ಆಪರೇಶನ್ ಮಾಡಿಸಲು ಹುಚ್ಚ ವೆಂಕಟ್ ಪರದಾಟ

ಕನ್ನಡದ ಜನಪ್ರಿಯ ನಟ ಹುಚ್ಚ ವೆಂಕಟ್ ಅವರು ತಮ್ಮ ಕಣ್ಣಿನ ಪೊರೆಯ ಆಪರೇಷನ್‌ ಮಾಡಿಸಲು ಹಣ ಇಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಯೂಟ್ಯೂಬ್ ಚಾನೆಲ್ ವೊಂದರ  ಸಂದರ್ಶನದಲ್ಲಿ ಮಾತನಾಡಿರುವ ಹುಚ್ಚ ವೆಂಕಟ್, ತಮಗಿರುವ ಕಣ್ಣಿನ ಸಮಸ್ಯೆ ಹಾಗೂ ಆರ್ಥಿಕ ಸಮಸ್ಯೆ ಬಗ್ಗೆ ಕಣ್ಣೀರಿಟ್ಟಿದ್ದಾರೆ.  ‘ಕಣ್ಣಿಗೆ ಪೊರೆ ಬಂದಿದೆ. ಅದಕ್ಕೆ ಆಪರೇಷನ್‌ ಮಾಡಿಸಬೇಕು.  ಚಿಕಿತ್ಸೆ ಪಡೆಯುತ್ತಿದ್ದೇನೆ. ಮುಂದಿನ ತಿಂಗಳು ಆಪರೇಷನ್‌ ಮಾಡಿಸಬೇಕು. ಅದಕ್ಕೆ ಹಣ ಇಲ್ಲ.  ಹೊಂದಿಸುತ್ತಿದ್ದೇನೆ. ಅದಕ್ಕೆ 57 ಸಾವಿರ ಖರ್ಚಾಗಲಿದೆ’ ಎಂದು ತಿಳಿಸಿದ್ದಾರೆ.

‘ಜನರ ಹತ್ತಿರ ಮಾತ್ರ ಹಣ ಕೇಳೋದಿಲ್ಲ. ಜನ ನನಗೆ ಪ್ರೀತಿ, ಕಣ್ಣೀರು ಕೊಡುತ್ತಿದ್ದಾರೆ. ಅಷ್ಟೇ ಸಾಕು.  ಸಾಧ್ಯವಾದರೆ ಬೇರೆಯವರಿಗೆ ಸಹಾಯ ಮಾಡಿ. ನನಗೆ ಸಹಾಯ ಬೇಡ. ನಾನು ತಿನ್ನೋದು ಒಂದು ಹೊತ್ತಿನ ಊಟ ಮಾತ್ರ. ಬೆಳಗ್ಗೆ ತಿಂಡಿ ತಿನ್ನಲ್ಲ, ಮಧ್ಯಾಹ್ನ ಊಟ ಮಾಡುವುದಿಲ್ಲ. ಇದು ನನಗೆ ಮೊದಲಿನಿಂದಲೂ ಇರುವ ಅಭ್ಯಾಸ. ಆದರೆ ದಿನಕ್ಕೆ 20-30 ಗ್ಲಾಸ್‌ ಟೀ ಕುಡೀತಿನಿ. ಇದು ಅಮ್ಮನಿಂದ ಬಂದ ಅಭ್ಯಾಸ’ ಎಂದಿದ್ದಾರೆ.

ಅಕ್ಕ-ಭಾವನ ಮನೆಯಲ್ಲಿರುವುದಾಗಿ ತಿಳಿಸಿರುವ ಹುಚ್ಚ ವೆಂಕಟ್, ತಮ್ಮ ಬ್ಯಾಂಕ್‌ ಖಾತೆಯಲ್ಲಿರುವ ಹಣವನ್ನು ತೋರಿಸಿ  ಓದುವಂತೆ ಹೇಳಿದ್ದಾರೆ. ಈ ವೇಳೆ ಅವರ ಬ್ಯಾಂಕ್‌ ಅಕೌಂಟ್‌ನಲ್ಲಿ 6.56 ರೂಪಾಯಿ ಹಣವಿರುವುದು ಕಂಡು ಬಂದಿದೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!