ರಕ್ತಾಕ್ಷ ನಾಯಕನಾಗಿ ರೋಹಿತ್

ಉತ್ತರ ಕರ್ನಾಟಕದ ಯುವ ಪ್ರತಿಭೆ ರೋಹಿತ್ ಅವರು ರಕ್ತಾಕ್ಷ ಚಿತ್ರದ ನಾಯಕ ಆಗಿ ತೆರೆಯ ಮೇಲೆ ಬರಲು ಸಿದ್ಧತೆ ನಡೆಸಿದ್ದಾರೆ.

ರಕ್ತಾಕ್ಷ ರಿವೆಂಜ್ ಬೇಸ್ಡ್ ಥ್ರಿಲ್ಲರ್ ಚಿತ್ರ ಆಗಿದೆ. ಚಿತ್ರಕ್ಕೆ ವಾಸುದೇವ ಎಸ್ ಎನ್ ಅವರು ನಿರ್ದೇಶನ ಮಾಡಿದ್ದಾರೆ. ರೋಹಿತ್ ಅವರು ರಕ್ತಾಕ್ಷ ಚಿತ್ರವನ್ನು ನಿರ್ಮಾಣ ಕೂಡ ಮಾಡುತ್ತಿದ್ದಾರೆ.

ಕಾಲೇಜಿನಗಳಿಂದ ಸಿನಿಮಾದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ರೋಹಿತ್ ಅವರು ಚಿತ್ರರಂಗಕ್ಕೆ ಬರುವ ಉದ್ದೇಶದಿಂದ ಮಾಡೆಲ್ ಜಗತ್ತಿನಲ್ಲಿ ನೆಲೆ ಊರಲು ಯತ್ನಿಸಿದರು. ಆದರೆ ಮಿಸ್ಟರ್ ಇಂಡಿಯಾಗೆ ಸ್ಪರ್ಧೆ ಮಾಡುವ ವೇಳೆಗೆ ಕೋವಿಡ್ ಬಂದಿತು. ಬಳಿಕ ಅವರು ಹೊಸ ಚಿತ್ರ ಒಂದರಲ್ಲಿ ವಿಲನ್ ಪಾತ್ರವನ್ನು ಕೂಡ ಮಾಡಿದರು.

ಹೊಸ ಬ್ಯಾನರ್ ಆರಂಭಿಸಿ ಉತ್ತರ ಕರ್ನಾಟಕ ಭಾಗದ ಹೊಸಬರಿಗೆ ಅವಕಾಶ ಕೊಡಬೇಕು ಎನ್ನುವ ಕಾರಣಕ್ಕೆ ಸಾಯಿ ಪ್ರೊಡಕ್ಷನ್ಸ್ ಆರಂಭಿಸಿದರು. ರಕ್ತಾಕ್ಷ ಚಿತ್ರದಲ್ಲಿ ಯುವ ಪ್ರತಿಭೆಗಳಿಗೆ ರೋಹಿತ್ ಅವಕಾಶವನ್ನು ಕಲ್ಪಿಸಿದ್ದಾರೆ. ಚಿತ್ರ ಶೀಘ್ರ ಬಿಡುಗಡೆ ಆಗಲಿದ್ದು, ಸೆಪ್ಟೆಂಬರ್ 28ರಂದು ಲಿರಿಕಲ್ ಹಾಡು ಬಿಡುಗಡೆ ಆಗಲಿದೆ. ಇದು ಉತ್ತರ ಕರ್ನಾಟಕ ಶೈಲಿಯ ಡ್ಯಾನ್ಸ್ ನಂಬರ್ ಸಾಂಗ್ ಆಗಿದೆ. ಸುದೀಪ್ ವೆಂಕಟರಾಮಯ್ಯ ಜವಾರಿ ಸಾಂಗ್ ಗೆ ಸಾಹಿತ್ಯ ಬರೆದಿದ್ದಾರೆ. ಸುಪ್ರಿಯಾ ರಾಮ್ ಧ್ವನಿ ನೀಡಿದ್ದಾರೆ.

ಚಿತ್ರವನ್ನು ಬೆಂಗಳೂರು ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ಸುಜಿತ್ ವೆಂಕಟರಾಮಯ್ಯ ಅವರ ಸಾಹಿತ್ಯಕ್ಕೆ ಧೀರೇಂದ್ರ ಡಾಸ್ ಅವರ ಸಂಗೀತ ಸಂಯೋಜನೆ ಇದೆ. ವಸಿಷ್ಠ ಸಿಂಹ ಅವರು ಹಾಡಿರುವ ಟೈಟಲ್ ಸಾಂಗ್ ಅತಿ ಹೆಚ್ಚಿನ ವೀಕ್ಷಣೆಯನ್ನು ಪಡೆದಿದೆ.

ಚಿತ್ರದಲ್ಲಿ ರೂಪ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್ ನಾಯಕಿಯರಾಗಿ ನಟಿಸಿದ್ದಾರೆ. ಪ್ರಭು, ವಿಶ್ವ, ಬದರಿ ನಾರಾಯಣ, ಗುರುದೇವ ನಾಗರಾಜ್ ಇತರರು ಪ್ರಮುಖ ಪಾತ್ರದಲ್ಲಿ ನಡೆಸಿದ್ದಾರೆ. ವಿಲನ್ ಆಗಿ ಪ್ರಮೋದ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!