತವನ್ನು ಚಾಚಿದ್ದಾರೆ. ಇಂದು ತಮ್ಮ ಜನ್ಮದಿನ ಎಂಬ ಅರಿವು ಇಲ್ಲದೆ ಇರುವ ಈ ಮೃದು ಸ್ವಭಾವದ ವ್ಯಕ್ತಿಯ ಹುಟ್ಟುಹಬ್ಬಕ್ಕೆ ಅವರ ಸ್ನೇಹಿತರು , ಹಿತೈಷಿಗಳು , ಬಂಧು ಮಿತ್ರರು ಹಾಗೂ ಚಿತ್ರೋದ್ಯಮದ ಸ್ನೇಹಿತರು ಶುಭವನ್ನು ಕೋರಿದ್ದಾರೆ. ಇನ್ನೂ ಈ ಸಂಸ್ಥೆಯಿಂದ ಬಹಳಷ್ಟು ಉತ್ತಮ ಚಿತ್ರಗಳು ಹೊರ ಬರಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!