‘ಹಂಗಮಾ ಪ್ಲೇ’ ನಲ್ಲಿ ಕನ್ನಡದಲ್ಲಿ ‘ರಾತ್ರಿಯ ಯಾತ್ರಿಕ’,

ಹಂಗಾಮಾ ಪ್ಲೇ, ರೆಡ್ ಲೈಟ್ ಏರಿಯಾಗಳ ಸೂಕ್ಷ್ಮ ಕತೆಗಳನ್ನು ಒಳಗೊಂಡ ಕನ್ನಡ ಮೂಲದ ಸರಣಿ ಕಾರ್ಯಕ್ರಮ ‘ರಾತ್ರಿಯ ಯಾತ್ರಿಕ’ವನ್ನು ಆರಂಭಿಸಿದೆ
ಈ ಶೋ ಪ್ರಸ್ತುತ ಹಂಗಮಾ ಪ್ಲೇ ಮತ್ತು ಪಾಲುದಾರ ನೆಟ್‌ವರ್ಕ್‌ಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ಹಂಗಮಾ ಪ್ಲೇ 350 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳನ್ನು ಮತ್ತು 930 ಕ್ಕೂ ಹೆಚ್ಚು ಸಣ್ಣ ವೀಡಿಯೊಗಳನ್ನು ಕನ್ನಡ ಭಾಷೆಯಲ್ಲಿ ನೀಡುತ್ತಿದೆ. ಅದರೊಂದಿಗೆ ತನ್ನ ಸಂಗ್ರಹದ ಲೈಬ್ರರಿಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಹೊಂದಿದೆ

ಭಾರತ,28 January 2021: ಹಂಗಮಾ ಡಿಜಿಟಲ್ ಮೀಡಿಯಾ ಒಡೆತನದ ಪ್ರಮುಖ ವಿಡಿಯೋ ಆನ್ ಡಿಮ್ಯಾಂಡ್ ಪ್ಲಾಟ್‌ಫಾರ್ಮ್ ಆಗಿರುವ ಹಂಗಮಾ ಪ್ಲೇ ಇಂದು ಕನ್ನಡದಲ್ಲಿ ಹಂಗಾಮಾ ಒರಿಜಿನಲ್ ‘ರಾತ್ರಿಯ ಯಾತ್ರಿಕ’, ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಿದೆ. ಇದರಲ್ಲಿ ರೆಡ್ ಲೈಟ್ ಏರಿಯಾಗಳೆಂದು ಗುರುತಿಸಲಾದ ಪ್ರದೇಶಗಳ 5 ವಿಭಿನ್ನ ಮತ್ತು ಚಿಂತನಶೀಲ ಕಥೆಗಳನ್ನು ಒಳಗೊಂಡಿರಲಿದೆ. ಪ್ರತಿಯೊಂದು ಕಥೆಯು ಅಪೂರ್ಣ ಜೀವನದ ಮತ್ತು ಅನ್ವೇಷಣೆಯ ಪಾತ್ರಗಳ ಕತೆಯನ್ನು ಒಳಗೊಂಡಿವೆ. ಪ್ರೀತಿ, ದೈಹಿಕ ಸುಖಗಳು, ನಿರಾಶ್ರಿತರ ಅಥವಾ ಸಮೀಪವರ್ತಿಗಳ ಘಟನೆಗಳನ್ನು ಆಧರಿಸಿವೆ. ವೇಶ್ಯೆಯ ಮಗನೆಂದು ನಾಚಿಕೆಪಡುವ ವ್ಯಕ್ತಿಯೊಬ್ಬ ಆತ ಅತಿಯಾಗಿ ದ್ವೇಷಿಸುವ ಸ್ಥಳದಲ್ಲೇ ಹೇಗೆ ಅರಿವು ಪಡೆಯುತ್ತಾನೆ; 69 ವರ್ಷದ ವ್ಯಕ್ತಿಯೊಬ್ಬ ಹೇಗೆ ತನ್ನ ದೈಹಿಕ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಹಾತೊರೆಯುತ್ತಾನೆ ಮತ್ತು ಅದಕ್ಕಾಗಿ ಸಮಾಜದ ಬಗ್ಗೆ ಹೆದರದೆ, ನಾಚಿಕೆ ಪಡದೆ ಜೀವಿಸುತ್ತಾನೆ; ಜೈಲಿನಿಂದ ಹೊರಬಂದ ಪ್ರೇಮಿಯೊಬ್ಬ ವಾಸ್ತವಿಕತೆಯನ್ನು ಒಪ್ಪಿಕೊಂಡು ಹೇಗೆ ತನ್ನ ಹೊಸ ಬದುಕಿನ ಅಧ್ಯಾಯವನ್ನು ಪ್ರಾರಂಭಿಸುತ್ತಾನೆ; 18 ವರ್ಷ ವಯಸ್ಸಿನ ಹುಡುಗನೊಬ್ಬ ಎಲ್ಲಾ ಲೌಕಿಕ ಸುಖಗಳನ್ನು ತ್ಯಜಿಸುವ ಮೊದಲು ಏಕೆ ಒಮ್ಮೆ ದೈಹಿಕ ಸುಖ ಪಡೆಯಲು ಬಯಸುತ್ತಾನೆ; ಜನರನ್ನು ದೋಚಿ ಜೀವನ ನಡೆಸುವ ವ್ಯಕ್ತಿಯೊಬ್ಬನ ಬಳಿಕ ಇರುವ ಅಮೂಲ್ಯವಾದ ವಸ್ತುವೊಂದನ್ನು ಕದ್ದು ಹೋಗುವ ಸಂದರ್ಭಗಳ ರೋಚಕ ಕಥೆಗಳು ಸರಣಿಯಲ್ಲಿ ಇರಲಿವೆ. ಇಲ್ಲಿ ಬರುವ ಪ್ರತಿಯೊಂದು ಪಾತ್ರಗಳು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ರೆಡ್ ಲೈಟ್ ಏರಿಯಾಗೆ ಭೇಟಿ ನೀಡುತ್ತವೆ ಮತ್ತು ಅಂತಿಮವಾಗಿ ಇಲ್ಲಿ ಚಾಣಕ್ಯತನದಿಂದ ಸಾಂತ್ವನ ಮತ್ತು ಪರಿಹಾರವನ್ನು ಕಂಡುಕೊಳ್ಳುತ್ತವೆ. ಅವರ ಅನುಭವಗಳು ಕೆಲವೊಮ್ಮೆ ಪ್ರಚೋದನಕಾರಿಯೇ ಇರಬಹುದು, ಆದರೆ ಅದನ್ನು ಲೆಕ್ಕಿಸದೆ, ಒಂದೇ ರಾತ್ರಿಯಲ್ಲಿ ಅವರ ದೃಷ್ಟಿಕೋನ ಶಾಶ್ವತವಾಗಿ ಬದಲಾಗುತ್ತದೆ!

ಈ ಪ್ರದರ್ಶನವು ಸದ್ಯ ಹಂಗಮಾ ಪ್ಲೇ, ಹಂಗಾಮಾದ ವೀಡಿಯೊ ಆನ್ ಡಿಮ್ಯಾಂಡ್ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಫ್ಲಾಟ್ ಫಾರ್ಮ್ ನ ಸಂಗೀತ, ಮನರಂಜನೆ, ಚಲನಚಿತ್ರಗಳು ಮುಂತಾದ ವಿಭಾಗಗಳಲ್ಲಿ 350 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳು ಮತ್ತು 930 ಕ್ಕೂ ಹೆಚ್ಚು ಕನ್ನಡದ ಸಣ್ಣ ವೀಡಿಯೊಗಳು ವೀಕ್ಷಣೆಗೆ ಲಭ್ಯವಿವೆ. ಎಂಎಕ್ಸ್ ಪ್ಲೇಯರ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಆ್ಯಪ್, ವಿ ಮೂವೀಸ್ ಮತ್ತು ಟಿವಿ, ಅಮೆಜಾನ್ ಫೈರ್ ಟಿವಿ ಸ್ಟಿಕ್, ಟಾಟಾ ಸ್ಕೈ ಬಿಂಜ್, ಡಿಶ್‌ಎಸ್‌ಎಂಆರ್ಟಿ ಸ್ಟಿಕ್, ಡಿ 2 ಹೆಚ್ ಸ್ಟ್ರೀಮ್, ಡಿಶ್‌ಎಸ್‌ಎಂಆರ್ಟಿ ಹಬ್, ಫ್ಲಿಪ್ ಕಾರ್ಟ್ ವಿಡಿಯೋ, ಸೋನಿ ಲೈವ್, ಐಎಸ್‌ಪಿಗಳಾದ ಮೇಘಬೆಲಾ ಬ್ರಾಡ್‌ಬ್ಯಾಂಡ್, ಅಲೈಯನ್ಸ್ ಬ್ರಾಡ್‌ಬ್ಯಾಂಡ್, ಎಸಿಟಿ ಫೈಬರ್ನೆಟ್ ಮತ್ತು ನೆಟ್‌ಪ್ಲಸ್, ಮತ್ತು ಸ್ಮಾರ್ಟ್ ಟಿವಿಗಳಾದ ಟಿಸಿಎಲ್, ಒನ್‌ಪ್ಲಸ್ ಟಿವಿ, ಎಲ್ ಜಿ, ಸೋನಿ ಬ್ರಾವಿಯಾ, ಸಿವಿಟಿಇ, ತೋಷಿಬಾ ಮತ್ತು ಕ್ಲೌಡ್‌ವಾಕರ್ ಗಳಲ್ಲಿ ಇದನ್ನು ವೀಕ್ಷಿಸಬಹುದು. ಹೆಚ್ಚುವರಿಯಾಗಿ, ಶಿಯೋಮಿಯೊಂದಿಗಿನ ಹಂಗಾಮಾದ ಒಪ್ಪಂದದಿಂದಾಗಿ ಗ್ರಾಹಕರಿಗೆ ಮಿ ಟಿವಿಯಲ್ಲಿ ಹಂಗಮಾ ಪ್ಲೇ ಮೂಲಕವೂ ಈ ಕಾರ್ಯಕ್ರಮ ವೀಕ್ಷಣೆಗೆ ಲಭ್ಯವಾಗಲಿದೆ.
ಕಾರ್ಯಕ್ರಮದ ಕುರಿತು ಮಾತನಾಡಿದ ಹಂಗಮಾ ಡಿಜಿಟಲ್ ಮೀಡಿಯಾದ ಸಿಒಒ ಸಿದ್ಧಾರ್ಥ ರಾಯ್, “ಕಳೆದ ಕೆಲವು ವರ್ಷಗಳಲ್ಲಿ, ಸ್ಥಳೀಯ ಭಾಷೆಗಳಲ್ಲಿ ಮನರಂಜನೆ, ಕಾರ್ಯಕ್ರಮ ಮತ್ತು ಕತೆಗಳ ನಿರೂಪಣೆಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ರಾತ್ರಿಯ ಯಾತ್ರಿಕ ಮನುಷ್ಯನ ಭಾವನೆಗಳನ್ನು ಬಿಂಬಿಸುವ ವಿಶಿಷ್ಟವಾದ ಐದು ಕಥೆಗಳನ್ನು ಒಳಗೊಂಡಿದೆ. ಇದನ್ನು ವಿಶ್ವಾದ್ಯಂತ ಇರುವ ಕನ್ನಡ-ಮಾತನಾಡುವ ಪ್ರೇಕ್ಷಕರು ಮೆಚ್ಚುತ್ತಾರೆ ಎಂಬ ಭರವಸೆ ಇದೆ. ಈ ವರ್ಷ ಕನ್ನಡದಲ್ಲಿ ಹೆಚ್ಚಿನ ಶೋ, ಚಲನಚಿತ್ರ ಹಾಗೂ ಕಿರುಚಿತ್ರ ಸೇರಿದಂತೆ ಸಣ್ಣ ವೀಡಿಯೋಗಳನ್ನು ಬಿಡುಗಡೆ ಮಾಡುವ ಉದ್ದೇಶ ಹಾಕಿಕೊಂಡಿದ್ದು ನಮ್ಮ ಬಳಕೆದಾರರ ಸಂಖ್ಯೆಯನ್ನು ಎರಡು ಪಟ್ಟು(2x) ಹೆಚ್ಚಿಸುವ ಗುರಿ ಹೊಂದಿದ್ದೇವೆ” ಎಂದರು.

ಸರಣಿಯ ಬಗ್ಗೆ ಮಾತನಾಡಿದ ಅನಿಲ್ ವಿ ಕುಮಾರ್ ಪ್ರೊಡಕ್ಷನ್ ನ ಸಂಸ್ಥಾಪಕ ಅನಿಲ್ ವಿ ಕುಮಾರ್, “ಈ ಸರಣಿಯಲ್ಲಿ ಒಂದು ಈವರೆಗೆ ಎಲ್ಲೂ ಕಾಣಿಸದ ವಿಭಿನ್ನ ಪರಿಕಲ್ಪನೆಯಿದೆ. ಗಟ್ಟಿಯಾದ ಮತ್ತು ಸೂಕ್ಷ್ಮ ಪಾತ್ರಗಳ ಮೂಲಕ ರೆಡ್ ಲೈಟ್ ಏರಿಯಾಗಳ ಜನರ ಭಾವನೆ ಮತ್ತು ಬುದ್ಧಿವಂತಿಕೆಯನ್ನು ಎತ್ತಿ ತೋರಿಸುತ್ತದೆ. ಅಲ್ಪಾವಧಿಯಲ್ಲಿಯೇ ಒಂದಾಗಿ ಆಯಾ ಪಾತ್ರಗಳಿಗೆ ಜೀವತುಂಬಿದ ನಟರು ಮತ್ತು ಸಿಬ್ಬಂದಿಗಳ ಜೊತೆ ಕೆಲಸ ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ. ಪ್ರೇಕ್ಷಕರಿಂದ ಬರಲಿರುವ ಪ್ರತಿಕ್ರಿಯೆಗಳನ್ನು ನಾನು ಎದುರು ನೋಡುತ್ತಿದ್ದೇನೆ” ಎಂದರು.
ಈ ಸರಣಿಯಲ್ಲಿ ಸುಧೀರ್ ಪಾಂಡೆ, ಅಂಜು ಮಹೇಂದ್ರು, ಇಕ್ಬಾಲ್ ಖಾನ್, ಬರ್ಖಾ ಸೇನ್ ಗುಪ್ತಾ, ಪರಾಗ್ ತ್ಯಾಗಿ, ಅವಿನಾಶ್ ಮುಖರ್ಜಿ, ಶೈನಿ ದೋಶಿ, ರೆನೀ ಧ್ಯಾನಿ, ಮಾನ್ಸಿ ಶ್ರೀವಾಸ್ತವ, ರೇಹ್ನಾ ಪಂಡಿತ್, ಆಕಾಶ್‌ದೀಪ್ ಅರೋರಾ, ಸುಪ್ರಿಯಾ ಶುಕ್ರಾ ಮತ್ತು ಇಂದ್ರೇಶ್ ಮಲಿಕ್ ಅಭಿನಯಿಸಿದ್ದಾರೆ. ಹಂಗಮಾ ಡಿಜಿಟಲ್ ಮೀಡಿಯಾ ಸಹಯೋಗದೊಂದಿಗೆ ಅನಿಲ್ ವಿ ಕುಮಾರ್ ಪ್ರೊಡಕ್ಷನ್ಸ್ ನಿರ್ಮಿಸಿದ ಈ ಕಾರ್ಯಕ್ರಮದ ಎಲ್ಲಾ ಸಂಚಿಕೆಗಳನ್ನು ಅನಿಲ್ ವಿ ಕುಮಾರ್ ನಿರ್ದೇಶಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!