ಬಾಲಿವುಡ್ ಹೀರೋ ಹೃತಿಕ್ ರೋಷನ್ , ಸೂಪರ್ ಹೀರೋ ಕ್ರಿಶ್-4 ಮೂಲಕ ಡೈರೆಕ್ಟರ್ ಆಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.
ವಾರ್-2 ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಹೃತಿಕ್ ರೋಷನ್ ಕ್ರಿಶ್-4 ಅಖಾಡಕ್ಕೆ ಇಳಿಯಲು ರೆಡಿಯಾಗಿದ್ದಾರೆ. ಮಗನ ನಿರ್ದೇಶನದ ಬಗ್ಗೆ ಮಾತನಾಡಿರುವ ಹೃತಿಕ್ ತಂದೆ ರಾಕೇಶ್ ರೋಷನ್, ಕ್ರಿಶ್ 4 ನಿರ್ದೇಶನದ ಜವಾಬ್ದಾರಿಯನ್ನು ಮಗನಿಗೆ ವಹಿಸುತ್ತಿದ್ದೇನೆ. ನಿರ್ದೇಶಕನ ಟೋಪಿ ಧರಿಸುವ ಅವನನ್ನು ನೋಡಲು ಕಾತರನಾಗಿದ್ದೇನೆ. ಸೂಪರ್ ಹೀರೋ ಮುಂದಿನ ಭಾಗವನ್ನು ಹೃತಿಕ್ ತೆರೆದಿಡಲಿದ್ದಾರೆ ಎಂದಿದ್ದಾರೆ.
‘ಕ್ರಿಶ್’ ಇಂಡಿಯನ್ ಸಿನಿರಂಗದ ಸೂಪರ್ ಹಿಟ್ ಸರಣಿ ಸಿನಿಮಾ. 2006ರಲ್ಲಿ ಕ್ರಿಶ್ ಮೊದಲ ಭಾಗವನ್ನು ಹೃತಿಕ್ ತಂದೆ ನಿರ್ದೇಶಿಸಿ, ನಿರ್ಮಿಸಿದ್ದರು. ಮುಖಕ್ಕೆ ಮಾಸ್ಕ್ ಧರಿಸಿ ಸೂಪರ್ ಹೀರೋ ಆಗಿ ಗ್ರೀಕ್ ಗಾಡ್ ಹೃತಿಕ್ ರೋಷನ್ ದಾಖಲೆ ಬರೆದಿದ್ದರು. ಆದಾದ 12 ವರ್ಷಗಳ ನಂತರ ಬಂದ ಕ್ರಿಶ್-3 ಸಿನಿಮಾ ಗಲ್ಲಪೆಟ್ಟಿಗೆಯಲ್ಲಿ ಭರ್ಜರಿ ಕಮಾಯ್ ಮಾಡಿತ್ತು. ಈ ಚಿತ್ರಕ್ಕೂ ರಾಕೇಶ್ ರೋಷನ್ ಆಕ್ಷನ್ ಕಟ್ ಹೇಳಿದ್ದರು. ಈಗ ರೆಡಿಯಾಗ್ತಿರುವ ಕ್ರಿಶ್-4 ಗೆ ಮಗ ಹೃತಿಕ್ ರೋಷನ್ ಸಾರಥಿ ಅನ್ನೋದೇ ವಿಶೇಷ.
—-

Be the first to comment