Kushi Movie : ಸಮಂತಾ-ವಿಜಯ್​ ‘ಖುಷಿ’ ಸಿನಿಮಾ ಟ್ರೇಲರ್ ರೀಲಿಸ್!​

ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಖುಷಿ’. ಇಂದು ‘ಖುಷಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ‘ಖುಷಿ’ ಔಟ್ ಅಂಡ್ ಔಟ್ ರೊಮ್ಯಾಂಟಿಕ್ – ಕಾಮಿಡಿ ಸಿನಿಮಾ. ಶಿವ ನಿರ್ವಾಣ ನಿರ್ದೇಶನದ ‘ಖುಷಿ’ ಚಿತ್ರದ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ‘ಖುಷಿ’ ಚಿತ್ರದ ಬಗ್ಗೆ ವಿಜಯ್ ದೇವರಕೊಂಡ.

ಈ ಟ್ರೇಲರ್‌ನಲ್ಲಿರುವ ದೃಶ್ಯಗಳು ಶಿವ ನಿರ್ವಾಣ ಚಿತ್ರದ ನಿರೀಕ್​ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಕಾಶ್ಮೀರ, ಅದೇ ರೋಜಾ ಸಿನಿಮಾದಲ್ಲಿ ನೋಡಿದ ಹಾಗೇ ಇದೆ ಎಂಬ ವಿಜಯ್ ಡೈಲಾಗ್ ನೊಂದಿಗೆ ಈ ಟ್ರೈಲರ್ ಶುರುವಾಗಿದೆ. ವಿಜಯ್ ಅವರ ಕಾಮಿಡಿ ಹಿಂದಿ ಮತ್ತು ತೆಲುಗು ಮಿಕ್ಸ್ ಡೈಲಾಗ್ ಟ್ರೈಲರ್​ನ ಹೈಲೈಟ್ ಆಗಿದೆ. ಆಕೆ ಬೇಗಂ ಅಲ್ಲ, ಬ್ರಾಹ್ಮಣ ಕುಟುಂಬ ಹುಡುಗಿ ಅನ್ನೋ ಒರಿಜಿನಲ್ ಟ್ವಿಸ್ಟ್ ತೋರಿಸಿ ಅಭಿಮಾನಿಗಳನ್ನು ಸೆಳೆದಿದ್ದಾರ.

ವಿಜಯ್ ದೇವರಕೊಂಡ- ಸಮಂತಾ ಪತಿ-ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರೀತಿ, ಮದುವೆ, ಜಗಳ  ಹಿನ್ನೆಲೆಯಲ್ಲಿ ಈ ಸಿನಿಮಾ ಇರಲಿದೆ ಎಂಬುದು ಟ್ರೈಲರ್​ನಲ್ಲಿ ಸ್ಪಷ್ಟವಾಗಿದೆ. ಟ್ರೇಲರ್‌ ಮೂಲಕ ಖುಷಿ ಸಿನಿಮಾ ಯುವ ಜನತೆಯ ಮನಸ್ಸು ಗೆದ್ದಿದೆ.

‘ಖುಷಿ’ ಚಿತ್ರವನ್ನು ಶಿವನಿರ್ವಾಣ ನಿರ್ದೇಶಿಸುತ್ತಿದ್ದಾರೆ. ಸಮಂತಾ ಕಾಶ್ಮೀರದ ಹಿನ್ನೆಲೆಯಲ್ಲಿ ಮುಸ್ಲಿಂ ಯುವತಿಯಾಗಿ ಕಾಣಿಸಿಕೊಳ್ಳುವ ಸಮಂತಾರನ್ನು ಪ್ರೀತಿಸುವ ನಾಯಕನ ಪಾತ್ರದಲ್ಲಿ ವಿಜಯ್​ ನಟಿಸಿದ್ದಾರೆ. ವಿಜಯ್ ದೇವರಕೊಂಡ-ಸಮಂತಾ ಕೆಮಿಸ್ಟ್ರಿ ಚೆನ್ನಾಗಿಯೇ ಮೂಡಿಬರಲಿದೆ ಎಂಬುದು ಟ್ರೇಲರ್ ನಿಂದ ಅನಿಸುತ್ತಿದೆ.

ತಮಿಳು, ಮಲಯಾಳಂ, ಕನ್ನಡದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಜಯರಾಂ, ಸಚಿನ್ ಖೇಡೇಕರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ಶರಣ್ಯ ಪೊನ್ ವಣ್ಣನ್, ರೋಹಿಣಿ, ರಾಹುಲ್ ರಾಮಕೃಷ್ಣ, ವೆನ್ನೆಲ ಕಿಶೋರ್, ಶ್ರೀಕಾಂತ್ ಅಯ್ಯಂಗಾರ್, ಶರಣ್ಯ ಪ್ರದೀಪ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಹು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಹಿಂದೆ ಪವನ್​ ಕಲ್ಯಾಣ್ ಖುಷಿ ಸಿನಿಮಾ ಮಾಡಿದ ದಾಖಲೆಯನ್ನು ವಿಜಯ್ ಸಿನಿಮಾ ಕೂಡ ಮಾಡಲಿದೆ ಎನ್ನಲಾಗ್ತಿದೆ. ಪವನ್ ಕಲ್ಯಾಣ್ ಮತ್ತು ಭೂಮಿಕಾ ನಡುವಿನ ಪ್ರೀತಿ, ಕೋಪವನ್ನು ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ಪಾತ್ರಗಳ ನಡುವೆಯೂ ನೋಡಬಹುದಾಗಿದೆ. ಇದೊಂದು ಫೀಲ್ ಗುಡ್ ಲವ್ ಸ್ಟೋರಿ ಆಗಿದ್ದು, ಈ ಸಿನಿಮಾಗಾಗಿ ತೆಲುಗು ಪ್ರೇಕ್ಷಕರು ಕಾಯುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!